ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* गणयति करुणापरावखोसौ शिव शिव तान्यपि वासराणि वेधाः ॥ ಎಂದು ಖೇದದಲ್ಲಿಯೂ, ಹೀಗೆಯೇ ಅನೇಕ ಸ್ಥಳಗಳಲ್ಲಿ ಪ್ರಯೋ ಗಗಳಿರುವುವು, ಮತ್ತು (3 afಕೆ ಜನತೆ ೫ ೫ . व्याजेन वा स्मरेद्यस्तु मम सायुज्यमाप्नुयात् ॥ ಎಂದು (ಪದ್ಮಪುರಾಣದಲ್ಲಿ) ಆಶ್ಚರ್ಯಾದಿಪರವಶರಾದವರು ಶಿವನಾಮಕೀ ರ್ತನದಿಂದ ತಮ್ಮ ಆಶ್ಚರ್ಯಾದಿಗಳನ್ನು ವ್ಯಕ್ತಪಡಿಸುವರೆಂದು ಅಂತಹ ಶಿವನಾಮಕೀರ್ತನವು ಕೂಡ ಮಹಾಫಲವನ್ನು ಕೊಡುವುದೆಂದು ಹೇಳಿದೆ. ಅರಣ್ಯಪರ್ವದಲ್ಲಿರುವ ಶಿವಭಕ್ತಿನಿರೂಪಣಪ್ರಕಾರವನ್ನು ಆ ಪರ್ವದ ಸಂಚಿಕೆಯಲ್ಲಿಯೇ ವಿಚಾರಮಾಡುವೆವು, ಅಂತು ಗ್ರಂಥಮಧ್ಯ ದಲ್ಲಿ ಪ್ರಕರಣಾನುಸಾರವಾಗಿ ಇತರರ ಶಿವಭಕ್ತಾದಿಗಳನ್ನು ಈತನು ವಿವರಿಸಿರುವದರಿಂದಲೇ ಕವಿಯು ಶಿವಭಕ್ತನೆಂದು ಹೇಳಲು ಎಷ್ಟು ಮತ್ರವೂ ಅವಕಾಶವಿರುವುದಿಲ್ಲ. ಒಂದು ವೇಳೆ ಶಿವಭಕ್ತನೆಂದು ಹೇಳಿ ಬಹುದಾದರೂ ಅತಿಯೆಂದು ಹೇಳಲು ಏನೂ ಸಾಧಕ ತೋರುವುದಿಲ್ಲ. ಶಿವಭಕ್ತರೆಲ್ಲರೂ ಆದೈತಿಗಳಲ್ಲ. ಅದೈತಿಗಳಲ್ಲರೂ ಶಿವಭಕ್ತರಲ್ಲ. ಅದ್ಭತಿಗಳಲ್ಲಿ ವಿಷ್ಣು ಭಕ್ತಾದಿಗಳು ಇರುವುದೆಂಬುದು ಮತವಿವೇ ಕವುಳ್ಳವರಿಗೆ ವಿಶದವೆ. ಅಲ್ಲದೆ ಅತಸಿದ್ಧಾಂತದ ಪರಮಪ್ರಮೇ ಯವಾದ ಜೀವಬ್ರಹ್ಮವೇ ಮೊದಲಾದುವುಗಳನ್ನು ಈ ಗ್ರಂಥದಲ್ಲಿ ಯಾವ ಭಾಗದಲ್ಲಿಯೂ ನಿರೂಪಿಸಿರುವುದಿಲ್ಲ. ಹೀಗೆ ಇರಲು ಈ ಕವಿಯು ಅಧೋತಿ ಯೆಂದು ಹೇಗೆ ಹೇಳಬಹುದು ? ಈ ಕವಿಯು ಯಾವರೀತಿಯಿಂದ ಈ ಭಾರತರಚನೆಯಂ ಮಾಡ ಲುಜ್ಜಗಿಸಿದನೋ ಆರೀತಿಯನ್ನು ಕುರಿತು ಗದುಗಿನ ಪ್ರಾಂತದವರು ಹೇಳುವ ಕಥೆ ಏನೆಂದರೆ