ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ಈ ಕವಿಯು ಮೊದಲು ಕೋಳಿವಾಡು ಎಂಬ ಗ್ರಾಮದ ಶಾನ ಭೋಗನಾಗಿ ಗದುಗಿನ ವೀರನಾರಾಯಣಸ್ವಾಮಿಗೆ ಭಕ್ತನಾಗಿದ್ದನು. ಈತನನ್ನು 'ನಾರಣಪ್ಪ' ಎಂದು ಕರೆಯುತ್ತಿದ್ದರು. ಈತನು ಶ್ರೀಪೀ ರನಾರಾಯಣಸಾಮಿಯ ಭಕ್ತನಾದುದರಿಂದ ಅಂತಹ ಭಗವಂತನ ವಿಷ ಯದಲ್ಲಿ ಏನಾದರೂ ಒಂದು ಗ್ರಂಥವನ್ನು ಬರೆಯಬೇಕೆಂಬ ಅಭಿಲಾಷೆ ಯಿಂದ ಭಗವಂತನನ್ನು ತನಗೆ ಈಕಾರ್ಯಕ್ಕೆ ತಕ್ಕ ಶಕ್ತಿಯನ್ನೊದಗಿ ಸಿಕೊಡಲು ಪ್ರಾರ್ಥಿಸುತ್ತಿದ್ದನು. ಹೀಗಿರಲು ವೀರನಾರಾಯಣಸ್ಕಾ ಮಿಯು ಒಂದುದಿನ ಈತಗೆ ಸ್ಪಷ್ಟ ದಲ್ಲಿ ಕಾಣಿಸಿಕೊಂಡು ಉಪದೇಶಿ ನಿದಪ್ರಕಾರ ಈ ನಾರಣಪ್ಪನು ಲಕ್ಷಬ್ರಾಹ್ಮಣಸಂತರ್ಪಣೆ ನಡೆಯುವ ಸ್ಥಳವನ್ನು ವಿಚಾರಿಸುತ್ತಿರುವಾಗ ಆಸಪಾಪಪ್ರಾಂತದಲ್ಲಿ ಒಬ್ಬಾನೊಬ್ಬ ಧಾರ್ಮಿಕನು ಶಿಕ್ಷಬ್ರಾಹ್ಮಣಸಂತರ್ಪಣೆಯನ್ನು ನಡೆಸುವನೆಂದು ತಿಳಿದು ಬಂತು, ಅಲ್ಲಿಗೆ ಈತನು ಪ್ರಯಾಣವಂ ಮಾಡಿ ಆಸಂತರ್ಪಣಸ್ಥಳದಲ್ಲಿ ಸೇರಿರುವ ಬ್ರಾಹ್ಮಣಸಮುದಾಯದೊಳಗೆ ತನಗೆ ಸಪ್ರ ದಲ್ಲಿ ಸೂಚಿಸ ಲ್ಪಟ್ಟ ಲಕ್ಷಣಗಳುಳ್ಳ ಬ್ರಾಹ್ಮಣನನ್ನು ಎಷ್ಟು ಅನ್ನವಿಸಿದಾಗ್ಯೂ ಕಾಣದೆ, ನಿರಾಶನಾಗುವ ಸಮಯದಲ್ಲಿ ನಡೆದುದೇನಂದರೆ -ಒಬ್ಬನು ಬಾಳೆಯ ಎಲೆಯನ್ನು ಹಾಕುತ್ತಲೂ ಮತ್ತೊಬ್ಬನು ದೊನ್ನೆ ಗಳನ್ನು ಕೊಡುತ್ತಲೂ ಇರುವಾಗ ಹುಡುಗರು ತಮತಮಗೆ ಬೇಕಾದ ಎಲೆದೊನ್ನೆ ಗಳನ್ನು ಕುರಿತು ವಿವಾದವನ್ನು ಮಾಡುತ್ತಿದ್ದಾಗ ಅಲ್ಲಿನ ಜನಗಳು ಎಷ್ಟು ಸಮಾಧಾನವನ್ನು ಮಾಡಿದಾಗ ಕೇಳದೇ ಇರುವ ಒಬ್ಬ ಹುಡುಗನನ್ನು ಕುರಿತು “ ಏನೋ ನೀನು ದುರ್ಯೋಧನನಿಗಿಂತ ಹೆಚ್ಚು ದುರಭಿಮಾನ ವುಳ್ಳವನಾಗಿದೀಯೆ " ಎಂದು ಎರೆದೊನ್ನೆಗಳನ್ನು ಕೊಡುವವರು ನುಡಿ ದರು, ಅದನ್ನು ಕೇಳಿ ಅಲ್ಲಿ ಸವಿಾಪದಲ್ಲಿದ್ದ ಒಬ್ಬ ಬ್ರಾಹ್ಮಣನು ತನ್ನ ಕಣ್ಣಿನಿಂದ ನೀರನ್ನು ಸುರಿಸಿದನು. ಅದನ್ನು ನೋಡಿ ಈ ನಾರಣಪ್ಪ ನು ತನ್ನ ಮನಸ್ಸಿನಲ್ಲಿ ವಿಚಾರಮಾಡತೊಡಗಿದನು. ಈ ಬ್ರಾಹ್ಮಣನಿಗೆ ದುರ್ಯೋಧನನ ಹೆಸರನ್ನು ಕೇಳುತಲೆ ಕಣ್ಣಿನಲ್ಲಿ ನೀರು ಸುರಿಯಲು ಕಾರಣವೇನು ? ಮಹಾಪಾಪಿಯಾದ ದುರ್ಯೋಧನನ ಹೆಸರು ನೆನಪಿಗೆ