ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

viii ಸುತ್ತಾ ಬಂದನು. ದಶಪರ್ವಗಳು ಮುಗಿದುವು. ಸಂತೋಷವಶ ದಿಂದ ಈ ವರ್ತಮಾನವನ್ನು ತನ್ನ ಸ್ನೇಹಿತನೊಡನೆ ಹೇಳಿಕೊಂಡುದ ರಿಂದಲೇ ಆತಗೆ ಮರಣವೂ ಸಂಭವಿಸಿತೆಂದು ಹೇಳುವರು. ಇದೇ ರೀತಿಯಾಗಿ ಈತನು ಅಕ್ಷರಾಭ್ಯಾಸವನ್ನು ಕೂಡ ಮಾಡ ವವನಾಗಿದ್ದು ಕೇವಲ ದೈವಾನುಗ್ರಹದಿಂದೇ ಗ್ರಂಥವನ್ನು ರಚಿಸಿರುವ ನೆಂದು ಅನೇಕರು ಅನೇಕವಿಧವಾಗಿ ಹೇಳುವರು, ಇವುಗಳಲ್ಲಿ ಆವುದು ಸಮೂಲವೋ ಆವುದು ನಿರ್ಮೂಲವೋ ಗೊತ್ತಾಗುವುದು ಕಷ್ಟ್ಯವಾಗಿದೆ. ಅದು ಹೇಗಿದ್ದರೂ ಇರಲಿ, ಈ ಗ್ರಂಥಸ್ಥಿತಿಯನ್ನು ಪರ್ಯಾಲೋಚಿಸಿ ವಿಮರ್ಶವಂ ಮಾಡುವಾಗ ಈ ಕಪಿಮು' ವೀರನಾರಾಯಣಭಕ್ತನೆಂದು ನಿಶಿ ತವಾಗಿ ತೋರಿಬರುತ್ತದೆ. ಅದ್ರೆತಿಯೆನಲು ತಕ್ಕ ಸಾಧಕಗಳಾ ವವೂ ಕಾಣಬರುವುದಿಲ್ಲ, ಮತ್ತು ಕೆಲವರು ಹೇಳುವಂತೆ ವೈಪ್ಪ ವ ಬ್ರಾಹ್ಮಣನೆಂದು ನಂಬುವುದಕ್ಕೆ ಕೆಲವು ಸಾಧಕಗಳೂ ದೊರೆಯುವುವು. ಹೇಗೆಂದರೆ:- ಪೀಠಿಕಾಸಂಧಿಯಲ್ಲಿ 12ನೆಯ ಪದ್ಧವುವಂದಿತಾಮಳಚರಿತನವರಾ ನಂದ ಬದುಕುಲಚಕ್ರವರ್ತಿಯ ಕಂದ ನತಸಂಸಾರಕಾನನಘನದವಾನಳನು | ನಂದನಂದನಸನ್ನಿ ಭನು ಸಾ| ನಂದದಿಂದವೆ ನಮ್ಮ ವನ ಕೃಪೆ | ಯಿಂದ ಸಲುಹುಗೆ ದೇವ ಜಗದಾರಾಧ್ಯಗುರುರಾಯ || ಎಂದು ಇರುವುದು, ಈ ಕಪಿಯು ಮೊದಲಿನ ಮೂರು ಪದ್ಯಗ ೪೦ದ ವೀರನಾರಾಯಣನನ್ನು ನಾಲ್ಕನೆಯ ಸದ್ಯದಿಂದ ಲಕ್ಷ್ಮಿಯನ್ನು ಐದನೆಯ ಪದ್ಯದಿಂದ ಬ್ರಹ್ಮನನ್ನು ಆರನೆಯ ಪದ್ಯದಿಂದ ಸರಸ್ವತಿ ಯನ್ನು ಏಳನೆಯ ಪದ್ಯದಿಂದ ಮಹಾದೇವನನ್ನು ಎಂಟನೆಯ ಪದ್ಯ ದಿಂದ ಶಾರ್ವತಿಯನ್ನು ಒಂಬತ್ತನೆಯ ಪದ್ಯದಿಂದ ಗಣಪತಿಯನ್ನು