ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅ ವ ತ ರ ಣಿ ಕೆ ಈ ಪುಸ್ತಕವು ಕರ್ಣಾಟಕಮಹಾಭಾರತದ ಮೂರನೆಯ ಸಂಚಿ ಕೆಯಾಗಿ ಇರುವುದು. ಈ ಗ್ರಂಥಕಾರನಾದ ಕುಮಾರವ್ಯಾಸನ ವಿಷ ಯದಲ್ಲಿಯೂ ಆತನ್ಯ, ಭಾವಾವಿಷ್ಟಯದಲ್ಲಿಯೂ ಆವಶ್ಯಕವಾಗಿ ತಿಳಿ ಸಬೇಕಾದ ವಿಷಯಗಳಲ್ಲಾ (ಕನ್ನ ಡ ಸೆಕರ್ಷ ನಂಬರು 3 – 4ನೆಯ ವುಗಳಾದ ) ಉಪೋದ್ಘಾತಸಂಚಿಕೆ ಮತ್ತು ಸಂಭವಪರ್ವ ಇವುಗಳ ಅವತರಣಿಕೆಯಲ್ಲಿ ಹೇಳಲ್ಪಟ್ಟಿವೆ. ಆದುದರಿಂದ ಈ ಪುಸ್ತಕದಲ್ಲಿ ಅಡಗಿ ರುವ ಗ್ರಂಥಕ್ಕೆ ಸಂಬಂಧಿಸಿದ ವಿಶೇಷಾಂಶಗಳನ್ನು ಮಾತ್ರ ಹೇಳುವುದು ಈಗ ಆವಶ್ಯಕವಾಗಿದೆ. ಈ ಪುಸ್ತಕದಲ್ಲಿ ಸಭಾಕ್ರಿಯಾಪರ್ವ 1 ಸಭಾಖ್ಯಾನಪರ್ವ 2 ರಾಜಸೂಯಾರಂಭಪರ್ವ 3 ಜರಾಸಂಧವಧಪರ್ವ 4 ದಿಗಿಜಯಪರ್ವ 5 ರಾಜಸೂಯಿಕಪರ್ವ 6 ಅರ್ಘಾಹರಣಪರ್ವ 7 ಶಿಶುಪಾಲವಧಪರ್ವ 8 ದೂತಪರ್ವ 9 ಅನುನ್ಸೂತಪರ್ವ 10 ಎಂದು ಹತ್ತು ಪರ್ವಗಳು ಅಡಗಿವೆ. - ದಿಗ್ವಿಜಯಪರ್ವದಲ್ಲಿ ರಾಜಸೂಯಯಾಗದ ಕ್ರಮಗಳನ್ನು ವರ್ಣಿ ಸುವಾಗ, ಯಾಗದಲ್ಲಿ ಕೆಲವು ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಸ್ಮರಪುರುಷಮೃಗವೆಂಬ ಪ್ರಾಣಿಯನ್ನು ಕರೆತರುವುದಕ್ಕಾಗಿ ಭೀಮ ಸೇನನನ್ನು ಕಳುಹಿಸಿದ ಹಾಗೂ, ಭೀಮಸೇನನು ಅದನ್ನು ಕರೆತಂದು ಕಾರ್ಯನಿರ್ವಾಹವನ್ನು ಮಾಡಿದ ಹಾಗೂ ವರ್ಣಿಸಲ್ಪಟ್ಟಿದೆ. ಈ ಕಥೆಯು ಸಂಸ್ಕೃತಮಹಾಭಾರತದಲ್ಲಿ ಕಾಣುವುದಿಲ್ಲ. ಆದರೆ ಈ ಕಥೆಯು ಜೈಮಿನಿಭಾರತದಲ್ಲಿ ಇರುವುದಾಗಿ ಕೂರೇಶವಿಜಯದ ಮರ ನೆಯ ಶ್ಲೋಕದಲ್ಲಿರುವ “ ಹನುಮತಃ ಪುಚ್ಛರೋಮೇಶ್ವರಾ...?” ಎಂಬ ಪದಗಳ ವ್ಯಾಖ್ಯಾವಸರದಲ್ಲಿ ನಿರೂಪಿಸಲ್ಪಟ್ಟಿದೆ. ಆದರೆ ಆ