ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೩೬] ಸುಭದ್ರಾಹರಣಪರ್ವ 268 ನಂದಗೋಪಯಶೋದೆವನಿತೆಯ ಕಂದ ನೀನಿದನರಿತೆನೆಂಬುದ | ಮಂದಮತಿಗಳಿಗುಸುರ ಬೇಡಿದು ನೀನು ಸರ್ವಜ್ಞ || ೫೧ ಎಂದುದಕೆ ಮುದವಡೆದು ಪಾರ್ಥo ಗೆಂದ ರೈವತಶೈಲದಲ್ಲರ ವಿಂದಸಖನುದಯದಲಿ ಬಂದಿರು ಮುಸಲಿಯ್ಕೆತಂದು | ಮಂದಿರಕೆ ಬರಹೇಳಿದೊಡೆ ಬಾ ಮುಂದೆ ನಿನ್ನಯ ಸ್ವಾರ್ಥ ಸಿದ್ದಿಪು ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ | ೫೦ ನಿಲಿಸಿ ಮರಳಿದ ಸತ್ಯಭಾಮಾ ನಿಳಯಕಾಗಲು ಬಿಜಯಮಾ ಡಲು ತರಣಿ ಬಂದನು ಪೂರ್ವಶೈಲಕ್ಕಿ ಮುರವೈರಿ | ನಲಿದು ಪ್ರಾತಃಕಾಲಕರ್ಮವ ಜಲದಲರ್ಸ್ಥ್ಯವನೆತ್ತಿ ಸೂರ್ಯ ಗೆಲಿದು ಯಾದವದೇವನಿತ್ತಲು ಬಂದನೋಲಗಕೆ || ೫೩ ಪರಮಹಂಸನ ಸುಳಿವು ಸಾಕ್ಷರಿ ತ್ಪರಮಪುರುಷನ ಸಂಗದಲಿ ಯತಿ ವರನ ದರುಶನ ಲೇಸು ನಮ್ಮಯ ನಗರಿಗೈತರಲು | ಹರಹಿದನು ಹರಿ ವಾರ್ತೆಯನು ತಾ ನಖಿಯದಂತಿರೆ ಕೇಳಿ ನೀಲಾಂ ಬರನು ಬಹಳೋತ್ಸವದಲೈದಿದ ನರನ ಹೊರೆಗಂದು | ೫೪ ಬರಲಿಕಾತನು ತನ್ನ ಕಾಲದ ನಿರುತಸದನುಷ್ಠಾನ ಮಾಡಿಯೆ ಗಿರಿಯ ತಪ್ಪಲ ಮರದ ನೆಳಲಲಿ ನೀತಿಪಾವನನು |