ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ ೧

  • ಸೂಚನೆ.

ಪುತ್ರಕಾಮೇಷ್ಟಿಯನು ಮಾಡಿದ ಕಿಯೋತ್ತಮ ಕಮಲಮಿತ್ರನ ಗೋತ್ರದ ಹರಿಶ್ಚಂದ್ರಭೂಭುಜನುರ್ವಿವಧ್ರದಲಿ | ಹರಿಶ್ಚಂದ್ರನ ಕಥೆ. ಕೇಳು ಜನಮೇಜಯ ಧರಿತ್ರಿ ಪಾಲ ಪುತ್ರನ ನೀನು ಪಡೆವೊಡೆ ಕೇಳುವುದು ಹರಿಶ್ಚಂದ್ರಭೂಪನ ಯಾಗನಿರ್ಣಯವ | ಹೇಳುವೆನು ದಿನಕರನ ವಂಶದ ಲೋಲಮತಿ ಧರಣಿಶ ವರುಣಗೆ. ಬೇಳಿದೀನರಮೇಧಯಾಗದ ಕಥೆಯ ಕೌತುಕವ || ಪರಮಪುರಷೋತ್ತಮನ ದೆಸೆಯಿಂ ಸರಸಿರುಹಸಂಭೂತನಾತನ ಹೊರೆಯಲುದುಭವಿಸಿದನು ಕಶ್ಯಪ ಕಶಪಾಂಗದಲಿ || ತರಣಿ ಜನಿಸಿದ ಜನಿಸಲಾತನ ವರಕುಮಾರಕನಾಗಿ ಜನಿಸಿದ ನಿರುತವೈವಸ್ಸತನು ವೈವಸ್ಸತನಿಗಿಕ್ಷಾಕು |

  1. ಗ, ಘ, ಜ, ಗುರ್ತಿನ ಕರ್ಣಾಟಕ ಮಹಾಭಾರತ ಪುಸ್ತಕ ಪ್ರಕಾರ ಆದಿಪರ್ವದ೩-೪ ನೇ ಸಂಧಿಗಳ ಮಧ್ಯ ದಲ್ಲಿ ಈ ಸಂಧಿಯು ದೊರೆಯುತ್ತದೆ.