ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೩] ಬಕವಧಪರ್ವ 65 ಮನದಿ ಹರಿಯನು ನೆನೆದು ದರ್ಭೆಯ ನನುಕರಿಸಿ ಶ್ರೀಗೋಪಿಚಂದನ ವಿನುತತಿಲಕವ ಧರಿಸಿ ಕುಂತಿಯ ಚರಣರೇಣುವನು | ೫೬ ಶಿರವ ತುಂಬಿಯ ಧರ್ಮಪುತ್ರನ ಚರಣಕೆಅಗಿಯು ಭೀಮ ಜನನಿಯ ನಿರುತವಾಕ್ಯಾಂಶಯದಿ ಬಂದನು ಭೂಪ ಕೇಳೆಂದ || ಹರುಷ ಮಿಗೆ ಹರಿತಂದು ವಿಪ್ರನ ವರಗೃಹದ ಪಾಕವನು ಮುದದಲಿ ಹರಿಯೊಳರ್ಪಿಸಿ ಭೀಮ ಪಾರಣೆಯನ್ನು ಮಾಡಿದನು | ೫೬ ಮರುತಸುತನಾಫೋಶಗೊಳುತಲಿ ನಿರುತ ಪ್ರಾಣಾಹುತಿಯು ನಡೆಸಲು ಸರಿಯಿತ್ತೆ ಸರ್ವಾನ್ನ ಷಡುರಸಚ್ಛತವು ಮೊದಲಾಗಿ | ಪರಿಹರಿಸಿ ಕೊಂಡಿರಲು ಭೂಸುರ | ವರಯುವತಿ ಯಿನ್ನೇನ ಬಡಿಸುವೊ ಡರಿದು ತಾನೆನುತಿರಲು ಕುಂತೀದೇವಿ ನಡೆತಂದು | ೫v ಮರುತಜನ ರೂಪನುದೊರಳಿನ ಹೊಲೆಯ ತವುಡನು ತಂದು ಕೈಯ್ಯಲಿ ನಿರುತವೀಯಲು ಮೆಲಿದು ತೇಗುತ ದಣಿದು ಕೈತೊಳದ | ಧರಣಿಪತಿ ಕೇಳೆ ತಾಯಿ ಯಿಕ್ಕಿದ ನಿರುತ ತವುಡೇ ಪಥ ಧರೆಯಲಿ ಪರರು ನೀಡಿದ್ದ ಮೃತ ವಿಷ ಮಕ್ಕಳಿಗೆ ಕೇಳಂದ | ೫೯ ಹರಸಿ ಸುತನನು ಕಳುಹ ಭಂಡಿಯ ಹರಿದು ಸ್ಥಳದೇಹದನು ತಾ ಬಲು ಹುರಿಯ ಹಗ್ಗವ ಹಿಡಿದು ಜಡಿದನು ಹೊರಿಕೋಣಗಳ |