ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪತ್ರವ್ಯವಹಾರ. ಈ ಪ್ರಕರಣದಲ್ಲಿ ಬರುವ ಅಭಿಪ್ರಾಯಗಳಿಗೆ ನಾವ್ಯ ಬಾಧ್ರರಲ್ಲ.– ವಾಲ್ಮಯಕಾರ್ಯದರ್ಶಿ.] ಸಂದೇಹಗಳ, ಸಜನೆಗಳ. ಕರ್ಣಾಟ- ಮಹಾರಾಷ್ಟ್ರ ಒಂದುದೇಶದವರು ತಮ್ಮ ರಾಷ್ಟ್ರಕ್ಕೆ ಕರುನಾಡೆಂಬ ಹೆಸರಿಡಬೇಕಾದರೆ ಅವರಿಗೆ ಮಹಾರಾಷ ದವರ ಮೇಲುಪಂಕ್ತಿಯೇ ಬೇಕಾಗಿರಲಿಲ್ಲ. ಆದರೂ ಕರ್ಣಾಟ ವೆ೦ಬ ನಾಮವು ಹಳೆಯದೋ, ಮಹಾರಾಷ್ಟ್ರವೆಂಬುದು ಮುಂಚಿನದೋ, ಎಂದು ನಿರ್ಧರಿಸಲಾದರೆ ಉತ್ತಮವೇ, ಅಶೋಕನ ಐದನೆಯ ಶಾಸನದಲ್ಲಿ ರಸ್ತಿಕ, ಪಿತ ಸಿಕ, ಈ ಜನರ ಸ್ಮರಣೆಯಿದೆ. ಕಳೆದ ವರುಷದ ಪರಿಷತೃತ್ರಿಕೆಯ ಚೈತ್ರದ ಸಂಚಿ ಕೆಯ ೨೦ ನೆಯ ಪುಟವನ್ನು ನೋಡುವುದು, ರಾಷ್ಟ್ರೀ ಕರೇ ಮರಾಟಿಗರೆಂಬುದಕ್ಕೆ ಸಂದೇಹವಿಲ್ಲ. ಆದರೆ ಇಲ್ಲಿ ಮಹತ್ಯಸೂಚಕ ವಿಶೇಷಣವಿಲ್ಲ. ಮುಂಬಯಿಪ್ರಾಂತ ದಲ್ಲಿ ಸಿಕ್ಕಿದ ಸುಮಾರು ೨೦೦ ವರ್ಷ ಕ್ರಿಸ್ತ ಪೂರ್ವದ ಶಾಸನಗಳಲ್ಲಿ ಮಹಾರಠಿ, ಮಹಾರನೀ, ಎ೦ಬ ಉಪನಾಮಗಳು ಕಂಡುಬಂದಿವೆ. ಈ ಮಾತುಗಳಿಗೆ ಮಹಾ ರಥಿ ಎಂಬ ಅರ್ಥವನ್ನು ಕಲ್ಪಿಸುವುದು ಸರಿಯಲ್ಲವೆಂದೂ, “ ಮಹಾರಾಷ್ಟ್ರ " ಶಬ್ದವೇ ಇಲ್ಲಿ ದೊರಕುತ್ತದೆಂದೂ, ಮ। ಕಾಣೆಯವರು ಈಚೆಗೆ ಪ್ರತಿಪಾದಿಸಿದ್ದಾರೆ. ಮಹಾ ಭಾರತದ ಈಗಿನ ಪಾಠಾಂತರವು ಇದಕ್ಕೂ ಮೊದಲು ಪ್ರಚಲಿತವಾಗಿತ್ತೆಂದು ಆಧು ನಿಕ ಪಂಡಿತರು ಅಭಿಪ್ರಾಯಪಡುವುದಿಲ್ಲ. ಹಾಗಾದರೆ ಮಹಾಭಾರತದಲ್ಲಿ ಕರ್ಣಾ ಟರು ಕೀರ್ತಿತರಾಗಿ, ಮಹಾರಾಷ್ಟ್ರವೆಂಬ ಮಾತು ತಲೆದೋರದಿರಲಿಕ್ಕೆ ಕಾರಣವೇನು ? ದಾಕ್ಷಿಣಾತ್ಯರು ಮಾರಾಷ್ಟ್ರವೆಂದು ಹೇಳಿಕೊಂಡ ಪ್ರದೇಶದಲ್ಲಿ ಹಲವು ಜನತೆಯವ ರಿದ್ದು, ಇವರ ಹೆಸರುಗಳನ್ನು ಬೇರೆ ಬೇರೆಯಾಗಿ ಕವಿ ಹೇಳಿರುವುದರಿಂದ, ಆರ್ಯಾ ನರ್ತದ ಪ್ರಖ್ಯಾತರಾಷ್ಟ್ರಗಳನ್ನು ಪ್ರತಿಭಟಿಸುವಂತೆ ಕೇಳಿಸುವ ಅಭಿಧಾನವನ್ನು ಅವನು ತಿರಸ್ಕರಿಸಿರಬಹುದೆಂದು ನನ್ನ ಮತಿಗೆ ಕಾಣುತ್ತದೆ. ದೇಶೀರಾ ವಲಿಯ ಶಬ್ದಗಳು. ದೇಶೀರತ್ತಾವಲಿಯಿಂದ ಆಷಾಢದ ಸಂಚಿಕೆಯಲ್ಲಿ ಸಂಗ್ರಹಿಸಿ ಹಾಕಿದ ನಾಮ ಗಳಲ್ಲದೆ, ಇನ್ನೂ ಕೆಲವನ್ನು ವಾಚಕರಿಗೆ ಅರ್ಪಿಸಬಹುದು. ' ಣಣೇಜೋಸ್ಕೋ ೧೦೦