ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Tು' { ? : ”, ಪತ್ರ ವ್ಯವಹಾರ. - ೧ ಲೈ ೧೯೧೮. ಧೂಪಮಿತ ಹಗನ್ನಡ, ಬೆದಂಡೆಚತ್ತಾಣ, ದಕ್ಷಿಣೋತ್ತರಮಾರ್ಗ, ಮುಂತಾದ ವಿಷಯಗಳನ್ನು ಕಂಡು ಬಹು ಕೌತುಕವಾಯಿತು, ಈಗಿನ ದಿವಸಗಳಲ್ಲಿ ದಕ್ಷಿಣೋ ತರಮಾರ್ಗಗಳಲ್ಲದೆ, ಪೂರ್ವಪಶ್ಚಿಮಮಾರ್ಗಗಳನ್ನು ಬಳ್ಳಾರಿ ಕನ್ನಡ ಜಿಲ್ಲೆಗಳ ಭಾಷೆಗಳನ್ನು ಕುರಿತು ಅನೇಕರು ಬರೆಯುವರು. ಹೀಗಿದ್ದು, ನೃಪತುಂಗನ ಪರಿ ಸ್ಪುಟವಚನಗಳಲ್ಲಿ ನನಗೆ ಒಂದಿಷ್ಟು ಅವಿಶ್ವಾಸವೂ ತಟ್ಟಲಿಲ್ಲ. ಆದರೆ ಈ ಮಾರ್ಗ ಭೇದಗಳು ಎಷ್ಟು ಕಾಲದವರೆಗೆ ನಿಂತಿದ್ದುವು ? ಪಂ ಪಭಾರತದಲ್ಲಿ, ನೋಟ್ಸು ದು (II, 65): ಬೇಚ್ಛರು (II, (67); ಎಡೆಯಾ (I, 100)-ಮುಂತಾದ ಕ್ರಿಯಾ ರೂಪಗಳು ದೊರಕುತ್ತವೆ. ಆದಿಪುರಾಣದಲ್ಲಿಯೂ, ನೋಟ್ಸ, ಬೇಚ್ಛ, ಕುಳಿ ರ್ಕೊಪ್ಪ (I, 75; ST, S0)-ಇಂತಹ ರೂಪಗಳು ಕಾಣುತ್ತವೆ. ಮಾಕ್ಷಿ ಎಂಬ ಮಾತು ಇನ್ನೂ ಸಾಧಾರಣವಾಗಿದೆ. ಹಾಗಾದರೆ ಪಂಪನ ತಿರುಳನ್ನಡವು ದಕ್ಷಿಣ ಮಾರ್ಗಕ್ಕೆ ಸೇರಿದುವಾಯಿತು. ಆದರೆ ನೃಪತುಂಗನು ಕೊಟ್ಟಿರುವ ಇನ್ನೊಂದು ಉದಾಹರಣದ ದೃಷ್ಟಿಯಿಂದ ನೋಡೋಣ. * ಇಸುವ ' ದಕ್ಷಿಣಮಾರ್ಗ, ' ಇಪ? ಉತ್ತರಮಾರ್ಗ, ' ಇಪ್ಪ • ಉತ್ತರೋತ್ತರ ಮಾರ್ಗವೋ ? ಆದಿ ಪುರಾಣದಲ್ಲಿ, ಸೊಗ ಯಿಸ (II, (0) : ಬಣ್ಣ ಸೆಂ (11, 76) : ಲಲ್ಲಯಪ (III, 43) : ಓಲಗಿಪುದು (V, 36) : ಕೊಲಿಸಂ (V, 51); ಎನಿಪುದು (1, 82); ಪುಯೂಲಿಪ (XII, 76); ಬಿನ್ನವಿಸರ್ (SIS, 10). ಈ ಉತ್ತರಮಾರ್ಗದ ರೂಪಗಳು ಮಾತ್ರವಲ್ಲ, ಶೋಕಿಪ್ಪೆ (III, 55)-ಈ ಉತ್ತರೋತ್ತರ ಮಾರ್ಗದ ರೂಪವು ಹೇಗೆ ಬಂದಿದೆ ? ಮಧ್ಯ ಪ್ರದೇಶದ ತಿರುಳನ್ನಡದಲ್ಲಿ ಎರಡು ಮಾರ್ಗಗಳು ಒಟ್ಟುಗೂಡುವುದು ಸಹಜವೆನ್ನು ತೀರೋ ? ಶಿವಮೊಗ್ಗೆಯ ಶಾಸನದಲ್ಲಿ ' ಪುರುಡಿಪ್ಪಂ' (ಕವಿಚರಿತೆ, ಪು. ೭೯) ಈ ಉತ್ತರೋತ್ತರಮಾರ್ಗದ ರೂಪವು ಹೇಗೆ ಬ೦ದಿದೆ ? ಸಂಪರಾಮಾಯಣದ ಪ್ರಥಮ ವೃತ್ತದಲ್ಲಿರುವ ' ನನಗೆ ಉತ್ತರಮಾರ್ಗವಂತೆ. ಎರಡನೆಯ ಪದ್ಯದಲ್ಲಿ “ ಎ೦ಮೊಳ್ ಇದೆಯಷ್ಟೆ? ಹೀಗಿರಲು, ಕವಿಗಳು ದಕ್ಷಿಣೋತ್ತರಮಾರ್ಗಭೇದ ನನ್ನು ಎಷ್ಟು ಕಾಲದ ತನಕ ಅನುಸರಿಸಿದರು, ಆವಾಗ ಬಿಟ್ಟು ಬಿಟ್ಟರು, ಎಂಬುದನ್ನು ಹೇಗೆ ಹೇಳಬಹುದು ? ಕೃಷ್ಣಾನದಿಯ ಸವಿಾಪದಲ್ಲಿ ಹುಟ್ಟಿ ಬಳೆದ ರನ್ನನ ಅಜಿತ ತೀರ್ಥಕರಪುರಾಣದಲ್ಲಿ ಯೂ - ನಮಗೆ (1, 2) ಮುಂತಾದ ಉತ್ತರಮಾರ್ಗದ ಲಕ್ಷಣಗಳಿರುವುವುಲ್ಲದೆ, ನೋಟ್ಸ್ (I, 27), ಮಾಪ್ಪಿ (II, 80) ಮುಂತಾದ ದಕ್ಷಿಣಮಾರ್ಗದ ವಚನಗಳೂ ಸಿಕ್ಕುತ್ತವೆ. ಪಂಪ ಪೊನ್ನ ನಾಗವರ್ಮರ ಜನ್ಮಸ್ಥಾನಗಳು. ಸಂಪನ ಪೂರ್ವಜರು ವೆಂಗಿಮಂಡಲದಲ್ಲಿದ್ದ ವೆಂಗಿಪಳುವಿನ ನಿವಾಸಿಗಳಾಗಿದ ರೆಂದು ಅವನ ಭಾರತದಲ್ಲಿ ಹೇಳಿದೆ. ಪೊನ್ನನ ಶಾಂತಿ ಪುರಾಣವನ್ನು ನಾನು ನೋಡಿಲ್ಲ. ಇವನ ಪೋಷಕರ ತಂದೆ ವೆಂಗಿವಿಷಯದಲ್ಲಿದ್ದ ಪುಂಗನೂರಲ್ಲಿ ವಾಸ ವಾಗಿದ್ದನೆಂದು ರನ್ನನ ಅಜಿತ ಪುರಾಣದಿಂದ ಕಾಣುತ್ತದೆ. ಹೆಚ್ಚಿನ ಅಂಶಗಳು ರಾ. ಬ. ನರಸಿಂಹಾಚಾರ್ಯರ ಕವಿಚರಿತೆಯಲ್ಲಿಯೂ ತೋರುವುದಿಲ್ಲ. ಈ ವಿದ್ವಾಂಸರು ೧೦೨