ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರಿಷತ್ರಿಕೆ.1 ಪತ್ರವ್ಯವಹಾರ [ಏಪ್ರಿಲ್-ಜೂಲೈ ೧೯೧೮. - - - - - - - - - - .. ಅದಂತಿರಲಿ. ಸಂಪನು ನಿಗದಿಸಿದ ವಸಂತ, ಕೊಟೂ ರು, ನಿಡುಗುಂದಿ, ವಿಕ್ರಮಪುರ : ನಾಗವರ್ಮನ ಸಯ್ಯಡಿ : ಪೊನ್ನ ರನ್ನರು ಕೀರ್ತಿಸಿದ ಪುಂಗನೂರುಇವು ಎಲ್ಲಿವೆ ? ಒಂದೇ ಹೆಸರಿನ ಗ್ರಾಮಗಳು ಹಲವು ಕಡೆಗಳಲ್ಲಿರಬಹುದು, ವಸಂತ, ಕೊಟ್ಟೂರು ಎಂ ಹೆಸರಿನ ಗ್ರಾಮಗಳು ಗೋದಾವರಿ ಜಿಲ್ಲೆಯಲ್ಲಿವೆಯಂತೆ. ಆದರೆ ಅವು ವೆಂಗಿಪುರದಿಂದ ಎಷ್ಟು ದೂರ ಮತ್ತು ಯಾವ ದಿಕ್ಕಿನಲ್ಲಿ ವೆಯೋ ತಿಳಿಯಲಿಲ್ಲ. ಕರ್ಣಾಟಕವಿಗಳು ಹೇಳಿದ ಆರುಗ್ರಾಮಗಳು ವೆಂಗಿಮಂಡಲಕ್ಕೆ ಸೇರಿರಬೇಕೆಂದು ಮೇಲೆ ತರ್ಕಿಸಿದ ಕರ್ಣಾಟದ ಭಾಗದಲ್ಲಿ ಕವಿಗಳ ಮಾತುಗಳಿಗೆ ತಾಳೆ ಬೀಳುವಂತೆ ತಕ್ಕ ಎಡೆಗಳಲ್ಲಿ ದೊರೆಯುತ್ತವೆ, ವಸಂತ, ಕೊಟ್ಟೂರು, ನಿಡುಗುಂದಿ, ಇವು ಧಾರವಾಡ ಜಿಲ್ಲೆಯ ಈಶಾನ್ಯ ಭಾಗದಲ್ಲಿ, ಪಶ್ಚಿಮ, ದಕ್ಷಿಣ, ಪೂರ್ವದಿಕ್ಕುಗಳಲ್ಲಿ ನಿಂತಿರುವುವು. ಉತ್ತರಾವಧಿಯಲ್ಲಿದ್ದ ವಿಕ್ರಮಪುರವು ಇದೇ ನೆರೆಯಲ್ಲಿ ಈಗ ವಿಜಾಪುರಕ್ಕೆ ಸೇರಿದ ಅರಸೀಬೀಡಿನ ಸವಿಾಪದಲ್ಲಿತ್ತೆಂದು ಶಾಸನಗಳಿಂದ ನಿರ್ಣಯಿ ಸಿದ್ದಾರೆ. ಸ೦ಸನ ಕಾಲಾನಂತರ ಅದನ್ನು ಬಿಲ್ಬಣನ ಪೋಷಕನಾದ ವಿಕ್ರಮನು ದೇವಾಲಯಗಳಿಂದ ಅಲಂಕರಿಸಿ ವಿಸ್ತಾರಿಸಿದನೆಂದು ಆ ಕವಿ ಕಥಿಸಿರುವನು. ಅರಸೀ ಬೀಡಿನ ಪಶ್ಚಿಮದಲ್ಲಿ ಪಟ್ಟದಕಲ್ಲಿದೆ. ಇದು ಕಿಸುಕಾಡು ಎಪ್ಪತ್ತಿನ ರಾಜಧಾನಿ ಯಾಗಿತ್ತು, ಸಯ್ಯ- ಡಿ ಕಿಸುಕಾಡಿನಲ್ಲಿತ್ತೆಂದು ದುರ್ಗಸಿಂಹನು ಹೇಳಿರುವನಷ್ಟ ? ಈಗಿನ ಸವಡಿಯೇ ಸಯ್ದ ಡಿಯಾಗಿರಬಹುದು, ದುರ್ಗಸಿಂಹನು ನೆ೦ಗಿನಿಷಯದ ಪ್ರಸ್ತಾವವನ್ನು ಎತ್ತಲಿಲ್ಲ. ಅವನ ಕಾಲದಲ್ಲಿ ಪಡುವಣ ಚಾಲುಕ್ಯರು ಪುನಃ ವೈಭವ ದಿಂದ ಕರ್ಣಾಟದಲ್ಲಿ ಆಳುತ್ತಿದ್ದರು. ಆತನೇ ಅವರಲ್ಲಿ ಸಂಧಿವಿಗ್ರಹಿಯಾಗಿದ್ದನು. ಮೂಡಣ ಚಾಲುಕ್ಯರ ನೆ೦ಗಿಪುರವು ಜೋಳರಿಗೆ ಅಧೀನವಾಗಿತ್ತು. ಕೊಟ್ಟೂರಿನಂತೆಯೇ ಪುಂಗನೂರೆಂದು ಸಾಮಾನ್ಯವಾದ ಹೆಸರು. ಆದರೆ ಬಾದಾಮಿಯ ಉತ್ತರದಲ್ಲಿ ಹೊಂಗನಹಳ್ಳಿ ಯೆಂಬ ಗ್ರಾಮವಿದೆ, ಪೊನ್ನರನ್ನರ ಕಾಲದಲ್ಲಿ ಇಡುವಣ ಚಾಲುಕ್ತವಂತದ ತೈಲವನು ತಲೆಯೆತ್ತುತಿದ್ದನು. ಆತನ ದಂಡನಾಯಕರೂ ಪೊನ್ನನೂ ಅದೇ ಗ್ರಾಮಸ್ಥರಾಗಿದ್ದರೆಂದು ಊಹಿಸುವುದು ನ್ಯಾಯವಲ್ಲವೇ ? ಆಂಧ್ರ ದೇಶವು ಪುರಾಣಪ್ರಸಿದ್ದವಾದುದರಿಂದ, ಇವರು ಅಲ್ಲಿಂದ ಒ೦ದವರಾಗಿದ್ದರೆ ರನ್ನನು ವೆಂಗಿನಿಷಯವನ್ನು ವಿಸ್ತಾರವಾಗಿ ವರ್ಣಿಸುವಾಗ ಅದರ ಪ್ರಸ್ತಾವವನ್ನು ಲೋಪಿಸುತ್ತಿದ್ದನೇ ? ಇವರ ಕಾಲದಲ್ಲಿ ತೈಲಪನು ಉದಯಕ್ಕೆ ಒಂದಿದ್ದರೂ, ಮೂಡಣ ಚಾಲುಕ್ಯರನ್ನು ಚೋಳರು ಗೆದಿರಲಿಲ್ಲ. ಆದುದರಿಂದ ಮುಂಕಿನ ವೆಂಗಿಮಂಡಲವೆಂಬ ಹೆಸರೇ ಸ್ವಲ್ಪ ಕಾಲದವರೆಗೆ ನಡೆದಿರಬೇಕು. ಈ ಪ್ರದೇಶದಲ್ಲಿ ನೆ೦) ಎಂಬ ಹೆಸರಿನ ಗ್ರಾಮವು ನನಗೆ ಸಿಕ್ಕಿಲ್ಲ. ಬೆಳ್ಳಂಕಿ ಎಂಬ ಊರು ಸಂಪನು ಕಾಣಿಸಿದ ಗಡಿಯೊಳಗಿದೆ. “ ಅದುವೆ ವಸಂತಂ ಕೊಟ್ಟೂರು " ಎಂಪಿ ಸಂಪನ ಮಾತುಗಳ ಅರ್ಥವೇನು ? ಅದುವೆ ಎಂದರೆ ಅದಲ್ಲದೆ ಎಂಬರ್ಥವೋ, ಅದರೊಳಗೆ ಎಂಪಿರ್ಥವೋ ? ಛಂದೋಂಬುಧಿಯಲ್ಲಿ “ ವೆಂಗಿ ನಿಷಯದೊಳ್" ಒಳ್ಳಗಣಿತವೆನೆ ಸತ್ತ ಗ್ರಾಮಗಳೊಳಮಾವೆಂಗಿಸಲು ಕರ೦ ಸೊಗ ೧೦೪