ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪-ನೆಯ ಕರ್ಣಾಟಕ ಸಾಹಿತ್ಯ ಸಮ್ಮೇಳನ. ಮೊದಲು ನಿಶ್ಚಿಸಲ್ಪಟ್ಟ ದ್ದಂತೆ ೪ ನೆಯ ಕರ್ಣಾಟಕ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ಆ ದಿನ ಮಧ್ಯಾಹ್ನ ಸಮ್ಮೇಳನದ ಅಧ್ಯಕ್ಷರಾದ ಮi ರಾವ್ ಬಹದೂರ' ಪ್ರಾಕ್ತನ ವಿಮರ್ಶ ವಿಚಕ್ಷಣ ಆರ್. ನರಸಿಂಹಾಚಾರ್, ಎಂ. ಎ., ಎಂ. ಆರ್. ಎ. ಎಸ್., ರವರು - ಮೇಲ್ ' ಗಾಡಿಯಲ್ಲಿ ಬೆಂಗಳೂರಿ ನಿಂದ ದಯಮಾಡಿಸಿದರು, ಇವರನ್ನು ಸಮ್ಮೇಳನದ ಸ್ವಾಗತಮಂಡಲಿಯ ಸಭಾ ಸದರೂ, ಅಧ್ಯಕ್ಷರೂ, ಕಾರ್ಯದರ್ಶಿಗಳೂ ಅತ್ಯಾದರದಿಂದ (ಪ್ಲಾಟ್ ಫಾರಂ) ನಿಲ್ದಾಣದಲ್ಲಿ ಇದಿರುಗೊಂಡು, ಪುಷ್ಪಹಾರದಿಂದ ಅಲಂಕರಿಸಿ, ಸಮ್ಮೇಳನವು ನೆರೆ ಯಲು, ಸಮ್ಮೇಳನದ ಪ್ರತಿನಿಧಿಗಳಿಗೆ ಸತ್ಕಾರವನ್ನು ಮಾಡಲು ಮೊದಲೇ ಚೆನ್ನಾಗಿ ಏರ್ಪಡಿಸಿದ್ದ “ ಟ್ರೇನಿಂಗ್ ಕಾಲೇಜಿ ” ಗೆ ಕರೆದುಕೊಂಡು ಹೋದರು. ಸ್ವಾನ ಭೋಜನಾದಿಗಳಾದನಂತರ, ಮೊದಲೇ ಏರ್ಪಡಿಸಿದ್ದಂತೆ 9-30 ಘಂಟೆಗೆ ಅಧ್ಯಕ್ಷ ರನ್ನು ಅತ್ಯಾದರದಿಂದ, ಶ್ರೀ ಶಾರದಾಪಟ, ಕರ್ಣಾಟಕ ಪುರಾತನಗ್ರಂಥಗಳೊಡನೆ ವಾದ್ಯಘೋಷದೊಡನೆ ಕರೆತಂದರು. ವಿಶಾಲವಾದ ಸಭಾಂಗಣವನ್ನು ಅಧ್ಯಕ್ಷರು ಪ್ರವೇಶಿಸಿದ ಕೂಡಲೆ, ಕರ್ಣಾಟಕದ ನಾನಾ ಪ್ರಾಂತಗಳಿಂದ ಬಂದಿದ್ದ ಸೋದರಸೋದರಿಯರಾದ ಸಾಮಾಜಿಕರ ಕರತಾಡನವು ಅತ್ಯಾನಂದೋತ್ಸಾಹಗಳನ್ನುಂಟು ಮಾಡಿದುವು. ಸ್ವಾಗತಮಂಡಲದ ಅಧ್ಯಕ್ಷರೂ, ಶ್ರೀಯುತ ನರಸಿಂಹಾಚಾರ್ಯರೂ ಎತ್ತರವಾದ ಸ್ಥಳ (IPlatform) ದಲ್ಲಿದ್ದ ಆಸನಗಳನ್ನು ಸ್ವೀಕರಿಸಿದ ಕೂಡಲೆ, ನಿಯಮಿತರಾದ ಕೆಲವರು ಮಹನೀಯರು ಸ್ವಾಗತ ಪದ್ಯಗಳನ್ನು, ರಾಗ ತಾಳಗಳೊ ಡನೆ ಹಾಡಿ, ಸಾಮಾಜಿಕರ ಚಿತ್ತರಂಜನೆಗೊಳಿಸಿದರು. | ಸ್ವಾಗತ ಪದ || ರಾಗ-ಹಂಸಧ್ವನಿ; ತಾಳ-ಜಂಪೆ. ಸ್ವಾಗತವು ಸ್ವಾಗತವು ಸ್ವಾಗತವು ಸಕಲರಿಗೆ | ಬಾಗುತಲಿ ನಮಿಸುವೆವು ಕನ್ನಡಬಲ್ಲವರಿಗೆ | ಸಾಗುತಿಹ ಕನ್ನಡದ ನಾಡುನುಡಿ ಹೇವವದು | ಬೇಗದಿಂದೆಮ್ಮೊಳನುರಾಗವಂ ಬಳೆಯಿಸುಗೆ 1 ೧ | ಒಂದೆ ತಾಯಿ ನಮಗೆಂದು ಬಂಧುಗಳು ನಾನೊಂದು | ಚ೦ದದಿಂದೈತಂದು ನಂದದಿಂ ಬಳಿಸಂದು || ೧c೬