ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕ | ೬ ) ಕರ್ಣಾಟಕ ಸಾಹಿತ್ಯ ಸಮ್ಮೇಳನ. [ ಅಕ್ಟೋಬರ್ ೧೯೧೮. ಇಷ್ಟಾದ ಮೇಲೆಸ್ವಾಗತಮಂಡಲದ ಅಧ್ಯಕ್ಷರಾದ ಶ್ರೀಯುತ ಸರದಾರ ಬುಳ್ಳಪ್ಪ ಬಸಂತರಾವ್ ಮಾಮಲೆ ದೇಸಾಯಿಯವರು ಈರೀತಿ ಭಾಷಣ ಮಾಡಿದರು :. ಸ್ವಾಗತ ಮಂಡಲದ ಅಧ್ಯಕ್ಷರ ಭಾಷಣವು. ಕರ್ಣಾಟಕ ಬಂಧು ಭಗಿನಿಯರೇ, ಈ ನಮ್ಮ ಕರ್ಣಾಟಕ ಭಾಷಾಮಹೋತ್ಸವಕ್ಕೆ ತಾವೆಲ್ಲರೂ ಅತ್ಯಂತ ಉತ್ತು ಕತೆಯಿಂದ ದಯಮಾಡಿಸಿದುದಕ್ಕಾಗಿ ನಾನು ಇಲ್ಲಿಯ ಸ್ವಾಗತಮಂಡಲದ ಪರವಾಗಿ ತಮ್ಮೆಲ್ಲರಿಗೂ ಕೃತಜ್ಞತಾಪೂರ್ವಕವಾಗಿ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ. ಧಾರವಾಡ ಜಿಲ್ಲೆಯು ತಮ್ಮಂಥ ಕರ್ನಾಟಕಾಭಿಮಾನಿಗಳನ್ನು ಕನ್ನಡ ಭಾಷಾಭೂಷಣ ರನ್ನು ಇಲ್ಲಿಗೆ ಬರಮಾಡಿಕೊಂಡು ಕನ್ನಡ ನುಡಿಯ ಸೇವೆಯನ್ನು ಕೈಲಾದಮಟ್ಟಿಗೆ ಮಾಡಬೇಕೆಂದು ಬಲುದಿವಸಗಳಿಂದ ಹಾತೊರೆಯುತ್ತಿತ್ತು. ಆ ಸುಯೋಗವು ಇಂದು ಬಂದೊದಗಿದುದಕ್ಕಾಗಿ ನಾವು ಪರಮೇಶ್ವರನನ್ನು ಅನನ್ಯಭಾವದಿಂದ ಭಜಿಸು ತೇವೆ. ನಾವು ಧಾರವಾಡದವರು ಪಂಡಿತರೇನೂ ಅಲ್ಲ; ಆದರೂ ಸರಸ್ವತೀ ದೇವಿಯ ಸೇವೆಯನ್ನು ಕೈಲಾದಮಟ್ಟಿಗೆ ಮಾಡಲುತ್ತು ಕರಾಗಿ ತಮ್ಮಂಥ ಮಹನೀಯ ರನ್ನು ಕರೆಯಿಸಿಕೊಳ್ಳುವ ಸಾಹಸವನ್ನು ಮಾಡಿರುವೆವು. ತಾವು ನಮ್ಮ ಆಮಂತ್ರಣ ವನ್ನು ಸ್ವೀಕರಿಸಿ, ಶಾರೀರಕ ಹಾಗು ಆರ್ಥಿಕ ಕಷ್ಟನಷ್ಟಗಳನ್ನು ಗಮನಿಸದೆ, ದೂರ ದೂರ ದೇಶಗಳಿಂದ ಇಲ್ಲಿಗೆ ಬಂದು ಸಭಾಮಂಟಪವನ್ನು ಅಲಂಕರಿಸಿದುದಕ್ಕಾಗಿ ತಮ್ಮೆಲ್ಲರೆ ಉಪಕಾರವನ್ನು ನಾವು ಎಷ್ಟು ಸ್ಮರಿಸಿದರೂ ಸ್ವಲ್ಪವೇ, ತಮ್ಮಂಥ ಮಹ ನೀಯರ ಸೇವೆಯನ್ನು ತಮ್ಮ ಯೋಗ್ಯತೆಗೆ ತಕ್ಕಂತೆ ಮಾಡುವಲ್ಲಿ ನಾವು ಅಸನ ರ್ಥರು. ಆದರೂ, ನಾವು ಆದರದಿಂದ ಅರ್ಪಿಸುವ ಅಲ್ಪಸತ್ಕಾರವನ್ನೇ ಸುದಾಮನ ಅವಲಕ್ಕಿಯಂತೆ ಪರಿಭಾವಿಸಿ ಸಂತೋಷದಿಂದ ಸ್ವೀಕರಿಸಬೇಕೆಂದು ತಮ್ಮೆಲ್ಲರಿಗೆ ಸವಿನಯ ಸಂಪ್ರಾರ್ಥನೆ. ಮಹನೀಯರೇ..-ಈಗ ಸುಮಾರು ನಾಲ್ಕು ವರುಷಗಳ ಹಿಂದೆ ಪ್ರಾರಂಭ ನಾದ ಘೋರ ಯುದ್ದವು ಶಾಂತವಾಗುವ ಲಕ್ಷಣಗಳು ಇನ್ನೂ ತೋರಿಲ್ಲವು. ಆದರೆ ಮಹಾಮಹಿಮರಾದ ನಮ್ಮ ಜಾರ್ಜ ಪ್ರಭುಗಳು ಈ ಪ್ರಚಂಡ ಯುದ್ದದಲ್ಲಿ ಕೇವಲ ಪರೋಪಕೃತಿಗಾಗಿಯೇ ಸೇರಿರುವರೆಂಬುದು ನಮಗೆಲ್ಲ ಪೂರ್ಣವಾಗಿ ಮನ ವರಿಕೆಯಾಗಿರುವುದರಿಂದ 'ಯತೋ ಧರ್ಮ: ತತೋ ಜಯಃ' ಎಂಬ ಸಾಮತಿಗೆ ಸರಿ ಯಾಗಿ, ಇಂದಿಲ್ಲ ನಾಳೆ ವಿಜಯಲಕ್ಷ್ಮಿಯು ಖಂಡಿತವಾಗಿ ನಮ್ಮ ಸಾರ್ವಭೌಮರ ಪಕ್ಷಕ್ಕೆ ಮಾಲೆಯನ್ನು ಹಾಕುವಳೆಂದು ನಾವೆಲ್ಲ ನೆರೆನಂಬಿದ್ದೇವೆ. ಜರ್ಮನಿಯ ದುರಾಶೆಗಳನ್ನು ಸಮೂಲವಾಗಿ ವಿನಾಶಪಡಿಸಲಿಕ್ಕೂ, ಆ ಲೋಕಕಂಟಕರ ಮದ ವನ್ನು ಮುರಿದು ಮಣ್ಣು ಸಾಲುಮಾಡಲಿಕ್ಕೂ, ಸಕಲ ಭೂಮಂಡಲದ ಪ್ರಬಲರಾಷ್ಟ್ರ ಗಳೆಲ್ಲ ಭಯಂಕರವಾದ ಯುದ್ದ ಯಾತನೆಗಳನ್ನು ಹಗಲಿರುಳೆನ್ನದೆ ಸಹಿಸುತ್ತ ರಣರಂ ಗದಲ್ಲಿ ಕಡಿದಾಡುತ್ತಿರುವಾಗ, ನಾವು ಮಾತ್ರ ಯಾರ ಭುಜಬಲದ ಮಹಿಮೆಯಿಂದ ೧೦೮