ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸವಿ ಸಪ್ಪತ್ರಿಕೆ | ಕರ್ಣಾಟಕ ಸಾಹಿತ್ಯ ಸಮ್ಮೇಳನ. 1 ಅಕ್ಟೋಬರ್ ೧೯೧೮. ಕಟಾಕ್ಷಕ್ಕೊಳಗಾಗಿ ಆಕೆಯ ಪ್ರಸಾದವನ್ನು ಸಡೆದು ಕರ್ಣಾಟಕಸಾಹಿತ್ಯ ಮಂಡಲ ದಲ್ಲಿ ಹೆಸರುವಾಸಿಯಾಗಿರುವುದು, ಈ ನಮ್ಮ ಪೂರ್ವಿಕರ ಅಭಿಮಾನದ ಬಲ ದಿಂದಲೇ ನಾವು ತಮ್ಮನ್ನು ಇಲ್ಲಿಗೆ ಬರಮಾಡಿಕೊಂಡಿದ್ದೇವೆ. ಭಾಷಾಭಾಂಧವರೇ, ಹಿಂದಿನ ನಮ್ಮ ಆ ವೈಭವಕ್ಕೆ ಸದ್ಯದ ಸ್ಥಿತಿಯನ್ನು ಹೋಲಿಸಿ ನೋಡಿದರೆ, ಕನ್ನಡಿಗರಾದ ನಾವೆಲ್ಲರು ವಿಷಾದದಿಂದ ತಲೆತಗ್ಗಿಸಬೇಕಾ ಬರುವುದು, ಕನ್ನಡ ನುಡಿಯ ಸದ್ಯದ ದುರವಸ್ಥೆಯನ್ನು ನಾವು ಇಲ್ಲಿ ವಿವರವಾಗಿ ವರ್ಣಿಸುವ ಕಾರಣವಿಲ್ಲ. ಯಾವ ಭಾಷೆಯು ಒಂದಾನೊಂದು ಕಾಲದಲ್ಲಿ ಗೋದಾವರಿಯಿಂದ ಕಾವೇರಿಯವರೆಗೆ ಹಬ್ಬಿರುವ ವಿಶಾಲವಾದ ಸೀಮೆಯಲ್ಲಿ ಅವಿಚ್ಛಿನ್ನವಾಗಿ ಹರಡಿಕೊಂಡು ಘನತೆಯಿಂದ ಮೆರೆಯಿತೋ, ಯಾವ ಭಾಷೆಯ ಭರತಭೂಮಿಯ ಸುಸಂಸ್ಕೃತವಾದ ವಾಣಿಗಳಲ್ಲಿ ಕಾಲಾಂತರದಲ್ಲಿ ಅಗ್ರಸ್ಥಾನವನ್ನು ಪಡೆದಿತ್ತೊ, ಆ ನಮ್ಮ ಕನ್ನಡನುಡಿಯು ಕರ್ಮವಹಿಮೆಯಿಂದ ದೈವದುರ್ನಿಲಾಸಕ್ತಿ ತಾಗಿ ಕ್ಷೀಣವಾಗುತ್ತ ನಡೆದು, ನಾಲ್ಕಾರು ನಾಡುಗಳಲ್ಲಿ ಹರಿದು ಹಂಚಿಹೋದುದ ರಿಂದ ಸದ್ಯಕ್ಕೆ ಅತ್ಯಂತ ನಿಪನ್ನಾವಸ್ಥೆಯನ್ನು ಹೊಂದಿದೆ. ವಿಜಯನಗರ ಸಾಮಾಜ್ಯದ ಅಳಿಗಾಲದ ಆರಂಭದಿಂದ ನನಗೆ ಬಲವಾದ ರಾಜಾಶ್ರಯವು ತಪ್ಪಿ ಹೋಯಿತು. ಪ್ರಬಲ ರಾಜಾಶ್ರಯವನ್ನು ಹೊಂದಿದ ಹಿಂದುಸ್ತಾನಿ, ಮಹಾ ರಾಷ, ಇಂಗ್ಲೀಷ್ ಮೊದಲಾದ ಹೊಸ ಭಾಷೆಗಳು ನಮ್ಮ ನಾಡಿನಲ್ಲಿ ನುಗ್ಗಿ ದುವೆ, ಈ ಮೂಲಕ ಕನ್ನಡಭಾಷೆಯ ಅಭಿವೃದ್ಧಿಯು ಕುಗ್ಗಲಾರಂಭಿಸಿತು. ಈ ಭಾಗದ ದೇಶೀಯ ಸಂಸ್ಥಾನಗಳಲ್ಲಿರುವ ಕನ್ನಡಮಾತಾಡುವವರ ಸಂಖ್ಯೆಯು ಈಗ ಕಡಮೆಯಾಗುತ್ತ ನಡೆದಿದೆ. ಈ ಸಂಸ್ಥಾನಗಳಲ್ಲಿ ೧೮೭೨ ನೆಯ ಇಸವಿಯಲ್ಲಿ ಕನ್ನಡಿಗರ ಜನಸಂಖ್ಯೆಯು ಒಟ್ಟು ೨೮,೯೬೨ ಇತ್ತು. ಅದು ಈಗ ಸುಮಾರು ಅರ್ಧಕ್ಕೆ ಇಳಿದಿದೆ: ಅ೦ದರೆ ಈಗ ಅದು ೩೨೬,೨೯೮ ಆಗಿರುತ್ತದೆ. ಹೈದರಾಬಾದು ಸಂಸ್ಥಾನದಲ್ಲಿ ಸುಮಾರು ೧೬ ಲಕ್ಷ ಕನ್ನಡಿಗರಿದ್ದು, ಅವರು, ಅವರ ಮಾತೃಭಾಷೆಯು ಕನ್ನಡನೆಂಟುದನ್ನು ಕೂಡ ಮರೆಯಹತ್ತಿದ್ದಾರೆ. ಸಾರಾಂತ, ಕನ್ನಡನಾಡು ವಿಸ್ತಾರ ವಾಗುವ ಬದಲು ಸಂಕೋಚವನ್ನು ಹೊಂದುತ್ತಿರುವುದು, ಹಿಂದೆ ನಮ್ಮ ನುಡಿಯು ವಿಶಾಲವಾದ ಪ್ರದೇಶದಲ್ಲಿ ಹಬ್ಬಿದುದರಿಂದ ಕಾಲಾಂತರದಲ್ಲಿ ಹಳಗನ್ನಡ, ಹೊಸಗನ್ನಡ ಇಲ್ಲವೆ ಉತ್ತರದಕ್ಷಿಣ ಮಾರ್ಗಗಳೆಂಬ ಸಹಜವಾದ ಗ್ರಾಂಥಿಕ ಕನ್ನಡ ಭೇದಗಳು ಪಂಡಿತರಿಗೆ ಗೋಚರವಾದರೂ, ಕನ್ನಡ ನುಡಿಯ ಮಹಾಪ್ರವಾಹವು ಯಾವತ್ತು ಕರ್ನಾಟಕದಲ್ಲಿ ಒಂದೇ ಒಂದಾಗಿ ಕಂಗೊಳಿಸುತ್ತಿತ್ತು, ಆದರೆ ಸದ್ಯಕ್ಕೆ ಈ ಪ್ರವಾ ಹವು ಮೈಸೂರುಕನ್ನಡ, ಮಂಗಳೂರು ಕನ್ನಡ, ಧಾರವಾಡದ ಕನ್ನಡ, ಹೈದರಾ ಬಾದುಕನ್ನಡ, ಎಂಬ ಶಾಖೆಗಳಾಗಿ ಕ್ಷೀಣವಾಗುತ್ತ ನಡೆದಿರುವುದು, ಇನ್ನು ಕೆಲಕಾಲದವರೆಗೆ ನಾವು ಇದನ್ನು ಹೀಗೆಯೇ ಹರಿಯಗೊಟ್ಟರೆ ಈ ಮುಖ್ಯ ಶಾಖೆ ಗಳಿಗೆ ಉಪಶಾಖೆಗಳ ಒಡೆದು ಸಣ್ಣ ಪುಟ ಹಳ್ಳ ಸರವುಗಳಾಗಿ ಅಲ್ಲಲ್ಲಿ ಬತ್ತಿ ಹರಿವೆ ಒಡೆದ ಹಂಚಿನಂತೆ ಇದರ ಹಾಡಾಗುವುದೆಂದು ನಿಸ್ಸಂದೇಹವಾಗಿ ಹೇಳಲು ಕಷ್ಟವಾಗುವುದು. ಆದುದರಿಂದ ಈ ಸ್ವಚ್ಛಂದ ಗಮನಕ್ಕೆ ಅಲ್ಲಲ್ಲಿ ತಡೆಗಳನ್ನು ಹಾಕಿ ೧೦ ೨J �