ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿಕೆ | ಅಧ್ಯಕ್ಷರ ಭಾಷಣ "ಅಕ್ಟೋಬರ್ ೧೯೧೮. ರತ್ನ ಶಾಸ್ತ್ರ ಇವುಗಳನ್ನು ಬರೆದನು. ರಾಮಾಯಣಂ ತಿರುಮಲೆಯಾಚಾರ್ಯ ಎಂಬ ಕಪಿಯೂ ಈ ದೊರೆಯ ಆಶ್ರಿತನು. ಈ ರಾಜನ ಮಹಿಷಿಯಾದ ಚೆಲ್ವಾಂಬೆ ವರ ನಂದೀ ಕಲ್ಯಾಣ ಮೊದಲಾದ ಗ್ರಂಥಗಳನ್ನು ಬರೆದಿದ್ದಾಳೆ, ರಾಮಾಯಣ, ಇಂದಿ ರಾಭ್ಯುದಯ ಮೊದಲಾದ ಗ್ರಂಥಗಳನ್ನು ಬರೆದ ವೆಂಕಾಮಾತ್ಯನು ೨ ನೆಯ ಕೃಷ್ಣ ರಾಜನ (೧೬೩೪, ೧೭೬೬) ಆತನು. ಈ ರಾಜನ ಮಾವನಾದ ಗೋಪಾಲ ರಾಜನು ಕಮಲಾಚಲಮಾಹಾತ್ಮವನ್ನು ರಚಿಸಿದ್ದಾನೆ. ಸಿಂಗರಾಚಾರ್ಯನು ಚಾಮ ರಾಜನ (೧೭೭೦....೧೭೬೬) ಆಶ್ರಿತನಾಗಿ ಶ್ರೀರಂಗಮಾಹಾತ್ಮವನ್ನು ಬರೆದನು. ೩ ನೆಯ ಕೃಷ್ಣರಾಜನು (೧೭೯೯. ೧೮೬೮) ಸ್ವತಃ ಅನೇಕ ಗ್ರಂಥಗಳನ್ನು ರಚಿಸಿರುವು ದಲ್ಲದೆ ಕವಿಗಳಿಗೆ ಉದಾರಾಶ್ರಯವನ್ನು ಕೊಟ್ಟು ಕನ್ನಡ ಸಾಹಿತ್ಯವನ್ನು ವೃದ್ಧಿಗೊಳಿ ಸಿದ ಸಂಗತಿ ಸರ್ವಜನವಿದಿತವಾಗಿದೆ. ಪಾಳೆಯಗಾರರು-ಉಮ್ಮತ್ತೂರು ನೀರನಂಚೇಂದ್ರನ (೧೪೮೨.೧೪೯೪) ಪ್ರೋತ್ಸಾಹದಿಂದ ನೀಲಕಂಠಾಚಾರ್ಯನು ಆರಾಧ್ಯಚಾರಿತ್ರವನ್ನೂ, ಅಚ್ಯುತರಾಯನ ಸಾಮಂತನಾದ ನುಗ್ಗೇಹಳ್ಳಿ ಯ ರಾಯಭೂವರನ ಪ್ರೋತ್ಸಾಹದಿಂದ ಲಿಂಗಮಂತ್ರಿ ಕಬ್ಬಿಗರ ಕೈಪಿಡಿಯನ್ನೂ, ಸುಗಟೂರ ಪ್ರಭುವಾದ ಮುಮ್ಮಡಿತಮ್ಮನು ಶಂಕರ ಸಂಹಿತೆಯನ್ನೂ, ಆನತಿ ಸೊಣ್ಣಬೈರೆಗೌಡನ ಆಶ್ರಿತನಾದ ಚಿಕ್ಕರಸನು ಸೊಣ್ಣಬೈರೆ ಗೌಡನ ಚರಿತ್ರವನ್ನೂ, ಪಿರಿಯಪಟ್ಟಣದ ವಿರುಪರಾಜೇಂದ್ರನಿಂದ ಪೋಷಿತನಾಗಿ ದೊಡ್ಡಯ್ಯನು ಚಂದ್ರಪ್ರಭಚರಿತೆಯನ್ನೂ, ಹದಿನಾಡು ಚೆನ್ನರಾಜನ ಆಜ್ಞಾನುಸಾರ ವಾಗಿ ಎಳಂದೂರು ನಾರಸಿಂಹಭಟ್ಟನು ವೈದ್ಯಸಾರಸಂಗ್ರಹವನ್ನೂ, ಬೇಲೂರು ವೆಂಕಟಾದ್ರಿನಾಯಕನ (೧೬೨೬ -೧೬೪) ಪ್ರೋತ್ಸಾಹದಿಂದ ಸೂರ್ಯಕವಿ ಕವಿಕಂತ ಹಾರವನ್ನೂ, ಚಿತ್ರದುರ್ಗದ ಮದಕೇರಿರಾಜನ ಆಶ್ರಿತನಾದ ಚಂದ್ರಭೀಮಕವಿ ಮದ ಕೇರಿರಾಜೇಂದ್ರ ದಂಡಕವನ್ನೂ ಬರೆದರು. ಸೋಸಲೆ ರೇವಣಾಚಾರ್ಯನು ಚಿಕ್ಕ ನಾಯಕನಹಳ್ಳಿ ಮುದಿಯಪ್ಪನಾಯಕನ (೧೬೨೩) ಇಷ್ಟಾನುಸಾರವಾಗಿ ನಹಿ ಮೈ ಸವಟಿಕೆಯನ್ನೂ, ಮುದಿಗೆರೆ ರಘುವಪ್ಪನಾಯಕನ ಪ್ರೇರಣೆಯಿಂದ ಶಿವಾಧಿಕ. ತಿಪಾಮಣಿಟೀಕೆಯನ್ನೂ, ರಚಿಸಿದನು. ಬಿಜ್ವರದ ತೋಂಟದಸಿದ್ದಲಿಂಗಭೂಸನ ಆಶ್ರಿತನಾದ ವಿರಕ್ತ ತೋಂಟದಾರ್ಯನು ಸಿದ್ದೇಶ್ವರ ಪುರಾಣ, ಕರ್ಣಾಟಕಶ ಮಂಜರಿ ಮೊದಲಾದ ಗ್ರಂಥಗಳನ್ನು ಬರೆದನು. ಬಿಜ್ಜವರದ ಇಮ್ಮಡಿ ಚಿಕ್ಕ ಭೂಸನ (೧೫೯೩) ಪ್ರೋತ್ಸಾಹದಿಂದ ಮಲ್ಲಿಕಾರ್ಜುನಕವಿ ಶಂಕರಕವಿಕೃತ ಬಸವ ಪುರಾಣಕ್ಕೆ ಟೀಕೆಯನ್ನು ಬರೆದನು. ಇಕ್ಕೇರಿ ವೆಂಕಟಪ್ಪನಾಯಕನ (೧೫೮.... ೧೬೨೯) ಆಜ್ಞೆಯಿಂದ ತಿರುವುಲಭಟ್ಟನು ಶಿವಗೀತೆಯನ್ನು ಒರೆದನು. ಒಸವಪ್ಪ ನಾಯಕನು (೧೬೯೬-೧೭೧೪) ಸೂಕ್ತಿಸುಧಾಕರವನ್ನು ರಚಿಸಿದನು, ಸೋನು ಶೇಖರನಾಯಕನ (೧೭೧೪---೧೭೩೯) ಮಂತ್ರಿಯಾದ ನಿರ್ವಾಣಯ್ಯನು ಶಿವಪೂಜಾ ವಿಧಾನವನ್ನು ಬರೆದನು, ಕಳಲೆ ವೀರರಾಜನು ವೈದ್ಯ ಸಂಹಿತಾಸಾರಾರ್ಣವವನ್ನು ಬರೆದನು. ಇವನ ಆಶ್ರಿತನಾದ ಚೆನ್ನಯ್ಯನು ಪಮ್ಮಿನೀಪರಿಣಯವನ್ನು ರಚಿಸಿದನು. ೧೪೦