ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ51 'ಆ ಸ್ವಯುಜ | ಸ೦ಮೇಳನ ವಿಷಯ. | ಕರ್ಣೆಟಕ ಸà: ... ... . --. ವಿಷಯವನ್ನು ಕುರಿತು ಮ!! ನಾರಾಯಣ ಶ್ರೀನಿವಾಸ ರಾಜಪುರೋಹಿತರು ಬರೆದಿದ್ದ ಪ್ರಬಂಧವನ್ನು ಸ್ವಾಗತಮಂಡಲಿಯ ಕಾರ್ಯದರ್ಶಿಗಳಾದ ಮ! ಮಗದಾಳದ ವೆಂಕಟರಾಯರು ಸಮ್ಮೇಳನದಲ್ಲಿ ಓದಿದರು. ಅನಂತರ ಮುಂದೆ ಹೇಳುವ ವಿಷಯ ಗಳು ಚರ್ಚಿಸಲ್ಪಟ್ಟು ತೀರ್ಮಾನವಾದುವು :- (೧) ಈಗ ಯೂರೋಪ್ ಖಂಡ ದಲ್ಲಿ ನಡೆಯುತ್ತಿರುವ ಭಯಂಕರಯುದ್ದದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಬೇಗನೆ ಜಯಪ್ರಾಪ್ತಿಯಾಗಬೇಕು, (೨) ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ದ್ವಾರದಿಂದ ವಿಷಯಗ್ರಹಣ ಮಾಡುವುದಾದರೆ ಅವರಿಗೆ ಶಾರೀರಕ ಮತ್ತು ಮಾನಸಿಕ ಶ್ರಮ ವಾಗುವುದಲ್ಲದೆ ಅವರ ವಿಚಾರಶಕ್ತಿಯೂ ಚೆನ್ನಾಗಿ ಬೆಳೆಯುವುದಿಲ್ಲ. ಆದಕಾರಣ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆಯೊಂದನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳ ಪರೀಕ್ಷೆಯನ್ನೂ ಆಯಾ ದೇಶಭಾಷೆಗಳಲ್ಲಿಯೇ ತೆಗೆದುಕೊಳ್ಳಬೇಕು, ಮತ್ತು ಪ್ರೌಢಶಿಕ್ಷಣದ ಅಭ್ಯಾಸ ಕ್ರಮದಲ್ಲಿ ಅವಶ್ಯಕವಾದ ದ್ವಿತೀಯ ಭಾಷೆಗಳಲ್ಲಿ ಕನ್ನಡವನ್ನೂ ಸೇರಿಸಬೇಕು. () ಬ್ರಿಟಿಷ್ ಇಲಾಖೆ ಗಳಲ್ಲಿಯೂ ಮತ್ತು ಕರ್ಣಾಟಕದೊಳಗಿನ ದೇಶೀಯ ಸಂಸ್ಥಾನಗಳಲ್ಲಿಯೂ ಕನ್ನಡ ಭಾಷೆ ಪ್ರಚಾರದಲ್ಲಿದ್ದರೂ ಶಾಲೆಗಳಲ್ಲಿ ಶಿಕ್ಷಣವು ಬೇರೆ ಭಾಷೆಯ ದ್ವಾರದಿಂದ ಕೊಡಲ್ಪ ಡುತ್ತದೆ. ಇದರಿಂದ ಕನ್ನಡಭಾಷೆಯ ಶಿಕ್ಷಣವು ಸರಿಯಾಗಿ ನಡೆಯುವದಿಲ್ಲ. ಆದ ಕಾರಣ ಕನ್ನಡಭಾಷೆಯು ಪ್ರಚಾರದಲ್ಲಿರುವ ಈ ಸ್ಥಳಗಳಲ್ಲೆಲ್ಲ ಕನ್ನಡಿಗರ ಉಪಯೋಗ ಕ್ಯಾಗಿ ಕನ್ನಡ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಬೇಕೆಂದು ಈ ಸಮ್ಮೇಲನವು ಆಯಾ ಸರಕಾರದವರಿಗೆ ವಿನಂತಿಯನ್ನು ಮಾಡಿಕೊಳ್ಳಬೇಕು, ರಾಮದುರ್ಗ, ಮುಧೋಳ, ಜಮಖಂಡಿ, ಸೊಂಡೂರು ಮೊದಲಾದ ಸಂಸ್ಥಾನಗಳು ಕೇವಲ ಕನ್ನಡ ಪ್ರಜೆಗಳದೇ ಇರುವುದರಿಂದ ಅಲ್ಲಿಯ ದರಬಾರಿ ಭಾಷೆಯು ಕನ್ನಡವಿರಬೇಕೆಂದೂ, ಉಳಿದ ಸಂಸ್ಥಾನಗಳಲ್ಲಿ ಕನ್ನಡ ತಾಲ್ಲೂಕುಗಳಲ್ಲಿರುವ ಕನ್ನಡ ಜನರ ಸಲುವಾಗಿ ಕನ್ನಡರ್ವೇ ದರ್ಬಾರ್ ಭಾಷೆಯಾಗಿರಬೇಕೆಂದೂ ಈ ಸಮ್ಮೇಲನದ ಅಭಿಪ್ರಾಯವಾಗಿರುತ್ತದೆ. ಈ ಠರಾವನ್ನು ಅಮಲಿನಲ್ಲಿ ತರುವುದಕ್ಕೆ ಕೆಳಗೆ ಬರೆದ ಜನರ ಕಮಿಟಿಯನ್ನು ನೇಮಿಸ. ಬೇಕು. ೧. ಶ್ರೀ ರಾ. ನರಸಿಂಹಾಚಾರ್ಯರು (ಅಧ್ಯಕ್ಷರು), ೨, ಶ್ರೀ ಎಮ್. ರಾಮ ರಾಯರು, ೩. ಶ್ರೀ ಭಿ, ನಾಯಕ, ೪, ಶ್ರೀ ರಾ, ಹ, ದೇಶಪಾಂಡೆ, ೨, ಶ್ರೀ ರಾಮರಾವ್ ಮಂಗಸೂಳಿ, ೬. ಶ್ರೀ ತಮ್ಮಪ್ಪ ಚಿಕ್ಕೋಡಿ, ೭. ಶ್ರೀ ರಾ. ನರಗುಂದಕರ, ೮. ಶ್ರೀ ವೇ. ಭೀ, ಆಲೂರ (ಕಾರ್ಯದರ್ಶಿಗಳು), ಇಲ್ಲಿಗೆ ಎರಡನೆಯ ದಿವಸದ ಸಮ್ಮೇಳನ ಕಾರ್ಯವು ಮುಗಿಯಿತು, ಆ ರಾತ್ರಿ ಗದಗಿನ ಫುಟ್ಬಾಲ್ ಕ್ಲಬ್ಬಿನವರು “ ಭಾರತ ಸಂಧಾನ ” ವೆಂಬ ಹೆಸರಿನ ಸಂಗೀತವಿಲ್ಲದ ವಚನನಾಟಕವನ್ನು ಆಡಿದರು. ಮೂರನೆಯ ದಿವಸ. ಮೂರನೆಯ ದಿನ ಬೆಳಗ್ಗೆ ಕರ್ಣಾಟಕ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಭೆ ೧೪೬