ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ | ಸ೦ಮೇಳನ ವಿಷಯ. |ಅಕ್ಟೋಬರ್ ೧೯೧೮. ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ಸಮ್ಮೇಳನವು ಪುನಃ ಪ್ರಾರಂಭವಾಯಿತು. ಕರ್ಣಾಟಕ ದೇಶಸ್ತವವನ್ನು ಹಾಡಿದ ಮೇಲೆ, ಧಾರವಾಡದ ಟ್ರೇನಿಂಗ್ ಕಾಲೇಜಿನ ಸಂಡಿತರಾದ ಮ! ಎಂ. ಸಿ. ಪೂಜಾರ್ ಎಂಬವರು “ ಲಕ್ಷ್ಮೀಶ ಕೃತಜೈಮಿನಿ ಭಾರತ ' ವನ್ನು ಕುರಿತು ವಿಮರ್ಶರೂಪವಾದ ಒಂದು ಪ್ರಬಂಧವನ್ನು ಓದಿದರು. ಇದಾದ ಮೇಲೆ ಮ; ತೇಕಮಲ್ಲಿ ರಾಜಗೋಪಾಲರಾಯರು ಭಾಷಾಶಾಸ್ತ್ರದ ವಿಚಾರ ವಾಗಿ ಇಂಗ್ಲಿಷಿನಲ್ಲಿ ಕೆಲವು ಮಾತುಗಳನ್ನು ಹೇಳಿದರು. ಅನಂತರ ಮುಂದೆ ಹೇಳುವ ವಿಷಯಗಳು ಸಮ್ಮೇಳನದಲ್ಲಿ ಚರ್ಚೆಯಾಗಿ ತೀರ್ಮಾನಿಸಲ್ಪಟ್ಟುವು :-... (೪) ಮುಂಬಯಿ ಮತ್ತು ಮದರಾಸು ಇಲಾಖೆಗಳಲ್ಲಿಯ ಕನ್ನಡ ಶಾಲೆಗಳಲ್ಲಿ ಉಪಯೋಗಿಸತಕ್ಕ ಕ್ರಮಿಕ ಪುಸ್ತಕಗಳೆಲ್ಲ ಏಕರೂಪವಾಗಿರುವಂತೆ ಏರ್ಪಾಡು ಮಾಡಲು ಆಯಾ ಸರ್ಕಾರಗಳಿಗೆ ಸೂಚಿಸುವುದು, (೨೫) ಮದರಾಸು ಇಲಾಖೆ ಯಲ್ಲಿಯ ಮೈಸೂರು ಸಂಸ್ಥಾನದಲ್ಲಿಯೂ ಇರುವಂತೆ ಮುಂಬಯಿ ಇಲಾಖೆ ಯಲ್ಲಿಯೂ ಕನ್ನಡ ಪಂಡಿತಪರೀಕ್ಷಗಳಿಗೆ ಏರ್ಪಾಡು ಮಾಡಬೇಕೆಂದು ಅಲ್ಲಿಯ ಸರ್ಕಾರಕ್ಕೆ ಸೂಚಿಸುವುದು.(೬) ಕರ್ಣಾಟಕದ ಬೇರೆಬೇರೆ ಭಾಗಗಳಲ್ಲಿರುವ ಭಾಷಾಕೋವಿದರಿಂದ ಉತ್ತಮವಾದ ಗ್ರಂಥಗಳನ್ನು ಬರೆಯಿಸಿ ಪರಿಶೋಧಿಸಿ ಪ್ರಕಟ ಗೊಳಿಸುವುದಕ್ಕಾಗಿ ಬೆಂಗಳೂರಲ್ಲಿ " ಕರ್ಣಾಟಕಗ್ರಂಥಪ್ರಚಾರಿಣೀಸಮಿತಿ ” ಯೆಂಬ ಸಂಘವೊಂದನ್ನು ಏರ್ಪಡಿಸುವುದು, ಆ ಸಮಿತಿಯಲ್ಲಿ ಮುಂದೆ ಹೇಳುವ ವಿದ್ವಾಂಸರು ಮೆಂಬರುಗಳಾಗಿರಬೇಕು. - (ಮದರಾಸಿಗೆ)-ಮ: ಆರ್. ತಾತಾಚಾರ್ಯರು, ಮ| ಬಿ. ರಾಮರಾಯರು (ಬೊಂಬಾಯಿಗೆ)--ಮ: ಆರ್. ಎ. ಜಹಗೀರ್‌ದಾರ್, ಮು|| ಕೆರೂರ ವಾಸುದೇವಾ ಚಾರ್ಯರು, ನ: ಸಿ. ರ್ಎ, ನಗದಾಳರು [ಕಾರ್ಯದರ್ಶಿ.] (ಕೊಡಗಿಗೆ)-ಮ। ಕೃಷ್ಣರಾಯರು. (ಮೈಸೂರಿಗೆ)... ಪ್ರಾಕನ ವಿಮರ್ಶ ವಿಚಕ್ಷಣ ರಾವ್ ಬಹದೂರ್ ಶ್ರೀರ್ಮಾ ರಾ, ನರಸಿಂಹಾಚಾರ್ಯರು [ಅಧ್ಯಕ್ಷರು), ರಾಜಕಾರ್ಯ ಪ್ರಸಕ್ತ ರಾವ್ ಬಹದೂರ್' ಎಂ. ಶಾಮರಾಯರು, ಮ।। ಬಿ. ವೆಂಕಟನಾರಣಪ್ಪನವರು, ಮ। ಆರ್. ರಘುನಾಥರಾಯರು, ಮ!ಎಚ್. ಚೆನ್ನಕೇಶವಯ್ಯಂಗಾರ್ಯರು [ಕಾರ್ಯದರ್ಶಿ]. (೭) ಹೆಣ್ಣು ಮಕ್ಕಳ ಶಾಲೆಯಲ್ಲಿ ಉಪಯೋಗಿಸುವ ಕ್ರಮಿಕ ಪುಸ್ತಕಗಳನ್ನೂ ಇತರ ವಾಚಕ ಪುಸ್ತಕಗಳನ್ನೂ ಸ್ತ್ರೀವರ್ಗಕ್ಕೆ ಉಚಿತವಾಗಿರುವಂತೆ ಸ್ವತಂತ್ರವಾಗಿ ಬರೆಯಿಸಿ ಎಲ್ಲಾ ಕಡೆಯಲ್ಲಿಯೂ ಉಪಯೋಗಿಸುವಂತೆ ಏರ್ಪಾಡು ಮಾಡಲು ಮುಂಬಯಿ, ಮದರಾಸು ಮತ್ತು ಮೈಸೂರು ಸರ್ಕಾರಗಳಿಗೆ ಸೂಚಿಸುವುದು. () ಕನ್ನಡ ನಾಡಿನ ಎಲ್ಲಾ ಭಾಗಗಳಲ್ಲಿಯೂ ಬರೆವಣಿಗೆಯು ಒಂದೇ ಕ್ರಮ ದಲ್ಲಿರುವಂತೆ ಮಾನೆಯ ಪುಸ್ತಕ (ಕಾಪಿ ಪುಸ್ತಕ) ಗಳನ್ನು ಬರೆಯಿಸುವಂತೆ ಆಯಾ ಸರಕಾರಕ್ಕೆ ಸೂಚಿಸುವುದು, (೯) ಕನ್ನಡದ ಬೇರೆ ಬೇರೆ ಪ್ರಾಂತಗಳಲ್ಲಿ ರೂಪ 5 ವಾರ್ಷಿಕ ಸಭೆಯಲ್ಲಿ ನಡೆದ ವಿಷಯಗಳನ್ನು ಮುಂದಿನ ಪುಟಗಳಲ್ಲಿ ನೋಡಬೇಕು. ೧೪೮