ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿಕ.] ಪರಿಸತ್ಕಾರ್ಯವಿನ ರ. [ಅಕ್ಟೋಬರ್ ೧೯೧೮. -- ವಂತೆ ಅಪ್ಪಣೆಯನ್ನು ಪಡೆಯಲು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೂಲಕ ಮೈಸೂರು ಸರಕಾರಕ್ಕೆ ವಿಜ್ಞಾಪನಾಪತ್ರಿಕೆಯನ್ನು ಒಪ್ಪಿಸತಕ್ಕುದು ಎಂಬ ಪಂಡಿತರ ಸೂಚನೆಯನ್ನು ಮ। ರಾ|| ಆರ್. ರಘುನಾಥರಾಯರು ಅನು ಮೋದಿಸಿದರು, ಕೊಂಚಕಾಲ ಚರ್ಚೆ ನಡೆದಮೇಲೆ ಮೇಲಿನ ಸೂಚನೆಯು ಸಭೆಯವರೆಲ್ಲರಿಂದಲೂ ಅಂಗೀಕರಿಸಲ್ಪಟ್ಟಿತು. (c) VIII ನೆಯ ನಿಬಂಧನೆಯಲ್ಲಿ ಉಳಿದ ೩೩ ಮಂದಿ ಕಾರ್ಯನಿರ್ವಾ ಹಕ ಸದಸ್ಯರುಗಳನ್ನು ವಾರ್ಷಿಕ ಸಭೆಯಲ್ಲಿಯೇ ಪರಿಷತ್ತಿನ ಸದಸ್ಯರು ಬ್ಯಾ ಲೆಟ್‌ ಮೂಲಕ ಚುನಾಯಿಸಬೇಕು. “ ಮೇಲ್ಕಂಡ ೩೩ ಮಂದಿ ಕಾರ್ಯನಿರ್ವಾ ಹಕ ಸದಸ್ಯರುಗಳಲ್ಲಿ " ಎನ್ನುವುದಕ್ಕೆ ಬದಲಾಗಿ, ೯ ನೆಯ ನಿಬಂಧನೆಯಲ್ಲಿ ಕಾಣಿಸಿರುವಂತೆ “ ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರುಗಳ ಸಂಖ್ಯೆಯನ್ನು ನಿರ್ಧರಿಸಿಕೊಳ್ಳಬೇಕು " ಎಂಬುದನ್ನು ಇಡತಕ್ಕುದು. (d) IX ನೆಯ ನಿಬಂಧನೆಯಲ್ಲಿ :-ಮತ್ತು ಕಾರ್ಯನಿರ್ವಾಹಕ ಮಂ ಡಲಿಯ ೩೦ ಮಂದಿ ಸದಸ್ಯರುಗಳಲ್ಲಿ “ ಮೈಸೂರುಸಂಸ್ನಾನಕ್ಕೆ ಹನ್ನೆರಡುಮಂದಿ, ಮುಂಬಯಿ ಆಧಿಪತ್ಯಕ್ಕೆ ಎಂಟು ಮಂದಿ, ಮದರಾಸಾಧಿಪತ್ಯಕ್ಕೆ ಐದುಮಂದಿ, ಹೈ ದರಾಬಾದು ಸಂಸ್ಥಾನಕ್ಕೆ ಇಬ್ಬರು, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಇಬ್ಬರು, ಕೊಡಗಿಗೆ ಒಬ್ಬರೂ ಇರಬೇಕು” ಎನ್ನುವುದಕ್ಕೆ ಬದಲಾಗಿ “ ಮೈಸೂರು ಸಂಸ್ಥಾನಕ್ಕೆ ಹನ್ನೆರಡುಮಂದಿ, ಮುಂಬಯಿ ಆಧಿಪತ್ಯಕ್ಕೆ ಹತ್ತು ಮಂದಿ ಸದ ಸ್ಯರುಗಳಿಗೆ ಒಬ್ಬೊಬ್ಬರಂತೆ ಎಂಟುಮಂದಿ ಸದಸ್ಯರವರೆಗೂ ಮದರಾಸು ಆಧಿಪತ್ಯಕ್ಕೆ ಹತ್ತು ಹತ್ತು ಮಂದಿ ಸದಸ್ಯರುಗಳಿಗೆ ಒಬ್ಬೊಬ್ಬರಂತೆ ಐದುಮಂದಿ ಸದಸ್ಯರು ಗಳವರೆಗೂ ಹೈದರಾಬಾದು ಸಂಸ್ಥಾನಕ್ಕೆ ಒಬ್ಬರೂ, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳಿಗೆ ಇಬ್ಬರೂ, ಕೊಡಗಿಗೆ ಒಬ್ಬರೂ” ಎಂದು ಇರತಕ್ಕುದು. ಷರಾ.- ಮುಂಬಯಿ ಮದರಾಸು ಮೈಸೂರು ಕೊಡಗು ಹೈದರಾಬಾದು ಪ್ರದಾತೃಗಳು ... ... ೧ ... ... ಪ್ರದಾತೃಗಳು ಆಜೀವಸದಸ್ಯರು ೧೫ ೬ ೪೫ ೧. ಪ್ರಥಮವರ್ಗದವರು ೬ ದ್ವಿತೀಯವರ್ಗದವರು ೬ ••• ೨೪ C C (. ೬೫ • ಒಟ್ಟು ೨೬ ೨೬ 30 ೧೩೫ ೩ ಒಟ್ಟು ಸದಸ್ಯರುಗಳು ೧೮೬. ಮುಂಬಯಿ, ಮದರಾಸು ಪ್ರಾಂತಗಳಲ್ಲಿ ಸದಸ್ಯರುಗಳ ಸಂಖ್ಯೆಯನ್ನು ತಕ್ಕಷ್ಟು ಹೆಚ್ಚಿಸುವುದಕ್ಕಾಗಿ ಮೇಲಿನ ಸೂಚನೆಯು ತರಲ್ಪಟ್ಟಿತೆಂದು ಅನೇಕ ೧೫೬