ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ೦l ಆಶ್ವಯುಜ.] ಪರಿಷತ್ಕಾರ್ಯವಿವರ. ಕರ್ಣಾಟಕ ಸಾಹಿತ್ಯ - -- (i) ಮುಂದಿನ ವರ್ಷ ಹೀಗೆ ಪುಸ್ತಕಗಳಿಗೆ ಉತ್ತೇಜನಕೊಡುವುದಕ್ಕಾಗಿ ೫೦೦ ರೂಪಾಯಿಗಳನ್ನು ಮುಂಜೂರು ಮಾಡಬೇಕು. (iii) ಮುಂದಿನ ವರ್ಷ ಕನ್ನಡದೊಳಗೆ ಯಾವ ಯಾವ ಗ್ರಂಥಗಳನ್ನು ಪರಭಾಷೆಯಿಂದ ಪರಿವರ್ತಿಸಬೇಕೆಂಬುದನ್ನೂ ಯಾರಿಂದ ಬರೆಯಿಸಬೇಕೆಂಬುದನ್ನೂ ನಿಶ್ಚಯಿಸುವುದಕ್ಕಾಗಿ ಆರು ಜನರದೊಂದು ಕಮಿಟಿಯನ್ನು ನಿಯಮಿಸಬೇಕು. ಅದರಲ್ಲಿ ಇಬ್ಬರು ಮದರಾಸು, ಇಬ್ಬರು ಮುಂಬಯಿ ಮತ್ತು ಇಬ್ಬರು ಮೈಸೂರು ಹೀಗೆ ಸದಸ್ಯರುಗಳಿರಬೇಕು. (iv) ಮೈಸೂರು ಭಾಷೆಯ ಎರಡು ಪುಸ್ತಕಗಳನ್ನು ಇತ್ತ ಕಡೆಯವರೂ, ಇತ್ತಕಡೆಯ ಎರಡು ಪುಸ್ತಕಗಳನ್ನು ಮೈಸೂರುಕಡೆಯವರೂ ಓದಿ ಗುಣದೋಷ ಗಳನ್ನು ಚರ್ಚಿಸಿ ಪ್ರಸಿದ್ಧಿಸಲಿಕ್ಕೆ ಒಂದು ಕಮಿಟಿಯನ್ನು ನಿಯಮಿಸಬೇಕು. ಮೇಲೆಕಂಡ ಸಲಹೆಗಳನ್ನು ಮು| ರಾ| ವಿ. ಬಿ. ಆಲೂರವರು ತತ್ಕಾಲದಲ್ಲಿ ಅಪ್ರಕೃತಗಳೆಂದು ವಾಪಸು ತೆಗೆದುಕೊಂಡರು. (e) ಕರ್ಣಾಟಕದ ಸಕಲಭಾಗಗಳಲ್ಲಿಯೂ ಭಾಷಾಜಾಗ್ರತೆಯನ್ನು ಹುಟ್ಟಿ ಸುವುದಕ್ಕೆ ಒಬ್ಬ ಉಪದೇಶಕನನ್ನು ನೇಮಿಸಬೇಕು. ಆತನಿಗೆ ಐವತ್ತು ರೂಪಾಯಿಗಳ ವರೆಗೆ ಸಂಬಳವನ್ನು ಕೊಡಬೇಕು. ಈ ಸಲಹೆಯನ್ನು ಮು| ರಾ! ಅಪೂರಾಯರು ಅನುಮೋದಿಸಿದರು. ಪರಿ ಷತ್ತಿನಲ್ಲಿ ದ್ರವ್ಯೂಪಪತ್ತಿಯು ಕಡಮೆಯಾಗಿರುವ ಸಂಗತಿಯನ್ನು ಮ। ರಾ। ಆರ್. ರಘುನಾಥರಾಯರವರು ತಿಳಿಸಿದರು. ಮೇಲಣ ಸಲಹೆಗೆ ಬದಲಾಗಿ ಭಾಷಾಭಿ ಮಾನಿಗಳು ಗೌರವಕ್ಕಾಗಿ ಸ್ಪಳಸ್ಸಳಕ್ಕೆ ಹೋಗಿ ಉಪನ್ಯಾಸ ಮುಂತಾದುವನ್ನು ಕೊಟ್ಟು ಜನಗಳಲ್ಲಿ ಭಾಷಾಭಿಮಾನವನ್ನೂ ಉತ್ಸಾಹವನ್ನು ಹೆಚ್ಚಿಸುವ ಪಕ್ಷಕ್ಕೆ ಅವರು ಕೇಳಿಕೊಂಡಲ್ಲಿ ಪ್ರಯಾಣದ ಖರ್ಚುಗಳನ್ನು ಮಾತ್ರ ದ್ರವ್ಯೂಪಪತ್ತಿ ಇದ್ದಾಗ ಪರಿಷತ್ತೇ ವಹಿಸತಕ್ಕುದು ಎಂದು ನಿರ್ಧರಿಸಲ್ಪಟ್ಟಿತು. (f) ಕರ್ಣಾಟಕದ ಒಂದು ನಖಾಶೆಯನ್ನೂ ವಾಲ್ಮಯದ ಸಾದ್ಯಂತ ಇತಿ ಹಾಸವನ್ನೂ ಪ್ರಸಿದ್ಧ ಪಡಿಸಬೇಕು. ಎಂಬ ಸಲಹೆಯು ಪರಿಷತ್ತಿನ ಕಾರ್ಯನಿರ್ವಾಹಕ ಮಂಡಲಿಯ ಪರ್ಯಾ ಲೋಚನೆಗೆ ತಕ್ಕುದಾಗಿದೆ ಎಂದು ನಿರ್ಧರಿಸಲ್ಪಟ್ಟಿತು. VII, ಮ। ರಾ!! ವೆಂಕಟನಾರಣಪ್ಪನವರು ಹಳೆಯ ೮ ನೆಯ ನಿಬಂಧ ನೆಗೆ ಬದಲಾಗಿ ಕಾರ್ಯನಿರ್ವಾಹಕ ಮಂಡಲಿಯಲ್ಲಿ ಒಬ್ಬರು ಅಧ್ಯಕ್ಷರು, ಒಬ್ಬರು ಉಪಾಧ್ಯಕ್ಷರು, ಒಬ್ಬರು ಗೌರವ ಕೋಶಾಧ್ಯಕ್ಷರು, ಒಬ್ಬರು ಗೌರವ ಕಾರ್ಯದರ್ಶಿ ಯವರು ಮತ್ತು ಪರಿಷತ್ತಿನ ಸದಸ್ಯರೊಳಗಿನಿಂದ ಬ್ಯಾಲೆಟ್‌ ಮೂಲಕವಾಗಿ ನಿಯಮಿತರಾದ ಮೂವತ್ತು ಮಂದಿ ಕಾರ್ಯನಿರ್ವಾಹಕ ಸದಸ್ಯರು ಇರತಕ್ಕುದು, ಮತ್ತು ୦୮