ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿಕೆ ಪರಿಷತ್ಕಾರ್ಯ ವಿವರ. - [ಅಕ್ಟೋಬರ್ ೧೯೧೮. “ ಕಾರ್ಯನಿರ್ವಾಹಕ ಮಂಡಲಿಗೆ ಆವಶ್ಯಕವೆಂದು ತೋರಿದರೆ ಒಬ್ಬರು ಸಹಾಯಕ ಕಾರ್ಯದರ್ಶಿಯು ಗೌರವಾಧಿಕಾರಿಯಾಗಲಿ ಅಥವಾ ವೇತನಪಡೆ ಯುವ ಅಧಿಕಾರಿಯಾಗಲಿ ಇರಬಹುದು, ವೇತನವನ್ನಾಗಲಿ ಬೇರೆವಿಧ ದ್ರವ್ಯ ರೂಪವಾದ ಪ್ರತಿಫಲವನ್ನಾಗಲಿ ಪಡೆಯುವ ಸಹಾಯಕ ಕಾರ್ಯದರ್ಶಿಯು ಕಾರ್ಯ ನಿರ್ವಾಹಕಮಂಡಲಿಯ ಸದಸ್ಯನಾಗಿ ಇರಕೂಡದು. " ಎಂಬ ಸಲಹೆಯನ್ನು ಸಭೆಯ ಮುಂದಿಟ್ಟರು. ಇದನ್ನು ಮ!! ರಾt ವೈ, ಕೆ. ರಾಮಚಂದ್ರರಾಯರವರು ಅನುಮೋದಿಸಿದರು. ಚರ್ಚೆಯು ಕೆಲವು ಕಾಲದವರೆಗೆ ನಡೆದಮೇಲೆ ಸಭಾಧ್ಯಕ್ಷರು ಸಲಹೆಗಳನ್ನು ವೋಟಿಗೆ ಹಾಕಿದರು. ಹತ್ತು ಮಂದಿ ಸಲಹೆಯ ಪರವಾಗಿ ಮತ್ತು ಹನ್ನೆರಡುಮಂದಿ ಸಲಹೆಗೆ ವಿರೋಧವಾಗಿ ವೋಟು ಮಾಡಿದರು. VIII, ಮ! ರಾ! ವೆಂಕಟನಾರಣಪ್ಪನವರು...."ಉಪಾಧ್ಯಕ್ಷರೂ, ಗೌರವ ಕೋಶಾಧ್ಯಕ್ಷರೂ, ಗೌರವ ಕಾರ್ಯದರ್ಶಿಯವರೂ ಬೆಂಗಳೂರಿನ ನಿವಾಸಿಗಳಾಗಿರ ತಕ್ಕುದು. ೩೦ ಮಂದಿ ಸಾಧಾರಣ ಸದಸ್ಯರುಗಳಲ್ಲಿ ೧೨ ಮಂದಿ ಮೈಸೂರು ಸಂಸ್ಥಾನದವರಾಗಿಯೂ, ಮಂದಿ ಮುಂಬಯಿ ಪ್ರಾಂತದವರಾಗಿಯೂ, ಐವರು ಮದರಾಸು ಆಧಿಪತ್ಯದವರಾಗಿಯೂ, ಒಬ್ಬರು ಹೈದರಾಬಾದು ಸಂಸ್ಥಾನದವರಾ ಗಿಯೂ, ಇಬ್ಬರು ದಕ್ಷಿಣ ಮಹಾರಾಷ್ಟ್ರ ಪ್ರಾಂತದವರಾಗಿಯೂ, ಒಬ್ಬರು ಕೊಡಗಿನ ವರಾಗಿಯೂ ಇರತಕ್ಕುದು. ಹೀಗೆ ಚುನಾವಣೆಯಾದ ಸಾಧಾರಣ ಸದಸ್ಯರಲ್ಲಿ ನಾಲ್ಕ ರಾದರೂ ಪಂಡಿತರಾಗಿಯಾಗಲಿ ಅಥವಾ ಕನ್ನಡದಲ್ಲಿ ಪಾಂಡಿತ್ಯವನ್ನು ಪಡೆದವ ರೆಂದು ಪರಿಗಣಿಸಲ್ಪಟ್ಟವರಾಗಿಯಾಗಲಿ ಇದು ಇವರ ಪೈಕಿ ಇಬ್ಬರು ಮೈಸೂರು ಸಂಸ್ಕಾನದವರಾಗಿಯೂ ಇಬ್ಬರು ಮದರಾಸಾಧಿಪತ್ಯ ದವರಾಗಿಯೂ ಮತ್ತೊಬ್ಬರು ಮುಂಬಯಿ ಆಧಿಪತ್ಯದವರಾಗಿಯೂ ಇರತಕ್ಕುದು." ಎಂಬ ಸೂಚನೆಯನ್ನು ಪರ್ಯಾಲೋಚನೆಗೆ ತಂದರು. ಇದನ್ನು ಮi ರಾ|| ಆರ್, ಎಚ್, ದೇಶಪಾಂಡೆಯವರು ಅನುಮೋದಿಸಿದರು. ಚರ್ಚೆಯು ಕೆಲವು ಕಾಲದವರೆಗೆ ನಡೆಯಿತು. ಕೊನೆಗೆ ಈ ಸಲಹೆಯನ್ನು ಅಂಗೀಕರಿಸಲಿಲ್ಲ. IX ರಾಜಮಂತ್ರಪ್ರಸೀಣ ಮ: ಎಚ್. ಪಿ. ನಂಜುಂಡಯ್ಯ, ಎಮ್, ಎ., ಎಮ್. ಎಲ್., ಸಿ. ಇ. ಇ., ಯವರು ಪರಿಷತ್ತಿನ ಅಧ್ಯಕ್ಷರಾಗಿಯೂ, ರಾಜಕಾರ್ಯ ಪ್ರಸಕ್ತ ರಾವ್ ಬಹದೂರ್ ಮ!! ರಾ: ಎಮ್. ಶಾಮರಾವ್, ಎಂ ಎ., ಅವರು ಉಪಾಧ್ಯಕ್ಷರಾಗಿಯ ಸದಸ್ಯರುಗಳಿ೦ದ ಏಕಾಭಿಪ್ರಾಯದಿಂದ ಬ್ಯಾಲೆಟ್‌ ಮೂಲಕ ವಾಗಿ ಚುನಾಯಿಸಲ್ಪಟ್ಟರು. ಈ X ಸದಸ್ಯರುಗಳು ಬ್ಯಾಲೆಟ್‌ ಮೂಲಕವಾಗಿ ಕೆಳಗೆ ಕಾಣಿಸುವ ಕಾರ್ಯ ನಿರ್ವಾಹಕ ಸದಸ್ಯರುಗಳನ್ನು ಚುನಾಯಿಸಿದರು. ನೋಟನ ಸತ್ರಗಳನ್ನು ಮ|| ರಾ! ೧೬