ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉದ್ಧತಲೇಖನಗಳು. ನಾಲ್ಕನೆಯ ಸಾಹಿತ್ಯ ಸಮ್ಮೇಲನ. ಧಾರವಾಡದಲ್ಲಿ ನಡೆದ ನಾಲ್ಕನೆಯ ಕರ್ಣಾಟಕಸಾಹಿತ್ಯ ಸಮ್ಮೇಲನವನ್ನು ಅಲ್ಲಿಯ “ ಶುಭೋದಯ” ಪತ್ರಿಕಾಕರ್ತರು (೨೪-೫-೧೯೧೮ ರಲ್ಲಿ) ಈು ಹೃದಯಂಗಮವಾಗಿ ವಣರ್ಿಸಿರು ತಾರೆ :- ಈ ವರ್ಷದ ಕರ್ಣಾಟಕ ಸಾಹಿತ್ಯ ಸಮ್ಮೇಲನನೆಂದರೆ ನಯನೋತ್ಸವವಾದ ಒಂದು ಮಹಾಸಮಾರಂಭವೇ ಆಯಿತು ! ಇಂತಹ ಸಮಾರಂಭವು ಧಾರವಾಡ ನಗರದ ಸ್ಥಾಪನೆಯಾದಂದಿನಿಂದ ಇಂದಿನವರೆಗೆ ಆಗಿರಲಿಕ್ಕಿಲ್ಲವೆಂದು ಹೇಳಬಹುದು. ಸರಸ್ವತೀದೇವಿಯ ಮಾಹಾತ್ಮವೇ ಅಷ್ಟು ಅಚಿಂತ್ಯವಾದದ್ದು ! ಅಕಬರನ ಸಭಾ ಮಂದಿರದಂಥ ಐಶ್ವರಮಂಡಿತವಾದ ಸ್ಥಾನದಲ್ಲಿ ನಮ್ಮ ಸಮ್ಮೇಲನವು ಕೂಡಿದ್ದಿಲ್ಲ ಸರಿ, ಮುತ್ತು ಹವಳ ಹಣಂಗಳ ಬೆಳಕಿಗೆ ಥಳಥಳಿಸುವ ಬಹಿರ್ವಚ್ರಸ್ಸಿಗಳಾದ ಸಂಸ್ಥಾನಾಧಿಸತಿಗಳ ನಿವಹವು ನಮ್ಮ ಸಮ್ಮಿಲನಕ್ಕೆ ಬಂದಿದ್ದಿಲ್ಲ ಸರಿ, ಆದರೆ ಅಂತರ್ಜ್ಯೋತಿಯಿಂದ ಪ್ರಕಾಶಮಾನರಾದ ಘನಪಂಡಿತರೂ ಸ್ವದೇಶೋತ್ಕರ್ಷೆ ಚುಗಳಾದ ಕಾರ್ಯಧುರಂಧರರೂ ನವರಸವರ್ಷಣರಾದ ಕವಿವರರೂ ಸಂದೇಹ ತಿಮಿರವನ್ನು ಶಕಲಶಕಲವಾಗಿ ಭಂಗಿಸಬಲ್ಲ ವಾಗ್ನಿಗಳೂ ಏಕತ್ರ ಕುಳಿತಿರುವ ಶಾಲಾಗೃಹವೇ ದೇವಸಭೆಯಾದ ಸುಧರ್ಮೇಗೆ ಸಮಾನವಾಗಿ ತೋರಿತು. ಅನೇಕ ವಾದ ರಾಜಕೀಯಶಾಖೆಗಳಲ್ಲಿಯ ಅಧಿಕಾರಸ್ಥರೂ ಬಿ ಏ., ಎಂ. ಏ.. ಎಲ್ ಎಲ್, ಬಿ., ಬಿ. ಎಲ್, ಮುಂತಾದ ಉನ್ನತ ಪ್ರತಿಯ ಪದವೀಧರರೂ, ವಕೀಲ ವೈದ್ಯರೂ, ಸೆಟ್ಟ ಸಾಹುಕಾರರೂ, ಬ್ರಾಹ್ಮಣ ಲಿಂಗಾಯತರೂ, ಹಿಂದು ಮುಸ ಲ್ಮಾನರೂ, ಅಹಂಕಾರದೈತಭಾವವಿರೋಧಾದಿಗಳನ್ನು ಸಂಪೂರ್ಣವಾಗಿ ಮರೆತು ಭಾಷಾದೇವಿಯ ಸೇವಾತತ್ಪರರಾಗಿ ಆಸ್ಥೆಯಿಂದ ಸಮ್ಮಿಲಿತರಾಗಿರುವುದನ್ನು ಕಂಡು ಸರಸ್ವತೀದೇವಿಯಲ್ಲದೆ ಹೆಚ್ಚಿನ ದೈವತವು ಮತ್ತೊಂದಿಲ್ಲವೆಂಬ ನಂಬಿಕೆಯು ಎಲ್ಲರ ಮನಸ್ಸಿನಲ್ಲಿಯೂ ತುಂಬಿಹೋಯಿತು. “ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂಬ ಭಗವದುಕ್ತಿಯಿರಲು, ಆ ಜ್ಞಾನಾಧಿದೇವತೆಯಾದ ಶ್ರೀ ಸರಸ್ವತೀ ದೇವಿಯ ಸಾನ್ನಿಧ್ಯದ ಪವಿತ್ರತೆಯನ್ನೆಷ್ಟೆಂದು ಬಣ್ಣಿಸಬಹುದು!!! ಸಮ್ಮೇಲನದ ಮೂರು ನಾಲ್ಕು ದಿವಸಗಳಲ್ಲಿ ಧಾರವಾಡದಲ್ಲೆಲ್ಲ ಉತ್ಸಾಹ ೧೬೬