ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕ.]

  • ೧೯೧೮.

- ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗರೂ, [ಅಕ್ಟೋಬರ್ ೧೯೧೮.

-. :: :: :: :: : --- , ... -

ಮುಂಚೆ ಆತ್ಮಜಾಗ್ರತೆಯನ್ನು ಹೊಂದಿ ತಮ್ಮ ತಮ್ಮ ಇತಿಹಾಸವನ್ನು ಬರೆಯಲು ಯತ್ನಿಸುವ ಕಾಲಕ್ಕೆ ಈ ಹೆಸರಾದವಿಜಯನಗರ ಸಾಮ್ರಾಜ್ಯವು ತಮ್ಮದೆಂದು ಮಹಾರಾಷ್ಟ್ರ ರೂ, ತಮ್ಮದೆಂದು ಆಂಧ್ರ ರೂ, ಪುಸ್ತಕರೂಪದಿಂದಲೂ ಲೇಖನ ರೂಪದಿಂದಲೂ ಬರೆದಿಟ್ಟಿದ್ದಾರೆ, ಮತ್ತು ಅವರ ಲೇಖನಗಳೇ ಜನರ ದೃಷ್ಟಿಗೆ ಮೊದಲು ಬಿದ್ದುದರಿಂದ ಅನೇಕ ಸಂಶೋಧಕರಿಗೆ ತಪ್ಪು ತಿಳಿವಳಿಕೆಯಾಗಲಿಕ್ಕೆ ಕಾರಣ ವಾಗಿರುತ್ತದೆ. ಮಹಾರಾಷ್ಟ್ರ ವಿದ್ವನ್ಮಣಿಗಳಾದ ಡಾಕ್ಟರ್‌ ಭಾಂಡಾರಕರ್ ಇವರು ತಾವು ಬರೆದ History of thc IDakhan ಎಂಬ ಪುಸ್ತಕದಲ್ಲಿ ಈ ಪ್ರಾಂತದೊಳಗೆ ಇತಿಹಾಸ ಕಾಲದಲ್ಲಿ ಆಳಿದ ಕರ್ಣಾಟಕ ರಾಜವಂಶದವರಾದ ಕದಂಬರು, ಚಾಲು ಕರು, ರಾಷ್ಟ್ರಕೂಟರು, ಕಾಲಚರ್ಯರು ಮುಂತಾದ ವೈಭವಶಾಲಿಗಳಾದ ಎಲ್ಲ ರಾಜ ಮನೆತನಗಳೂ ಮಹಾರಾಷ್ಟ್ರ ಮನೆತನಗಳೆಂದೂ, ಆಕಾಲದ ಜನರು ಮಹಾರಾಷ್ಟ್ರ ಭಾಷೆಯನ್ನೇ ಆಡುವ ಜನರೆಂದೂ ಬರೆದಿಟ್ಟು ದರಿಂದ ಅದನ್ನೇ ವೇದವಾಕ್ಯವೆಂದು ನಂಬಿ ಅವರ ತರುವಾಯ ಸರ ದೇಸಾಯಿ ಮುಂತಾದ ಮಹಾರಾಷ್ಟ್ರ ಇತಿಹಾಸ ಕಾರರು ವಿಜಯನಗರದ ರಾಜವಂಶವು ಕೂಡ ಮಹಾರಾಷ್ಟ್ರ ರಾಜವಂಶವೆಂದೂ ವಿಜಯನಗರದವರು ಮಹಾರಾಷ್ಟ್ರೀಯರೆಂದೂ ಏನೂ ಆತಂಕವಿಲ್ಲದೆ ತಮ್ಮ ಇತಿ ಹಾಸದಲ್ಲಿ ಬರೆದಿಟ್ಟಿರುತ್ತಾರೆ. ಅಲ್ಲದೆ ಮಹಾರಾಷ್ಟ್ರ ಇತಿಹಾಸವು ಪುರಾತನಕಾಲ ವೈಂದೂ ಕರ್ಣಾಟಕಕ್ಕೆ ಇತಿಹಾಸವೇ ಇಲ್ಲವೆಂದೂ ಬರೆದಿದ್ದಾರೆ. ಇದೇ ಮಾದರಿ ಯಾಗಿ ಆ೦ಧ್ರರು ಈಗಿನ ಕಾಲಕ್ಕೆ ಆಂಧ್ರರಾಷ್ಟ್ರೀಯತ್ವದ ಅಭಿಮಾನದಿಂದ ತುಂಬಿ ತುಳುಕಿ ವಿಜಯನಗರವು ಆಂಧ್ರ ರಾಜ್ಯವು ಮತ್ತು ವಿಜಯನಗರವು ಇದ್ದ ದೇಶವು ಸಹ ಆಂಧ್ರದೇಶವೆಂದು ಬರೆದಿಟ್ಟಿರುತ್ತಾರೆ. ಆದರೆ ಮೇಲೆ ವರ್ಣಿಸಿದ ಅನೇಕ ರಾಜಮನೆತನಗಳು ವಿಜಯನಗರಸಾಮ್ರಾಜ್ಯವು ಕೇವಲ ಕನ್ನಡಿಗರದೇ ಇದ್ದು ಕನ್ನಡಿಗರು ಮಾತ್ರ ಸುಮ್ಮನೆ ಕುಳಿತಿದ್ದುದರಿಂದ ಮೇಲಿನ ನಮ್ಮ ನೆರೆಹೊರೆಯ ರಾಷ್ಟ್ರದವರ ಅಸತ್ಯ ಲೇಖನಗಳೇ ವಿದೇಶಿಯರಿಗೂ ನಮ್ಮಗಳಿಗೂ ಸಹ ನಿಜವೆಂದು ತೋರುತ್ತಿವೆ. ಮತ್ತೆ ನಿಜಸಂಗತಿ ತಿಳಿಯದೆ ಇದ್ದುದರಿಂದ ಅನೇಕ ಮೂಢ ಕನ್ನಡಿ ಗರು ಅವರ ಲೇಖಗಳನ್ನೇ ಓದಿ ಅವು ನಿಜವೆಂದು ಭಾವಿಸಿ “ ಕನ್ನಡಿಗರಿಗೆ ಇತಿ ಹಾಸವಿಲ್ಲ, ಕನ್ನಡಿಗರಲ್ಲಿ ಶೌರ್ಯವಿಲ್ಲ, ಕನ್ನಡ ನುಡಿ ಕಾಡುನುಡಿ " ಎಂದು ಪ್ರಲಾಪ ಗಳನ್ನು ಮಾಡಿ ಕರ್ಣಾಟಕ ದೇಶದ ದ್ರೋಹವನ್ನು ಮಾಡತೊಡಗಿದ್ದಾರೆ. ವಿಜಯ ನಗರವು ಇದ್ದ ನಾಡಿನಲ್ಲಿ ಈವತ್ತಿಗೂ ಕೇವಲ ಶುದ್ದ ಕನ್ನಡನುಡಿಯೇ ಪ್ರಚಾರ ದಲ್ಲಿದೆ. ವಿಜಯನಗರದ ಒಂದು ಭಾಗವಾದ ಹೊಸಪೇಟೆಯ ಹೆಸರು ಕನ್ನಡವೇ. ವಿಜಯನಗರದಲ್ಲಿ ಸದ್ಯಕ್ಕೆ ದೊರೆಯುವ ಶಿಲಾಲಿಸಿಗಳು ಕೇವಲ ಕನ್ನಡದಲ್ಲಿಯೇ ಇರುತ್ತವೆ. ವಿಜಯನಗರದ ಹಾಳಪಟ್ಟಣದಲ್ಲಿ ಎತ್ತ ನೋಡಿದರತ್ತ ಕಾಣುವ ಮೂರ್ತಿಗಳೂ ಗುಡಿಗಳೂ ಪೇಟೆಗಳೂ ಈವತ್ತಿಗೂ ಕನ್ನಡ ಹೆಸರನ್ನೇ ಧರಿಸಿರುತ್ತವೆ. ಉದಾ. ಕಡಲೆಕಾಳ ಗಣಪ್ಪ, ಸಾಸಲೆಕಾಳ ಗಣಪ್ಪ, ಉದ್ದಾನ ವೀರಭದ್ರ, ತ್ವರಿತ ಕಾವಲೆ, ಮಹಾನವಮಿ ದಿಬ್ಬ, ಆನೆಸಾಲು, ಸೂಳೆ ಬಾಜಾರ, ಮಲ್ಲಪ್ಪನಗುಡಿ, ಅಳಿಯಾರಾಮನ ಗರಡಿಮನೆ ಈ ಪ್ರಕಾರ ಅನೇಕ ಅಚ್ಚಗನ್ನಡ ಹೆಸರುಗಳೇ ಎಲ್ಲಿ ೧೭೮