ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಆಶ್ವಯುಜ.] ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗ ರೂ. ಕರ್ಣಾಟಕ ಸಾಹಿತ್ಯ ನೋಡಿದರಲ್ಲಿ ಕಾಣುತ್ತವೆ. ಕೃಷ್ಣನ ಗುಡಿಯಲ್ಲಿಯ ಶಿಲಾಲೇಖವು ಕೇವಲ ಕನ್ನಡ ದಲ್ಲಿಯೇ ಇದೆ. ಕನ್ನಡದ ಹೊರತಾಗಿ ವಿಜಯನಗರದಲ್ಲಿಯೂ ಅದರ ಸುತ್ತ ಮುತ್ತಲಿನ ನಾಡಿನಲ್ಲಿಯೂ ಬೇರೆ ದೇಶ ಭಾಷೆಇಲ್ಲ. ಸದ್ಯಕ್ಕೆ ಮಾತ್ರ ಸರಕಾರ ದವರ ಕಾಗದ ಪತ್ರಗಳಲ್ಲಿ ಕನ್ನಡಿಗರ ಮೂರ್ತಿಮತ್ತಾದ ಸೋಮಾರಿತನದ ಫಲದಿಂದ ಆಂಧ್ರ ಭಾಷೆ ಕಾಣುತ್ತದೆ, ಮತ್ತು ಈ ಸಂಸ್ಥೆಯನ್ನು ಮುಂದೆ ಮಾಡಿ ಆಂಧ್ರರು ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಜಿಲ್ಲೆ ಎಂದು ಕೂಗಾಟವನ್ನೆಬ್ಬಿಸಿ ಆ ಕರ್ಣಾಟಕ ಭಾಗವನ್ನು ನುಂಗಿಬಿಟ್ಟಿದ್ದಾರೆ. ವಿಜಯನಗರವನ್ನು ಸ್ಥಾಪಿಸಿದ ಶ್ರೀ ವಿದ್ಯಾರಣ್ಯ ಸ್ವಾಮಿಗಳಿಗೆ ಈವತ್ತಿಗೂ - ಕರ್ಣಾಟಕ ಸಿಂಹಾಸನ ಸ್ಥಾಪನಾಚಾರ್ಯ ' ರೆಂಬ ಬಿರುದು ಇದೆ. ವಿಜಯನಗರದ ಮೊದಲನೆಯ ಅರಸನಾದ ಹರಿಹರರಾಯನು ದೋರಸಮುದ್ರದಿಂದ ಬಂದ ರಾಜನೆಂದು ಶೃಂಗೇರಿಯಲ್ಲಿ ದೊರೆತ ಶಾಸನ ಲೇಖದ ಸಂದರ್ಭದ ಮೇಲಿಂದ ಪೂರ್ಣವಾಗಿ ಕಂಡುಬರುತ್ತದೆ. ಹೀಗಿದ್ದು ಆಂಧರ ಜಾ ಣತನದಿಂದ ಇಂಗ್ಲಿಷ್ ಇತಿಹಾಸಕಾರರೂ ಅದನ್ನು ಓದಿದ ದೇಶೀಯ ಜನರೂ ಹರಿ ಹರರಾಯನನ್ನು ಓರಂಗಲ್ಲಿಂದ ಬಂದ ಪುರುಷನೆಂದು ಭಾವಿಸುತ್ತಾರೆ, ಹರಿಹರ ರಾಯನಿಗೆ ಹರಿಯಪ್ಪ ಒಡೆಯರು ಎಂಬ ಬಿರುದು ಇತ್ತು. ಹರಿಹರರಾಯನ ಕಾಲದ ಶಿಲಾಲೇಖಗಳಲ್ಲಿ ಇದು ಕಂಡುಬರುತ್ತದೆ. ಈ ಬಿರುದು ಹರಿಹರರಾಯ ನಿಗೆ ದೋರಸಮುದ್ರದ ಬಲ್ಲಾಳ ಮಹಾರಾಜರ ಕಡೆಯಿಂದ ದೊರೆತ ಕೇವಲ ಕನ್ನಡ ಬಿರುದು ಇರುತ್ತದೆ. ಬುಕ್ಕರಾಯನ ಶಿಲಾಶಾಸನಗಳಲ್ಲಿ ಅವನಿಗೆ “ ಭಾಷೆಗೆ ತಪ್ಪುವ ರಾಯರ ಗಂಡ' ನೆಂಬ ಕೇವಲ ಕನ್ನಡ ಬಿರುದು ಇತ್ತೆಂದು ತೋರುತ್ತದೆ. ಮತ್ತು ಅವನು ಆಂದ್ರರನ್ನು ಗೆದ್ದನೆಂದು ಶಿಲಾಲೇಖದಲ್ಲಿ ಬರೆದಿರುತ್ತದೆ. ಬುಕ್ಕ ರಾಯನು ಆಂಧ್ರನಾಗಿದ್ದರೆ ಅವನು ಆಂಧರನ್ನು ಜಯಸಿದನೆಂದು ಎಂದಿಗೂ ಬರೆ ಯುತ್ತಿರಲಿಲ್ಲ. ಬುಕ್ಕರಾಯನ ಮಗನಾದ ಹರಿಹರರಾಯನು ಕನ್ನಡ ಭಾಷೆಗೆ ಆಶ್ರಯವಾಗಿದ್ದನು. ಅವನಿಗೆ ಕರ್ಣಾಟಕವಿದ್ಯಾ ವಿಲಾಸನೆಂಬ ಬಿರುದು ಇತ್ತು. ಮತ್ತು ಬುಕ್ಕರಾಯನ ಸೊಸೆ ಬರೆದ ವೀರಕಂಪಣಚರಿತೆ ಎಂಬ ಸಂಸ್ಕೃತ ಕಾವ್ಯ ದಲ್ಲಿ ಕರ್ಣಾಟಕ ದೇಶದಾಚೆ ದ್ರಾವಿಡ ದೇಶವನ್ನು ವೀರಕಂಪಣ್ಣನು ಪ್ರವೇಶಿಸಿದ ನೆಂದು ಬರೆದಿರುತ್ತದೆ. ೨-ನೆಯ ದೇವರಾಯನಿಗೆ ಇಮ್ಮಡಿ ದೇವರಾಯನೆಂದು ಕರೆಯುತ್ತಾರೆ, ಮತ್ತು ಅವನು ಆನೆಯಬೇಟೆಗಾರನೆಂಬ ಬಿರದನ್ನು ಧರಿಸಿದವನು. ಶ್ರೀಕೃಷ್ಣದೇವರಾಯನಿಗೆ ಆ ಕಾಲದ ಆಂಧ್ರ ಕವಿಗಳು ಕನ್ನಡ ರಾಜ್ಯ ರಮಾರಮಣ ನೆಂದು ತಮ್ಮ ಗ್ರಂಥಗಳಲ್ಲಿ ಸಂಬೋಧಿಸಿದ್ದಾರೆ. ರಾಮರಾಜನು ಅಳಿಯರಾಮ ರಾಜನೆಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದನು. ಶ್ರೀ ಕೃಷ್ಣದೇವರಾಯನು ಮಾತ್ರ ತೆಲಗುನಾಡಿನವನೆಂದು ಭಾವಿಸಬಹುದು. ಆದರೆ ಅವನ ಹಿಂದೆ ಆಳಿದ ಆರ ಸರೂ ಮತ್ತು ರಾಮರಾಜನೇ ಮೊದಲಾದವರೂ ಕನ್ನಡಿಗರು, ರಾಮರಾಜನ ವಂಶಕ್ಕೆ ಇತಿಹಾಸದಲ್ಲಿ ಈವತ್ತಿಗೂ ಕರ್ಣಾಟಕವಂಶವೆಂದು ಕರೆಯುತ್ತಾರೆ. ಈ ಕಾಲದ ಹೆಸರಾದ ಮಹಾಪುರುಷರ ಹೆಸರುಗಳು ಕೂಡ ಕೇವಲ ಕನ್ನಡದಲ್ಲಿಯೇ ಇರುತ್ತವೆ. ಬಸವಯ್ಯ ಧನ್ನನಾಯಕ, ಮಲ್ಲಪ್ಪ ಒಡೆಯರ ಸಾಯಣ ಮಂತ್ರಿ, ಕಂಪಣ್ಣ, ೧೭೯