ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ.] ವಿಜಯನಗರ ಸಾಮ್ರಾಜ್ಯವೂ, ಕನ್ನಡಿಗ ರೂ, [ಅಕ್ಟೋಬರ್ ೧೯೧೮. ೧೧೮, ಇತಿಹಾಸವನ್ನು ನಮ್ಮ ಕಣ್ಣೆದಿರಿಗೆ ಇಟ್ಟು ಕೊಂಡು ನಾವು ಮುಂಬಯಿ ಕರ್ಣಾಟಕದ ಕನ್ನಡಿಗರು ಉತ್ತರಾಭಿಮುಖವಾದ ನಮ್ಮ ದೃಷ್ಟಿಯನ್ನು ದಕ್ಷಿಣದ ಕಡೆಗೆ ತಿರುವಿ ದರೆ ಮತ್ತು ಇದೇ ಮಾದರಿಯಾಗಿ ಪೂರ್ವದಿಕ್ಕಿಗೆ ನೋಡುತ್ತಿರುವ ಮದ್ರಾಸ ಇಲಾಖೆಯ ಕನ್ನಡಿಗರು ಪಶ್ಚಿಮಾಭಿಮುಖರಾಗಿ ಇಡಿಯ ಕರ್ಣಾಟಕವನ್ನೇ ತಮ್ಮ ಧೈಯವೆಂದು ಭಾವಿಸಿ ನೆರೆಹೊರೆಯವರ ನೆರಳಿನಲ್ಲಿ ನಿಲ್ಲದೆ ತಮ್ಮ ಸ್ವಂತ ಗುಡಿಸ ಲಲ್ಲಿ ಕುಳಿತು ಇನ್ನಾದರೂ ಸ್ವತಃ ವಿಚಾರವನ್ನು ಚೆನ್ನಾಗಿ ಮಾಡಿ ಭಾವಿಹಿಂದೀ ರಾಷ್ಟಘಟನೆಯ ಕೆಲಸದಲ್ಲಿ ಕರ್ಣಾಟಕಸ್ಟರೆಂಬ ಭಾವನೆಯಿಂದ ಕೆಲಸವನ್ನು ಮಾಡಿ ದರೆ ಕರ್ಣಾಟಕದ ಉದ್ಘಾರವು ನಿಶ್ಚಯವಾಗಿ ಆಗುವುದು. ೧೮3