ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಳಿದ ಕರ್ನಾಟಕವಿಗಳು ಸಂಸ್ಕೃತ ಪದಗಳನ್ನು ಕರ್ಣಾಟ ಗ್ರಂಥಗಳಲ್ಲಿ ವಿಶೇಷ ವಾಗಿ ಉಪಯೋಗಿಸಕೂಡದೆಂದು ಅಭಿಪ್ರಾಯಪಡುತ್ತಿದ್ದರು. ೫, ಕ್ರಿ. ಶ. ಒಂಬತ್ತನೆಯ ಶತಮಾನವಲ್ಲಿ ಹುಟ್ಟಿದ ಕವಿರಾಜ ಮಾರ್ಗವೆಂಬ ಗ್ರಂಥದಲ್ಲಿ ದಕ್ಷಿಣ ಮಾರ್ಗ,ಉತ್ತರಮಾರ್ಗ, ಉತ್ತರೋತ್ತರೆ ಮಾರ್ಗಎಂಬುವುಕಾಣ ಬರುತ್ತವೆ.ದಕ್ಷಿಣ ದಕ್ಷಿಣ ಮಾರ್ಗವೆಂಬುದೊಂದು ಇತ್ತೆಂದು ಊಹಿಸಬಹುದಾಗಿದೆ. ಇದಕ್ಷಿಣ ದಕ್ಷಿಣ ಮಾರ್ಗದಲ್ಲಿ ತಮಿಳಿನ ಪ್ರಯೋಗಗಳು ಅನೇಕವಾಗಿ ಸೇರಿ ಕೊಂಡಿ ದ್ದುವು.ತಂಗೆ, ಮಾಡಿದೊ೦, ಗೆಯ್ಯುದು, ಎಂಜೋಂ, ಮಾಡಿದೊಳ' (ಮಾಡಿದವಳು) ಮುಂತಾದ ಪ್ರಯೋಗಗಳು ಈ ಆದಿದ್ರರಾಣದಲ್ಲಿ ಹೇರಳವಾಗಿರುವ, ದಕ್ಷಿಣಮಾ ರ್ಗವೆಂಬುದು ತಮಿಳು ಮಾರ್ಗವಾಗಿತ್ತೆಂದು ಈ ಗ್ರಂಥದಿಂದ ವ್ಯಕ್ತವಾಗುತ್ತದೆ. ಉತ್ತರಮಾರ್ಗವೆಂಬುದು ತೆಲುಗಿನ ಪ್ರಯೋಗಗಳನ್ನೂ ಳಕೊಂಡಿತ್ತು, ಚಾವಂಡ ರಾಯನ ಆದಿಪುರಾಣವನ್ನು ದಕ್ಷಿಣಮಾರ್ಗಕ್ಕೆ ಆದರ್ಶವಾಗಿರುವಂತೆ ಇಟ್ಟು ಕೊಳ್ಳ ಬಹುದು.ನೃಪತುಂಗನ ಕವಿರಾಜ ಮಾರ್ಗವನ್ನು ನಡುವಣ ಕನ್ನಡಕ್ಕೆ (ತಿರುಳ್ಳನ್ನಡಕ್ಕೆ) ಆದರ್ಶವಾಗಿರುವಂತೆ ಇಟ್ಟು ಕೊಳ್ಳಬಹುದು. ಕೃಷ್ಣಾ ನದಿಗೆ ಉತ್ತರದಲ್ಲಿ ಹನ್ನೆರಡ ನೆಯ ಶತಮಾನದ ಮಧ್ಯದಲ್ಲಿ ಹುಟ್ಟಿದ ವೀರಶೈವರ ಕರ್ಣಾಟ ಗದ್ಯ ಗ್ರಂಥಗಳನ್ನು ಉತ್ತರಮಾರ್ಗಕ್ಕೆ ಆದರ್ಶವಾಗಿರುವಂತೆ ಭಾವಿಸಬಹುದು. ೬. ಚಾವುಂಡರಾಯನಿಗೆ ಕನ್ನಡದಲ್ಲಿಯೂ ಪ್ರಾಕೃತದಲ್ಲಿಯೂ ಸಂಸ್ಕೃತದ ಲ್ಲಿಯೂ ಅದ್ಭುತವಾದ ಪಾಂಡಿತ್ಯ ಎದ್ದಿತೆಂಬುದು ಗ್ರಂಥದ ಆದಿಯಲ್ಲಿ ಇರುವ ಪದಗ ೪ಂದಲೂ ೨೯ ನೆಯಮತ್ತು ೪೩ ನೆಯ ಪ್ರತಿಗಳಲ್ಲಿರುವ ಪದ್ಯಗಳಿಂದಲೂ ಅಲ್ಲಲ್ಲಿ ಬರೆದಿರುವ ಗಾಹೆಗಳಿಂದಲೂ ವ್ಯಕ್ತವಾಗು ವುದು. ಇಪ್ಪತ್ತೊಂಬತ್ತನೆಯ ಪುಟದಲ್ಲಿರುವ ಮರುದೇವಿಯ ಸ್ವಪ್ನಕ್ಕೆ ಸಂಬಂಧಿಸಿದ ಅರ್ಧಸಮವೃತ್ರವರ್ಗಕ್ಕೆ ಸೇರಿದ ಪದ್ಯಗಳ ಹೆಸರೇನೆಂಬುದು ಗೊತ್ತಾಗಲಿಲ್ಲ. ಚಾವುಂಡರಾಯ ಪ್ರರಾಣದ ೪೭ ನೆಯ ಪುಟದಲ್ಲಿ ಹೇಳಿರುವ ದಿವ್ಯಾ ಪ್ರಕೀರತ್ನ ಮತೋನಿಧಿ | ದಿವಾಚನ ಭೋಜನ ಭಾಜರ್ನೇಚ | ದಿವ್ಯಾನಿ ಶಯ್ಯಾಸನ ವಾಹನಾಸಿ ! ನಾಟ್ಟೇನಸಾರ್ಧಂತು ದಶಾಂಗ ಭೋಗಂ | ಎಂಬ ದಶಾಂಗ ಭೋಗದ ಕ್ರಮಕ್ಕೂ ಆದಿಸಂಪನ ಆದಿಪುರಾಣದಲ್ಲಿ ಹೇಳಿರುವ ಕ೦ಗಿ ಪರನಿಧಿ ಶಯ್ಯಾಸನರಾ | ಒರತ್ನ ವಾಹನವರೂಥಿನೀನಾಜ್ಯಸಭಾ | ಪರಿಕರಸಹಿತಂ ಭರತೇ ! ಶ್ವರಂಗೆ ಸಮಸಂದುದೀ ದಶಾಂಗಂ ಭಗಂ | ಎಂಬ ಪದ್ಯದ ಕ್ರಮಕ್ಕೂ ವ್ಯತ್ಯಾಸವಿರುತ್ತದೆ: ೬, ಈ ಚವಂಡರಾಯ ವುರಾಣದ ಆದಿಪುರಾಣ ಭಾಗವನ್ನು ಪರಿಷ್ಕರಿಸಲು ಪಂಡಿತ ಎಂ, ಕೃಷ್ಣಪ್ಪನವರನ್ನ ಪಂಡಿತ ಎಂ ರಾಮಶೇಷ ಶಾಸ್ತ್ರಿಗಳನ್ನೂ ನಿಯಮಿ ಸಲಾಯಿತು, ಮೈಸೂರ್ ಗೆ” # ಓರಿಯಂಟಲ್ ಲೈಬ್ರರಿಯವರು ದಯೆಯಿಟ್ಟು ಕಳುಹಿಸಿಕೊಟ್ಟಿದ್ದ ಚಾವುಂಡರಾಯಪರಣದ ಪ್ರತಿಯೊಂದರಿಂದಲೇ ಇದನ್ನು ಪರಿ