ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ ಮುಹಮದ್ ಗವಾನನ ಚರಿತ್ರೆ. [ ಜನವರಿ ೧೯೧೯. ಖೇಳಣಪಟ್ಟಣದ ಶ೦ಕರರಾಯನೂ ತಂತ್ರದಿಂದ ಬಹುಸಿಯವರ ಸೇನೆಯನ್ನು ಆವರಿಸಿಕೊಂಡು ದಿಕ್ಕು ತೋರದಹಾಗೆ ತುರುಕರನ್ನು ಕಾಡಿನಲ್ಲಿ ಸೇರಿಸಿಕೊಂಡು ಕಣ್ಣ ಬಿಟ್ಟಾಡುವಂತೆ ಮಾಡಿ ಅವರನ್ನು ಪೂರ್ತಿಯಾಗಿ ಸೋಲಿಸಿದಾಗ ಪಟ್ಟಿ ಅವಮಾನವನ್ನು ಮಂತ್ರಿಯು ಮರೆತಿರಲಿಲ್ಲ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟು ಕೊಂಡು ಗವಾನನು ಸೇನಾಸಮೇತನಾಗಿ ತಾನೇ ೧೪೬೯ ರಲ್ಲಿ ಕೊಂಕಣದ ಮೇಲೆ ಹೊರಟನು. ಕೂಡಲೆ ರಾಮಕಳವೆಂಬ ಕೋಟಿಯನ್ನು ಹಿಡಿದುಕೊಂಡು ಶತ್ರುಗಳನ್ನು ಸೋಲಿಸಿದನು. ಕೋಹನವೆಂಬ ಕೋಟಿಯ ತುರುಕರ ವಶ ವಾಯಿತು. ಶಂಕರರಾಯನ ರಾಜ್ಯವು ಸಮುದ್ರತೀರದವರೆಗೂ ವ್ಯಾಹಿಸಿತ್ತು. ಈ ರಾಜನಿಗೆ ಸೇರಿದ ೩೦೦ ಹಡಗುಗಳು ಹಗೆಗಳೊಡನೆ ಕಾದುವುದಕ್ಕೆ ಯಾವಾ ಗಲೂ ಸಿದ್ಧವಾಗಿದ್ದವು, ವ್ಯಾಪಾರಮಾಡುವ ನೆವದಲ್ಲಿ ಆಗಾಗ ಪಿಶೇಷವಾಗಿ ಈ ದೇಶಕ್ಕೆ ಬಂದು ಹಡಗು ಇಳಿಯುತ್ತಾ ಇದ ತುರುಕರಿಗೆ ಶ೦ಕರರಾಯನಿಂದ ಬಹಳ ನಿರ್ಬಂಧ ಉಂಟಾಗಿತ್ತು. ಇದನ್ನು ಕಂಡು ಗವನನು ಅವನೊಡನೆ ರಾಜಿ ಮಾಡಿಕೊಳ್ಳ ಬೇಕೆಂದು ಯತ್ನ ಮಾಡಿದನು. ಆ ದೊರೆಯು ಇದಕ್ಕೆ ಒಪ್ಪ ಲಿಲ್ಲ. ಆದಕಾರಣ ಮಂತ್ರಿಯು ಆ ರಾಯನೊಡನೆ ಯುದಕ್ಕೆ ಅನುವಾದನು. ಇದಲ್ಲದೆ ವಿಜಯನಗರದ ಸಂಸ್ಥಾನದವರು ಬಹು ಪ್ರಬಲರಾಗಿ ತಮ್ಮ ರಾಜ್ಯ ವನ್ನು ಪಶ್ಚಿಮಸಮುದ್ರದವರೆಗೂ ವಿಸ್ತರಿಸಿದ್ದರು. ಅಲ್ಲಿನ ರೇವುಪಟ್ಟಣಗಳೆಲ್ಲಾ ಇವರಿಗೆ ಸೇರಿದ್ದವು. ದೇಶಾಂತರದ ಸರಕುಗಳೆಲ್ಲಾ ಅಲ್ಲಿಗೆ ಹಡಗಿನ ಮೇಲೆ ಬಂದು ಇಳಿದು ವ್ಯಾಪಾರ ಹೆಚ್ಚಾಗಿ ನಡೆಯುತ್ತಾ, ಆ ದೇಶದ ಪ್ರಸಿದ್ದವಾದ ಇಶ್ವರ ಹೆಚ್ಚು ವುದಕ್ಕೆ ಕಾರಣವಾಗಿತ್ತು. ಇಂಥಾ ವ್ಯಾಪಾರಕ್ಕೆ ಆಗ ಗೋವಪಟ್ಟಣ ಮುಖ್ಯ ಸ್ನಾನವಾಗಿತ್ತು. ಈ ರೇವುಪಟ್ಟಣವನ್ನು ಗವಾನನು ವಶಮಾಡಿಕೊಳ್ಳ ದಿದ್ದರೆ ಮರಾಟೇಸರದಾರರನ್ನು ಅಡಗಿಸುವುದು ಸಾಧ್ಯವಾಗಿ ತೋರಲಿಲ್ಲ. ಆದರೆ ಗೋವ ವನ್ನು ಹಿಡಿಯಲು ಯುದ್ದದ ಹಡಗುಗಳಿಲ್ಲದೆ ಆಗುತ್ತಿರಲಿಲ್ಲ. ಬಹಮನಿರಾಜ್ಯ ದವರು ಅದುವರೆಗೆ ಯದ್ಧದ ಹಡಗುಗಳನ್ನೇ ಅರಿಯರು. ಗವಾನನು ಇದನ್ನು ಯೋಚಿಸಿ ಹೊಸದಾಗಿ ೧೨೦ ಯುದ್ದ ದ ಹಡಗುಗಳನ್ನು ಕಟ್ಟಿಸಿ, ಏನೋ ಒಂದು ನೆಪವನ್ನು ತೆಗೆದು ವಿಜಯನಗರದವರೊಡನೆ ಯುದ ಮಾಡಿ ಗೋವಪಟ್ಟಣವನ್ನು ಜೈಸಿಕೊಂಡನು: ಮತ್ತು ಕೊಲ್ಲಾಪುರವನ್ನು ಹಿಡಿದುಕೊಂಡು ಅಲ್ಲಿ ತಮ್ಮ ಮುಖ್ಯ ಪಾಳಯವನ್ನಿಟ್ಟುಕೊಂಡು ಎರಡು ವರುಷಗಳವರೆಗೂ ಕಾದಿ ಅತ್ತ ಗೋವವನ್ನೂ ಇತ್ತ ಖೇಳಣಪಟ್ಟಣವನ್ನೂ ಸಾಧಿಸಿ ಅಲ್ಲೆಲ್ಲಾ ಹರಡಿಕೊಂಡು ಹಾವಳಿ ಮಾಡುತ್ತಿದೆ ಮರಾಟೆಸರದಾರರೆಲ್ಲರನ್ನೂ ಅಡಗಿಸಿದನು. ಈ ಜಗಳದಲ್ಲಿ ಸಮುದ್ರದಮೇಲಿನ ಯುದೆ ಕೂಡ ನಡೆಯಿತು. ಯೂರೋಪುಖಂಡದ ಜನರು ಈ ದೇಶಕ್ಕೆ ಬರುವುದಕ್ಕೆ ಮುಂಚೆ ನಮ್ಮವರು ಜಹಜುಗಳನ್ನು ಅರಿಯಲೆ ಅರಿಯರೆಂತಲೂ ಯುವ ದ ಹಡಗುಗಳ ವಿಚಾರವನ್ನಂತೂ ಕಂಡವರೇ ಅಲ್ಲವೆಂತಲೂ ನಮ್ಮ ದೇಶೀಯರ ಸಾ ಕ್ರಮವನ್ನೂ ಯೋಗ್ಯತೆಯನ್ನೂ ಅಲಗಳೆಯತಕ್ಕ ವಿದೇಶಾಭಿಮಾನಿಗಳಿಗೆ ಮೇಲಿನ ಸಂಗತಿಯು ಉತ್ತರವಾಗಿದೆ.