ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ. ಮಹಮೂದ್ ಗವಾನನ ಚರಿತ್ರೆ. ಜನವರಿ ೧೯೧೯. ಹೆಚ್ಚಿನ ವಿಷಯವಾಗಿ ಕಂಡುಬರುವುದು, ಮತ್ತು ನಮ್ಮಲ್ಲಿ ಕೇವಲ ಪರಿಶುದ್ಧರು ಯೋಗನಿಷ್ಟರು ಜ್ಞಾನಸಿಷ್ಟರು ಎನಿಸಿಕೊಂಡಿರುವವರ ವಸ್ತ್ರಕ್ಕೆ ಮೇಲೆ ಹೇಳಿದ ಪ್ರಾಶಸ್ತವಲ್ಲದೆ ಇತರರು ಧರಿಸಿದ ವಸ್ತ್ರಕ್ಕೆ ಅಂಥ ಗೌರವವನ್ನು ನಾವು ಕೊಡುವು ದಿಲ್ಲ; ಮುಸಲ್ಮಾನರಲ್ಲಿ ಹಾಗೆ ಗೌರವವನ್ನು ತೋರಿಸತಕ್ಕದ್ದು ಒಂದು ವಿಶೇಷ ವಿಧಿಯಾಗಿ ಕಂಡುಬರುವುದು, ೫ ನೆಯ ಅಧ್ಯಾಯ. ಪರಾರಿನ ಸ್ಥಿತಿ. - ಇದು ಬಹಮನಿ ದೊರೆಗಳ ಚರಿತ್ರೆಯಲ್ಲಿ ಅವರ ಮಹಾಮಂತ್ರಿಯ ಚರಿತ್ರೆ ಯಾಗಿದೆ. ಆದರೂ ರಾಜ್ಯಭಾರದಲ್ಲಿ ವಿಶೇಷವಾಗಿ ಆಡಳಿತವನ್ನು ನಡೆಯಿಸಿದ ಆ ವಸೀರನ ಕಾಲದಲ್ಲಿ ದರಬಾರಿನಸ್ಥಿತಿ ಹೀಗಿತ್ತೆಂದು ತಿಳಿಯಬೇಕಾದುದು ಯುಕ್ತ ವೆಂದು ತೋರುವುದು. ಈ ಬಹಮನಿ ನವಾಬರ ಉಡುಪು ಕರಿ ಬಣ್ಣದು. ಇವರ ಛತ್ರಿ ಕರೀ ಬಟ್ಟೆದು, ಇವರು ಕೂತುಕೊಳ್ಳುತ್ತಿದೆ ದರ್ಬಾರಿನ ಆಸನವು ಕರಿಯ ಮರದ್ದು. ಇದಕ್ಕೆ ವಿಶೇಷವಾಗಿ ಬಂಗಾರ ಮತ್ತು ರತ್ನ ಪಡಿ ಕೆತ್ತನೆ ಕೆಲಸವನ್ನು ಮಾಡಿತ್ತು. ಇದಕ್ಕೆ ಮೂರುವರೆ ಕೋಟಿ ವರಹ ಮುಟ್ಟಿತ್ತು. ಇವರು ಇಟ್ಟುಕೊಳ್ಳು ತ್ತಿದ ಚಿನ್ನದ ಕಿರೀಟಕ್ಕೆ ಹದಿನಾಲ್ಕುವರೆ ಲಕ್ಷ ವರಹ ಮುಟ್ಟಿತ್ತು. ದೊರೆಯ ಲಾಯ ವಲ್ಲಿ ನಾನಾ ವಿಧವಾದ ಕುದುರೆಗಳಿದ್ದವು. ಯಾವಾಗಲೂ ಎರಡು ಸಾವಿರ ಆನೆ ಸಿದ್ದವಾಗಿರುತಿತ್ತು. ಇವರು ಚಿನ್ನದಲ್ಲಿಯೂ ಬೆಳ್ಳಿಯಲ್ಲಿಯೂ ನಾಣ್ಯಗಳನ್ನು ಹಾಕಿ ಸಿದ್ದರು. ಇದರಲ್ಲಿ ಭಾರಿನಾಣ್ಯ, ಎರಡು ತೊಲೆ ತೂಕವಿತ್ತು, ಕಮ್ಮಿ ನಾಣ್ಯ ಕಾಲು ತೊಲೆ ತೂಕವಿತ್ತು. ಅದರ ಮೇಲೆ ಒಂದು ಕಡೆ ಮುಸರ್ಲ್ಮಾ ಮತಶ್ರೇಷ್ಟವೆಂತಲೂ ಇನ್ನೊಂದು ಕಡೆ ದೊರೆಯ ಹೆಸರೂ ಫಾರ್ಷಿಯಲ್ಲಿ ಕೆತ್ತಿತ್ತು. ಹಿಂದೂ ಪ್ರಜೆ ಗಳಿಗೆ ಈ ನಾಣ್ಯವನ್ನು ಕಂಡರೆ ಆಗುತ್ತಿರಲಿಲ್ಲ, ಅವರು ಅದನ್ನು ವಿಶೇಷವಾಗಿ ಕರಗಿಸಿಬಿಡುತಿದ್ದರು. ನಾಣ್ಯ ಕರಗಿಸಿದವರನ್ನು ಸತ್ಕಾರದವರು ಶಿಕ್ಷಿಸುತ್ತಿದ್ದರು. ಈ ನಾಣ್ಯ ಈ ದೊರೆಗಳ ದಿವಸದಲ್ಲಿ ಮಾತ್ರ ಚಲಾವಣೆಯಲ್ಲಿತ್ತು. ದರಬಾರು.- ಈ ದೊರೆಗಳು ಶುಕ್ರವಾರ ಹೊರತು ಉಳಿದ ದಿವಸದಲ್ಲಿ ಬೆಳಗಿನಿಂದ ಮಧ್ಯಾಹ್ನದವರೆಗೆ ದರಬಾರು ಮಾಡುತಿದ್ದರು. ದರಬಾರು ಖಾನೆ ಯಲ್ಲಿ ರೇಷ್ಮೆ ತೆರೆಗಳನ್ನು ಅಲ್ಲಲ್ಲಿ ಹಾಕಿ ಶೃಂಗರಿಸಿದ್ದರು. ಫಕೀರರು, ಖಾಸಿಗಳು, ಮೌಲ್ವಿಗಳು ಮೊದಲಾಗಿ ಮತಸಂಹಿ೦ಧವಾದ ಜನರು ದೊರೆಯ ಸನ್ನಿಧಿಯಲ್ಲಿ ್ರ