ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿತಾವರ್ಧನ. ಈಗಿನ ಶಿಕ್ಷಿತ ಕರ್ಣಾಟಕರು ತಮ್ಮ ಭಾಷೆಯ ಕಾವ್ಯಗಳನ್ನು ಅಭಿಮಾನ ದಿಂದ ಪಠಿಸಬೇಕಲ್ಲದೆ ಅಭಿರುಚಿಯಿಂದ ಓದುವುದಿಲ್ಲವೆಂದು ಅನೇಕರ ಅಭಿಪ್ರಾಯ ವಿದೆ. ಇದು ಅಸತ್ಯವೆಂದು ನಾನು ಪ್ರತಿಪಾದಿಸಲಾರೆ. 'ಪಾಶ್ಚಾತ್ಯರ ಗ್ರಂಥಗಳನ್ನು ಆದಷ್ಟು ಕಡಮೆಯಾಗಿ ಓದಿ ಕನ್ನಡ ಗ್ರಂಥಗಳನ್ನೇ ಹೆಚ್ಚಾಗಿ ಓದುವುದು ಇದಕ್ಕೆ ಔಷಧವೆಂದು ಉಪದೇಶಿಸಿದರೆ ನಗುವರು. ಎರಡರಲ್ಲಿಯೂ ಒಂದೇ ಪ್ರಕಾರದ ಪಕ್ಷಪಾತವಿಡಬೇಕೆಂದು ಸೂಚಿಸಿದರೆ ಅನೇಕರು ಅಸಾಧ್ಯವೆನ್ನಬಹುದು. ಭಾಷೆ ಯಲ್ಲಿ ಹಲವು ಬಗೆಗಳನ್ನು ಕಿವಿ ಸಹಿಸಲಾರದಿದ್ದರೆ, ಕವಿತಾಗುಣಗ್ರಹಣಕ್ಕೆ ಎದೆ ಕವಲ್ಗೊಂಡು ನಿಲ್ಲಲು ಸಮ್ಮತಿಸುವುದೇ? ಕವಿತೆಯೆಂದರೇನು ? ಕನ್ನಡ ಕವಿತೆ ಗಳಲ್ಲಿ ಯಾವ ದೋಷಗಳಿಗೆ ಅಸಂತುಷ್ಟರಾಗುವರು ? ಪಾಶ್ಚಾತ್ಯರ ಕಾವ್ಯಗಳಲ್ಲಿ ಯಾವ ಗುಣಗಳಿಗೆ ಮೆಚ್ಚುವರು ? ರಮಣೀಯಾರ್ಥದ ಕೃತಿಗೆ ಕಾವ್ಯವೆನ್ನಬಹುದು. ರಮಣೀಯತೆಗೆ ಅಲಂ ಕಾರಗಳೂ ರಸಗಳೂ ಸಾಧನವೆನ್ನುವರು, ಗಣಿತ, ವೈದ್ಯ, ವ್ಯಾಕರಣ ಮುಂತಾದ ಶಾಸ್ತ್ರಗಳನ್ನು ಪಾಶ್ಚಾತ್ಯರು ಪದ್ಯರೂಪವಾಗಿ ಬರೆಯರು; ಅವುಗಳಲ್ಲಿ ರಸಾಲಂಕಾರ ಗಳಿಗೆ ಅವಕಾಶವಿಲ್ಲ. ಮುದ್ರಾಯಂತ್ರಗಳಿಲ್ಲದ ದಿವಸಗಳಲ್ಲಿ ನಿಘಂಟುಗಳನ್ನೂ ಕೂಡ ಪದ್ಯಾತ್ಮಕವಾಗಿ ರಚಿಸುವ ಪದ್ಧತಿ ಹುಟ್ಟಿತು. ಅಂತಹ ಗ್ರಂಥಗಳಿಗೆ ಉಪ ಚಾರಭಾವದಿಂದ ಕಾವ್ಯವೆಂದರೂ ಅವು ಈಗ ಆವಶ್ಯಕವಲ್ಲ. ರಸಾಲಂಕಾರಗಳಿ ಲ್ಲದೆ ಕೇವಲ ನೀತಿಯನ್ನು ಉಪದೇಶಿಸುವ ಗ್ರಂಥಗಳಿಗೂ ಕಾವ್ಯವೆನ್ನಲು ಈಗಿನ ಗುಣವಿಮರ್ಶಕರು ಒಪ್ಪುವುದಿಲ್ಲ. ಛಂದಸ್ಸಿನಿಂದ ಗದ್ಯಕ್ಕಿಂತಲೂ ಪದ್ಯರಚನೆ ಚೆಂದವಾಗಿ ಶೋಭಿಸುವುದು. ಪ್ರಾಸವಿಲ್ಲದೆ ಪದ್ಯಗಳನ್ನು ಏಕೆ ರಚಿಸಬಾರದು, ಎಂದು ಕೆಲವರು ಕೇಳುತ್ತಾರೆ. ಏಕೆ ಕೂಡದು? ಸೀರೆಗೆ ಸೆರಗಿಲ್ಲದಿದ್ದರೇನು? ಹಣೆಗೆ ಬೊಟ್ಟಿಲ್ಲದಿದ್ದರೇನು? ಒಂದು ರಾಗದಲ್ಲಿ ವಾದಿ ಮತ್ತು ಸಂವಾದಿ ಎಂಬ ಎರಡು ಪ್ರಧಾನಸ್ವರಗಳಿರಬೇಕಂತೆ. ಅವುಗಳನ್ನು ಪದೇಪದೇ ತೋರಿಸಿದರೆ ರಾಗವು ಸ್ಪಷ್ಟವಾಗಿಯೂ ಸುಂದರವಾಗಿಯೂ ಕಾಣುವುದೆಂದು ಸಂಗೀತಜ್ಞರು ಹೇಳುವರು. ಈ ನಿಯಮವನ್ನು ಉಲ್ಲಂಘಿಸಿದರೆ ಸಂಗೀತವೇ ಅಳಿದುಹೋಗದು. ಅಷ್ಟೇಕೆ, ಈ ಮರ್ಯಾದೆಗೆ ಉತ್ತರದಲ್ಲಿರುವ ಪ್ರಾಮುಖ್ಯವು ದಕ್ಷಿಣದಲ್ಲಿಲ್ಲವಂತೆ. - ಕನ್ನಡಕ್ಕೆ “ ಸತತಂ ಪ್ರಾಸಂ” ಎಂದು ನೃಪತುಂಗನು ಬರೆದಿರುವನು. ಈ ಪದ್ದತಿಯೆಷ್ಟು ಹಳೆಯದೆಂದು ಹೇಳಕೂಡದು, ಸಾಂಗತ್ಯದಲ್ಲಿ ನಾಗವರ್ಮನು ವರ್ಣಿಸಿದ ಅಕ್ಷರಮಾತ್ರಾಗಣಗಳ ಕ್ರಮವನ್ನು ಕಿತ್ತು ಹಾಕಿದರೂ, ಪ್ರಾಸವನ್ನು ೨೨