ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿ.] ಕವಿತಾವರ್ಧನ. 1 ಜನವರಿ ೧೯೧೯. ಬಿಟ್ಟು ಬಿಡಲಿಲ್ಲ. ಪ್ರಾಸಕ್ಕೆ ಕನ್ನಡಿಗರು ಇಷ್ಟು ಮರುಳಾದುದಕ್ಕೆ ಕಾರಣವಿಲ್ಲದಿರ ಬಹುದೇ ? ಅನುಭವಕ್ಕೆ ಕಂಡು ಬರುವುದೇನು? (೧) ಪ್ರಾಸಕ್ಕಿಂತಲೂ ಅಕ್ಷರ ಗಣಾನುಸರಣವೇ ಕಠಿನ ಒಂದು ಪಟ್ಟದಿಯಲ್ಲಿ ಆರು ಸ್ಥಳಗಳಲ್ಲಿ ಒಂದಕ್ಷರವನ್ನು ಇಟ್ಟರೆ ಸಾಕು. ಒಂದು ಅಕ್ಷರಗಣಗಳ ವೃತ್ತದಲ್ಲಿ ಗುರುಲಘುಗಳನ್ನು ಎಷ್ಟು ನಿರ್ದಿಷ್ಟ ಸ್ಥಾನಗಳಲ್ಲಿಡಬೇಕು ? ಇಷ್ಟು ಪ್ರಯಾಸಪಟ್ಟರೂ ಕನ್ನಡದ ತಾಳಗಳಿಗೆ ಸರಿಯಾಗಿ ಎಷ್ಟು ವೃತ್ತಗಳನ್ನು ಹಾಡಬಹುದು ? (೨) ಲೋಕಪ್ರಿಯವಾದ ಕವಿತೆಗ ಳನ್ನು ತಾಳಹಾಕಿ ಹಾಡಲಾಗುವಂತೆ ರಚಿಸುವುದು ಉಚಿತವಾದುದರಿಂದ, ಅವುಗಳಲ್ಲಿ ವಾದಿಸ್ವರದಂತೆ ಕೇಳಿಸುವ ಪ್ರಾಸವನ್ನು ಕಾಪಾಡುವುದು ಉಪಯುಕ್ತ ಪದ್ದತಿ, () ಅರ್ಥಕ್ಕೆ ತೇಜವಿಲ್ಲದೆಡೆಗಳಲ್ಲಿ ಆ ಕುಂದುಕವನ್ನು ಪ್ರಾಸದಿಂದ ಅಡಗಿಸಿದಷ್ಟು ಸುಲಭ ವಾಗಿ ಬೇರೆ ಶಬ್ದಾಲಂಕಾರಗಳಿಂದಾಗದು. ವಾದಿಸ್ವರವನ್ನು ಇಂತಹ ಸನದಲ್ಲಿಡಬೇಕೆಂದು ನಿಯಮವಿಲ್ಲ. ಆದರೆ ಚರಣದ ಬುಡಕ್ಕೂ ಕೊನೆಗೂ ಆದಷ್ಟು ಸವಿಾಪವಿದ್ದರೆ ಉತ್ತಮವಂತೆ. ಆಡುವು ದರಲ್ಲಿಯೂ ಹಾಡುವುದರಲ್ಲಿಯೂ ಒಂದೊಂದು ದೇಶದವರಿಗೆ ಒಂದೊಂದು ರೀತಿ ಚಲೋದಾಗಿ ಕಾಣಿಸುವುದು, ಎಸ್ಟೋಸಿಯೇಶನ್ ಎಂದು ಉಚ್ಚರಿಸುವಾಗ ತಮಿ ಳರು ಮೊದಲಿನ ಎಕಾರವನ್ನೂ ಬಂಗಾಳಿಗಳು ಎರಡನೆಯ ವಿಕಾರವನ್ನೂ ಪ್ರಸ್ತ ಮಾಡಿ ಒತ್ತುವರು. ಹಾಡುವುದರಲ್ಲಿ ಇಂತಹ ವಿವಿಧಪ್ರಾವಣ್ಯಗಳು ಇನ್ನೂ ಸ್ಪಷ್ಟವಾಗಿ ಕಾಣುತ್ತವೆ. ಆದಕಾರಣ ಕನ್ನಡದಲ್ಲಿ ಚರಣದ ಎರಡನೆಯ ಅಕ್ಷರವು ಪ್ರಾಸಕ್ಕೆ ಯುಕ್ತವೆಂದು ಪ್ರಾಚೀನಕವಿಗಳು ನಿರ್ಧರಿಸಿದ್ದು ತಪ್ಪೆಂದು ನಾನು ಸರ್ವಫಾ ಉಸುರಲಾರೆ. ಆದರೆ ಈ ಪ್ರಾಸಕ್ಕೆ ಬದಲಾಗಿ ಅಂತ್ಯಪ್ರಾಸವನ್ನು ಆಚರಿಸಿದರೆ ಇಂಪಾಗಲಾರದೆಂದೂ ಪ್ರತಿ ಪಾದಿಸಲಾರೆ. ಕೊಡಗರ ಹಾಡುಗಳಲ್ಲಿ ಅಂತ್ಯಪ್ರಾಸವೇ ಪ್ರಧಾನ, ಪ್ರಾಚೀನ ದ್ರಾವಿಡರ ಪದ್ಧತಿ ಹೀಗಿರಬಹುದಿತ್ತು. ನಾನೊಂದು ಸಾವಿರ ಚರಣಗಳನ್ನು ರಚಿಸಿರಬಹುದು, ಇದುವರೆಗೆ ಪ್ರಾಸವುಂಡನಕ್ಕೆ ನನ್ನ ಕಿವಿ ಒಗ್ಗಲಿಲ್ಲ, ಆದರೆ ಕೇಶವಪನದಿಂದ ಮುಖದ ಲಾವಣ್ಯವು ಸಂಪೂರ್ಣವಾಗಿ ನಾಶ ವಾಗುತ್ತದೆಂದು ಕಂಡವರಾರು? ಕಾವ್ಯಗಳನ್ನು ಹಳಗನ್ನಡದಲ್ಲಿಯೇ ಬರೆಯಬೇಕೆಂದು ಕೆಲವರ ಅಭಿಪ್ರಾಯ ವಿದೆ. ಇದು ಪಂಡಿತರ ಪರ೦ಪರಿಣಮತವಾಗಿರಬಹುದು, ದಕ್ಷಿಣದಲ್ಲಿ ಮಾತ್ರ ವಲ್ಲ, ಕೃಷ್ಣಾನದಿಯ ಉತ್ತರದಲ್ಲಿ ಗುಲ್ಬರ್ಗ, ವಿಜಾಪುರ ಜಿಲ್ಲೆಗಳಲ್ಲಿ ದೊರೆತ ಶಾಸನ ಗಳಲ್ಲಿಯೂ ಪದ್ಯಗಳು ಹಳಗನ್ನಡದಲ್ಲಿಯೇ ರಚಿತವಾಗಿವೆ. ಗದ್ಯದಲ್ಲಿಯೂ ಸಮಾನಕಾಲದ ವ್ಯಾಕರಣವು ಒಂದೇ ವಿಧವಾಗಿದೆ. ಲೋಕಪ್ರಿಯವಾದ ಕಾವ್ಯ-ಗ ಳನ್ನು ಈಗ ನಡುಗನ್ನಡವೆನ್ನಿಸಿಕೊಳ್ಳುವ ಹೊಸಗನ್ನಡದಲ್ಲಿ ಬರೆಯುವ ಪದ್ಧತಿ ಪ್ರಶಂ ಸನೀಯವೆಂದು ನಾವು ಹೇಳಬಹುದು, ಕೆಲವು ಹಳಗನ್ನಡ ಮಾತುಗಳನ್ನು ಪದ್ಯ ಗಳಲ್ಲಿ ಜೋಪಾನ ಮಾಡಿ ಇಟ್ಟು ಕೊಳ್ಳುವುದು ಕನ್ನಡಿಗರಿಗೆ ಭಕ್ತಿಯ ಕರ್ತವ್ಯ. ಆದರೆ ಹಳಗನ್ನಡ ಗ್ರಂಥಗಳನ್ನು ಹೆಚ್ಚಿಸುವುದರಿಂದ ಸಂಸ್ಕೃತ ಗ್ರಂಥಗಳನ್ನು ಬರೆ