ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ಕಿ ಸು" ಪುಷ್ಪ - ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. ಕರಾಟಕಸಾಹಿತ್ಯ - .. " : :: : : - - - ಗ್ರಂಥಗಳ ಅಭಿವೃದ್ಧಿಯ ಕರ್ಣಾಟಕಭಾಷೆಯಲ್ಲಿ ಉಂಟಾಗುವುದಕ್ಕಾಗಿ ಅವಶ್ಯ ವಾಗಿ ಪ್ರಯತ್ನಿಸಬೇಕಾಗಿರುವುದು. ಆದುದರಿಂದ ಲೋಕೋಪಕಾರಾರ್ಥವಾಗಿಯೇ ತಮ್ಮ ತನುಧನಮನಗಳನ್ನೂ ಅನರ್ಘವಾದ ತಮ್ಮ ಕಾಲವನ್ನೂ ವಿನಿಯೋಗಿಸುವ ಕರ್ಣಾಟಕ ಸಾಹಿತ್ಯಸಭೆಯ ಮಹಾ ಪುರುಷರು ಈ ಮಹಾಕಾರಕ್ಕಾಗಿ ಪ್ರಯತ್ನಿಸಿ ರಲ್ಲಿ ಏತದ್ದೇತೀಯರ ಪುರಾತನ ಪುಣ್ಯವೇ ಈ ಮಹಾಪುರುಷರ ರೂಪದಲ್ಲಿ ಮೂರ್ತಿ ಭೂತವಾಗಿ ಬಂದಿರುವುದೆಂದು ಹೇಳಬಹುದಾಗಿರುವುದು ಎರಡನೆಯದುಈ ಹಿಂದೆ ಹೇಳಿದಂತೆ ಇತರ ಭಾಷೆಗಳಲ್ಲಿರುವ ಶಾಸ್ತ್ರ ವಿಚಾರವನ್ನು ತಿಳಿಯ ಪಡಿಸುವುದಕ್ಕಾಗಿ ಈ ಕರ್ಣಾಟಕಭಾಷೆಯಲ್ಲಿ ಗ್ರಂಥಗಳನ್ನು ಬರೆದಿಟ್ಟರೂ ಗ್ರಾಹಕ ರಿಲ್ಲದಿದ್ದರೆ ಆ ಗ್ರಂಥಗಳೂ ಬಿಲವಾಗಬಹುದಾದಕಾರಣ ಹಾಗೆ ಜಿಲನಾಗದೆ ಆ ಗ್ರಂಥಗಳು ಪ್ರಚಾರದಲ್ಲಿರಬೇಕಾದರೂ ಅಥವಾ ಪ್ರಬಲಿಸಬೇಕಾದರೂ ಈಗ ಇಂಗ್ಲಿಷ್ ಭಾಷೆಯಲ್ಲಿರುವಂತೆಯೇ ಈ ಭಾಷೆಯಲ್ಲಿ ಯೂ ಅನೇಕವಾದ ಪರೀಕ್ಷೆ ಗಳನ್ನಿಟ್ಟಲ್ಲಿ ಕರ್ಣಾಟಭಾಷೆಗೆ ವಿಶೇಷವಾಗಿ ಉತ್ತೇಜನವನ್ನು ಕೊಟ್ಟಂತಾಗವು ದೆಂದು ತೋರುತ್ತದೆ. ಈ ವಿಧವಾದ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಇಂಗ್ಲೀಷ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸಮನಾಗಿಯೋ ಅಥವಾ ಯಥೋ ಚಿತವಾಗಿಯೇ ಕಾಣುತ್ತಿದರೆ ಭಾಷೆಯು ತನ್ನ ಪೂರ್ಣ ಪ್ರಕಾಶವನ್ನು ತೋರಿಸ ಬಹುದಾಗಿರುವುದು, ಒಂದು ತೋಟದಲ್ಲಿ ಒಂದು ಗಿಡವ್ರ ಅಭಿವೃದ್ದಿಗೆ ಬರಬೇ ಕೆಂದು ತೋರುವ ಪಕ್ಷದಲ್ಲಿ ಆ ಗಿಡಕ್ಕೆ ಬೇರೆ ಗಿಡಗಳಿಗಿಂತಲೂ ಕಡಮೆಯಾಗದಿರು ವಷ್ಟು ಮಟ್ಟಿಗೆ ಪೋಷಣವನ್ನು ಮಾಡಬೇಕಲ್ಲವೇ? ಹಾಗೆ ತಕ್ಕ ಪೋಷಕ ಸಾಮಗ್ರಿ ಯನ್ನು ಒದಗಿಸದಿದಲ್ಲಿ ಆತಸಾದಿಗಳಿ೦ದಲೋ ಇತರ ವೃಕ್ಷಗಳ ಬಾಧೆಯಿಂದಲೋ ಆ ಗಿಡವೂ ಕಾಲಕ್ರಮದಲ್ಲಿ ಲೀನಾಯವಾಗಬಹುದಲ್ಲವೇ? ಮೂರನೆಯದು ಇದುವರೆಗೂ ಜ್ಞಾನಾಭಿವೃದ್ಧಿಯನ್ನು ಮಾಡಲು ಹೊರಟಲ್ಲಿ ಭಾಷೆಯು ಅಭಿ ವೃದಿಗೆ ಬರುವ ಸ್ಥಿತಿಯನ್ನು ಹಿಡಿದು ಇಲ್ಲಿ ವಿಚಾರಮಾಡಲಾಯ್ತು. ಹೀಗೆಯೇ ವ್ಯವಹಾರ ದೆಶೆಯಲ್ಲಿಯೂ ಭಾಷೆಗೆ ಅಭಿವೃದ್ಧಿಯನ್ನುಂಟುಮಾಡಬಹುದಾಗಿರುವುದು. ಈ ಕಾರವೂ ಕೂಡ ಗೌರಮೇಂಟಿನವರಿಂದಲೇ ನಿರ್ವಹಿಸಬೇಕಾಗಿರುವುದು. ಸಂಗತವಾಗಿ ನೋಡಿದಲ್ಲಿ ಮೈಸೂರ್ ದೇಶವು ಕರ್ಣಾಟಕ ದೇಶವೆಂಬ ದಾಗಿಯೂ ಈ ಕರ್ಣಾಟಕ ಭಾಷೆಯು ರಾಜಭಾಷೆಯಾಗಿಯೂ ದೇಶಭಾಷೆಯಾ ಗಿಯೂ ಇರುವುದರಿಂದ ಪ್ರತಿಯೊಂದು ಕೋರ್ಟು ಕಚೇರಿಗಳಲ್ಲಿಯೂ ತಪ್ಪಿದರೆ ಪರೀಕ್ಷಾರ್ಥವಾಗಿ ಕೆಲವೆಡೆಯಲ್ಲಾದರೂ ಜಡ್ಜ್ಮೆಂಟ್ (ಸಿದ್ದಾನ) ಕೈಪಿಯತ್ (ನಾಜ್ರಲ) ಮುಂತಾದುನ್ನಗಳಲ್ಲಿ ಈ ಕರ್ಣಾಟಕ ಭಾಷೆಯನ್ನೇ ಬಳಕೆಗೆ ತಂದಲ್ಲಿ ರಾಜಭಾಷೆಗೆ ಗೌರವವನ್ನು ಕೊಟ್ಟಂತಾಗುವುದಲ್ಲದೆ ಸರ್ವಲೌಕಿಕವ್ಯವಹಾರದಲ್ಲಿ ಯೂ ಈ ಭಾಷೆಯು ಪರಿಗ್ರಹಿಸಲ್ಪಟ್ಟು, ವಿಶೇಷವಾಗಿ ಪ್ರಕಾಶಕ್ಕೆ ಬರಬಹುದಾ ೫೪