ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ.] ಕರ್ಣಾಟಕ ಭಾಷಾಭಿವೃದ್ಧಿ ವಿಚಾರ. ಜನವರಿ ೧೯೧೯. ಇನ್ನು ಈ ವಿಚಾರವನ್ನು ಸಾಕುಮಾಡಿ ಕನ್ನಡ ಗ್ರಂಥಗಳಲ್ಲಿ ಉಪಯೋಗಿಸ ಬೇಕಾದ ಪಾರಿಭಾಷಿಕ ಶಬ್ದ ನಿರ್ಣಯ ವೆಂಬ ಪ್ರಯತ್ನದ ವಿಷಯವಾಗಿ ವಿಚಾರ ಮಾಡಿದಲ್ಲಿ ಅರ್ಥ ಭೋಧಕ ಪದವ ಕನ್ನಡದಲ್ಲಿ ದೊರೆಯದಿದ್ದರೆ ಸಂಸ್ಕೃತದಲ್ಲಾದರೂ ಅಥವಾ ಇತರ ಭಾಷೆಯಲ್ಲಾದರೂ ಇರುವ ಶಬ್ದ ವನ್ನು ತೀರದೆ ಸೇರಿಸಿಕೊಳ್ಳಲು ಅಭ್ಯನ್ತರವೇನೂ ಬರಲಾರದು. ಹಾಗೆ ಮಾಡದಿದ್ದರೆ ಭೋಧಸೀಯಾಂಶ ಭೋಧ ನವೇ ದುಷ್ಕರವಾಗುವುದಲ್ಲವೇ? ಇನ್ನು ಕನ್ನಡ ಭಾಷೆಯ ಅಭಿವೃದ್ಧಿಯನ್ನು ಕುರಿತು ಹಿಂದೆ ನಾವು ಹೇಳಿ ರುವ ಮೂರು ಪ್ರಯತ್ನಗಳಲ್ಲದೆ ಬೇರೊಂದು ಪ್ರಯತ್ನವೂ ಕಾಣಬರುವುದು. ಸಂಗತವಾಗಿ ನೋಡಿದಲ್ಲಿ ಕರ್ಣಾಟಕ ಭಾಷೆಯಲ್ಲಿ ಸಮಸ್ತವಾಗಿಯೂ ಅಸ ಮಸ್ತವಾಗಿಯೂ ಸಂಸ್ಕೃತಪದಗಳನ್ನು ಪ್ರಯಾಗಿಸುವ ರೂಢಿಯು ಅನಾದಿಸಿದ್ದ ವಾಗಿರುವುದರಿಂದ ಸರಿಯಾದ ಕರ್ಣಾಟಭಾಷಾಜ್ಞಾನವಾಗಬೇಕಾದರೆ ಸಂಸ್ಕೃತ ಭಾಷಾಜ್ಞಾನವಿಲ್ಲದೆ ತೀರದಾದುದರಿಂದ ಕಾರ್ಣಾಟಕರಿಗೆ ಸಂಸ್ಕೃತಭಾಷಾಜ್ಞಾನ ವನ್ನುಂಟುಮಾಡುವುದೂ ಕೂಡ ಕರ್ಣಾಟಕ ಭಾಷಾಭಿವೃದಿ ಗೆ ಸಾಧಕವಾಗಿರುವು ದೆಂದು ಸಹೃದಯರಿಗೆ ತೋರದಿರಲಾರದು. - ಈ ನನ್ನ ಲೇಖನವನ್ನು ನೋಡಿದಲ್ಲಿ ಕರ್ಣಾಟಕ ಭಾಷಾಭಿವೃದ್ಧಿಗಾಗಿ ಕರ್ಣಾಟಕ ಸಾಹಿತ್ಯ ಸಭೆಯ ಮಹನೀಯರು ಮಾಡಬೇಕೆಂದಿರುವ ಪ್ರಯತ್ನಗಳ ಲ್ಲದೆ (1) ಕನ್ನಡದಲ್ಲಿಯೂ ಅನೇಕವಾದ ಶಾಸ್ತ್ರೀಯ ಗ್ರಂಥಗಳನ್ನು ಬರೆಯಬೇಕೆಂಬ ದಾಗಿಯೂ, (2) ಇಂಗ್ಲಿಷ್ ಭಾಷೆಯಲ್ಲಿರುವಂತೆಯೇ ಈ ಭಾಷೆಯಲ್ಲಿಯೂ ಅನೇಕ ವಾದ ಡಿಗ್ರಿಯ ಪರೀಕ್ಷೆಗಳನ್ನೆರ್ಸಡಿಸಬೇಕೆ೦ಬವಾಗಿಯೂ ಹಾಗೆ ಸದೀಕ್ಷಿತರಿಗೆ ತಕ್ಕ ಪ್ರೋತ್ಸಾಹವನ್ನು ಕೊಡಬೇಕೆಂಬದಾಗಿಯೂ (3) ಈ ಮೈಸೂರುದೇಶದ ಕೋರ್ಟು ಮುಂತಾದ ಅಧಿಕಾರಸ್ಥಾನಗಳಲ್ಲಿ ಕರ್ಣಾಟಕಭಾಷೆಯು ರಾಜಭಾಷೆಯಾಗಿರುವಂತೆ ರೂಢಿಗೆ ತರಬೇಕೆಂಬದಾಗಿಯೂ (4) ಪ್ರತಿಯೊಂದು ಕರ್ಣಾಟಕ ಪಾಠಶಾಲೆ ಯಲ್ಲಿಯೂ ತಪ್ಪಿದರೆ ತಾಲ್ಲೂಕು ಸಾಠಶಾಲೆಗಳಲ್ಲಿ ಯಾದರೂ ಕರ್ಣಾಟಭಾಷೆಗೆ ಉಪಯುಕ್ತವಾಗುವಷ್ಟು ಮಟ್ಟಿಗೆ ಸಂಸ್ಕೃತಭಾಷಾರಿಸಚಯಕ್ಕೆ ಅವಕಾಶವನ್ನು ಕಲ್ಪಿಸಿ ಕೊಡಬೇಕೆಂಬವಾಗಿಯೂ, ಹೀಗೆ ಮಾಡಿದಲ್ಲಿ ಕರ್ಣಾಟಭಾಷೆಯೂ ಕರ್ಣಾಟದೇಶೀಯರೂ ತಕ್ಕಮಟ್ಟಿಗೆ ಶೀಘ್ರದಲ್ಲಿಯೇ ಅಭಿವೃದ್ದಿಗೆ ಬರಬಹುದೆಂಬ ದಾಗಿಯೂ ನಮ್ಮ ತಾತ್ರರವೆಂದು ತೋರದಿರಲಾರದು. ಮುಖ್ಯವಾಗಿ ಕರ್ಣಾಟಕ ಸಾಹಿತ್ಯ ಸಭೆಯವರ ಉದ್ದೇಶವು ಜನಗಳ ಏಳಿಗೆಗೆ ಮೂಲಾಧಾರವಾಗಿರುವುದರಿಂದ ದೇಶೀಯರಾದ ಸರ್ವಪ್ರಜೆಗಳ ಕೃತಜ್ಞತೆಗೆ ಸರ್ವ ಕಾಲದಲ್ಲಿಯೂ ಇವರು ಪಾತ್ರರಾಗಿರುವಂತೆ ಈ ಮಹನೀಯರ ಉದ್ದೇಶವು ಶೀಘ್ರ ದಲ್ಲಿಯೇ ನೆರವೇರಬೇಕೆಂಬದಾಗಿ ಭಗವಂತನನ್ನು ಪ್ರಾರ್ಥಿಸುವದು ಜನಗಳೆಲ್ಲರಿಗೂ ಕರ್ತವ್ಯವೆಂಬಂಶವು ಯಾರಿಗೂ ತೋರದಿರಲಾರದು. ೫೬