ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕಳಯುಕ್ತ ಸ! ಚೈತನ ಢ) ಕನ್ನಡ ಕವಿತೆಯ ಭವಿತವ್ಯ, ಕರ್ಣಾಟಕ ಸಾಹಿತ್ಯ ..... -.. - .. . . . . . . . .. ದುದಿಯ ಮಹಾಫಲವನ್ನು ಬಯಸುವಂತೆ ಹಾಸ್ಯಾಸ್ಪದವೂ ಆಗಿರುವುದೆಂದು ನಂಬಿರುವೆನು. ಕನ್ನಡ ಕವಿತೆಯ ಭವಿತವ್ಯ. ಮು| ಹ. ನಾರಾಯಣರಾನ್, ಬಿ. ಎ., ಬಿ. ಎಲ್, ಅವರು ಧಾರವಾಡ ದಲ್ಲಿ ನೆರೆದ ಕರ್ಣಾಟಕ ಸಾಹಿತ್ಯ ಸಮ್ಮೇಳನಕ್ಕೆ ಕಳುಹಿದ 'ಕನ್ನಡ ಕವಿತೆಯ ಭವಿ ತವ್ಯ ” ಎಂಬ ಉಪನ್ಯಾಸದಲ್ಲಿ, ಇಂಗ್ಲಿಷ್‌ ಮಾರ್ಗಗಳ ಅನುಸರಣದಿಂದ ಇನ್ನು ಮುಂದೆ ಕನ್ನಡಕಾವ್ಯಗಳ ಪ್ರಸಂಗ, ರಚನೆ, ಅಲಂಕಾರ ಇವುಗಳು ಹೇಗೆ ಬದಲಾಗ ಬಹುದೆಂದು ವಿಚಾರಮಾಡಿತ್ತು. ಕಪಿಗಳು ಪಾರಮಾರ್ಥಿಕ ವಿಷಯಗಳಿಗಿಂತ ರಾಷ್ಟ್ರಕ, ಸಾಮಾಜಿಕ, ಚಾರಿತ್ರಿಕ ಮುಂತಾದ ಲೌಕಿಕ ಪ್ರಮೇಯಗಳಿಗೆ ಹೆಚ್ಚು ಗಮನಕೊಡುವರೆ೦ದೂ : ದೀರ್ಘ ಪುರಾಣಗಳ ಬದಲಾಗಿ ಲಘುಕೃತಿಗಳನ್ನು ರಚಿಸುವ ರೆಂದೂ : ಛಂದಸ್ಸಿನಲ್ಲಿ ಹೊಸ ಮಾದರಿಗಳನ್ನು ಕಲ್ಪಿಸಬಹುದೆಂದೂ; ಅಲಂಕಾರ ದಲ್ಲಿ ಅಚೇತನ ಪದಾರ್ಥಗಳಿಗೆ ವಾಕ್ ಶಕ್ತಿಯನ್ನೂ, ಮಾನಸಿಕಭಾವಗಳಿಗೆ ಮೂರ್ತಿತ್ವ ವನ್ನೂ ಆರೋಪಿಸುವ ಉತ್ತೇಕ್ಷೆಯು ರೂಢಿಯಾಗ ಬಹುದೆಂದೂ ; ಹಳಗನ್ನಡಕ್ಕಿಂತ ನಡುಗನ್ನಡವನ್ನು ಹೆಚ್ಚಾಗಿ ಪ್ರಯೋಗಿಸುವರೆಂದೂ ಸೂಚಿಸಿತ್ತು. ಈ ವಚನಗಳಿಗೆ ಉದಾಹರಣವಾಗಿ ಮಿಲ್ಟನ್ ಮತ್ತು ಷೆಲ್ಲಿ, ಇವರ ಕಾವ್ಯಗಳಿಂದ ಕೆಲವು ಭಾಗ ಗಳನ್ನು ಕನ್ನಡಿಸಿಹಾಕಿತ್ತು. ಈ ಎರಡು ಕಾವ್ಯಗಳ ಸಾರಾಂಶವನ್ನೂ ನಿರೂಪಿಸಿದರೆ ಆ ಉಪನ್ಯಾಸದ ತಾತ್ಪರ್ಯವು ವಿಶದವಾದೀತು. ಚಿಂತನ. (ಮಿಲ್ಟನ್ ಕಸಿಯ * ಇಲೈ ರೋಸೋ ' ಎಂಬ ಕಾವ್ಯ.) ತೊಲಗು ಹೃದಯನ ಮರುಳುಗೊಳಿಸುವಾ ಮೋವನೇ ಸಲಹುವಳು ನಿನ್ನನೊಬ್ಬಳು ಜನನಿ ಮೋಹನೇ || ಸ್ಥಿರಚಿತ್ರ ನಿನ್ನಾಟದೊಡನೆಗಳ ನೀಗುವುದು | ಬರಿಯ ಸೋಮಾರಿಗಳ ಬಗೆ ನಿನಗೆ ಸಲ್ಲುವದು ! ರವಿಕಿರಣದಲಿ ಕುಣಿಯುವಗಣಿತಕಣಗಳ ಪರಿ ! ವಿವಿಧಕಲ್ಪನೆಗಳನ್ನು ತುಂಬುವುದೆ ನಿನಗೆ ಸರಿ ! ಜಯತು ಚಿ೦ತಾದೇವಿ ಸುವಿವೇಕಿ ರುದ್ರಮತಿ | ಜಯತು ಗಂಭೀರಾಸೆ ನಿಯತಾಕ್ಷಿ ವಿನಯವತಿ || ಸಮಸದದ ನಂದಗತಿಯಿಂದ ವೈಭವವೆರಸಿ | ಸುಮನರಲಿ ಸಂಸರ್ಗಬದ್ಧದೃಷ್ಟಿಯನಿರಿಸಿ ! ೬