ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ ; ವ್ಯಾಕರಣ ರಚ ನ. ನಿಲ್ ಜೂಲೈ ೧೯೧೮. ವಾಗಿ ಉಪಯೋಗಿಸಲಾರಂಭಿಸಿದರು. ಈ ರೂಪಗಳು ಗ್ರಂಥಗಳಲ್ಲಿ ನೂತನವಾಗಿ ತೋರಿದುದರಿಂದ ಇವುಗಳಿಗೆ “ ಹೊಸಗನ್ನಡ " ಎಂಬ ಹೆಸರುಂಟಾಯಿತು. ೧೯ನೆಯ ಶತಮಾನದಲ್ಲಿ ನಮ್ಮ ಕರ್ಣಾಟಕವು ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಳಪಟ್ಟ ನಂತರ ನಮ್ಮ ಜನರು ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡಲಾರಂಭಿ ಸಿದರು, ಆಗ ಇವರಿಗೆ ಆ೦ಗ್ಗಗದ್ಯರಚನಾರಾಸ್ತ್ರವು ಪರಿಚಯವಾಯಿತು. ಆ೦ಗ್ಲ ವಿದ್ಯಾವಿಭೂಷಿತರಾದ ನಮ್ಮ ಪದವೀಧರರು (ಗ್ರಾಜ್ಯುವಿಟ್ಟು) ಇಂಗ್ಲಿಷ್ ಭಾಷೆಯಂತೆ ಶುದ್ಧವಾದ ವ್ಯಾವಹಾರಿಕ ಭಾಷೆಯಿ೦ದ ಎಂದರೆ ನಾ ಕೈಚಾರ (ictio11) ಯುಕ್ತ ವಾಗಿ ಕನ್ನಡದಲ್ಲಿ ಗದ್ಯಗ್ರಂಥಗಳನ್ನು ಬರೆಯಲಾರಂಭಿಸಿದರು. ಆಗಲೇ ಕನ್ನಡದಲ್ಲಿ ನಿಜವಾದ ಗದ್ಯವಾಯವು ಹುಟ್ಟಿತು. ಈ ಗದ್ಯ ಭಾಷೆಯ ವಿಷಯದಲ್ಲಿ ೧೯ನೆಯ ಶತಮಾನದಲ್ಲಿಯೇ ನುಡಿಗಟ್ಟು, ಕೈಪಿಡಿ, ಹೊಸಗನ್ನಡನುಡಿಗನ್ನಡಿ, ವಾಗ್ವಿಧಾ ಯಿಸಿ, ಶಬ್ದಾದರ್ರಗಳೆಂಬ ೪-೮ ವ್ಯಾಕರಣಗಳು ರಚಿಸಲ್ಪಟ್ಟಿವೆ. ಆದರೆ ಇವ್ರ ಗಳಲ್ಲಿ ಮುಖ್ಯವಾದ ಎರಡು ದೋಷಗಳುಂಟು. ಯಾವುವೆಂದರೆ : (೧) ಕನ್ನಡಭಾ ಷೆಯ ಏಕೀಕರಣದ ಪ್ರಯತ್ನವಿಲ್ಲ, (೨) ಗ್ರಾಂಥಿಕ ಪ್ರಯೋಗಗಳನ್ನು ಲಕ್ಷ್ಯವಾ ಗಿಟ್ಟು ಕೊಂಡಿಲ್ಲ. ಇವೆರಡೂ ದೋಷಗಳು ಅಕ್ಷರುನಾದುವುಗಳೇನೂ ಅಲ್ಲ : ಕನ್ನ ವಾಗಿರುತ್ತವೆ. ಅದು ಹೇಗೆಂದರೆ, ೧೯ನೆಯ ಶತಮಾನದಲ್ಲಿ ಮುಂಬಯಿ, ಮೈಸೂರ ಆಧಿಪತ್ಯ ಗಳಲ್ಲಿ ವಿದ್ಯಾಭ್ಯಾಸದ ಇಲಾಖೆಯ ಏರ್ಪಾಡಾದ ಕೂಡಲೆ ಕನ್ನಡ ವ್ಯಾವಹಾರಿಕ ಭಾಷೆಯ ವ್ಯಾಕರಣವು ಆವಶ್ಯಕವಾಯಿತು ; ಏಕೆಂದರೆ, ಪ್ರಾಥಮಿಕ ಪಾಠಶಾಲೆ ಗಳಲ್ಲಿ, ಲೌಕಿಕ ವಿದ್ಯಾವಿಷಯಗಳನ್ನೆಲ್ಲ ಗದ್ಯಭಾಷೆಯಲ್ಲಿಯೇ ಕಲಿಸಬೇಕಾಯಿತು. ಇದಲ್ಲದೆ ಕಾಯಿದೆ ಕಾನೂನು ಮೊದಲಾದ ಸಮಸ್ತ ವ್ಯಾವಹಾರಿಕ ವಿಷಯಗಳು ಪಾಮರರಿಗೆ ಸಹ ತಿಳಿಯುವುದಕ್ಕಾಗಿ, ಸುಲಭವಾದ ವ್ಯಾವಹಾರಿಕ ಭಾಷೆಯಲ್ಲಿಯೇ ಅವುಗಳನ್ನು ಬರೆಯಬೇಕಾಯಿತು. ಈ ಎಲ್ಲ ಕಾರಣಗಳಿಂದ ಆ ಸರಕಾರದವರು ತಮ್ಮತಮ್ಮ ಆಧಿಪತ್ಯಗಳಲ್ಲಿ ವಿದ್ಯಾಭ್ಯಾಸದ ಮತ್ತೂ ಬರೆವಣಿಗೆಯ ಕೆಲಸವನ್ನು ನಿರ್ವ ಹಿಸುವುದರ ಮಟ್ಟಿಗೆ ಕನ್ನಡ ಗದ್ಯಭಾಷೆಯ ವ್ಯಾಕರಣಗಳನ್ನು ಆಕಾಲದ ಸಂಡಿತರಿಂದ ಬರೆಯಿಸಿದರು. ಆ ಪಂಡಿತರು ತಮ್ಮ ಸರಕಾರದ ಇಷ್ಟ ಪ್ರಕಾರ, ತಮ್ಮತಮ್ಮ ಪ್ರಾಂತ ಗಳ ಭಾಷೆಯ ಮಟ್ಟಿಗೆ ಸಂಕುಚಿತ ದೃಷ್ಟಿಯಿಂದ ವ್ಯಾಕರಣಗಳನ್ನು ರಚಿಸಬೇಕಾಯಿತು. ಇಷ್ಟಕ್ಕೂ ಈಗಿನಂತೆ ಆಗ ಅನ್ನೋನ್ಯ ವ್ಯವಹಾರಗಳು ಎಂದರೆ ಕನ್ನಡ ಸಾಹಿತ್ಯ ಸಮೇಟನಾದಿಗಳು ನಡೆಯುತ್ತಿರಲಿಲ್ಲವಾದುದರಿಂದ ಕರ್ಣಾಟಕದ ಬೇರೆ ಬೇರೆ ಪ್ರಾಂತ ಗಳಲ್ಲಿ ರೂಢಿಯಲ್ಲಿರುವ ವ್ಯಾವಹಾರಿಕ ಭಾಷೆಯ ಜ್ಞಾನವುಂಟಾಗುವುದಕ್ಕೆ ಆ ವೈಯಾ ಕರಣರಿಗೆ ಆಸ್ಪದವಿರಲಿಲ್ಲ. ಎ೦ದಬಳಿಕ ಈ ತರದ ಪರಿಸ್ಥಿತಿಯಲ್ಲಿ, ಪಾಪ ! ಆ ವೈಯಾ ಕರಣರ ಹೃದಯದಲ್ಲಿ ಕನ್ನಡ ಭಾಷೆಯ ಏಕೀಕರಣದ ವಿಚಾರವು ಹೇಗೆ ಮೂಡಬೇಕು? ಕ್ರಿ.ಶ. ೧೮೯೦ರಲ್ಲಿ ಧಾರವಾಡದಲ್ಲಿ " ಕರ್ಣಾಟಕ ವಿದ್ಯಾವರ್ಧಕ ಸಂಘವು” ಸ್ಥಾಪನೆ ಯಾಗಿ, ಮೈಸೂರುದೇಶದ ಪಂಡಿತರು ಪ್ರತಿವರ್ಷ ಒಬ್ಬರಿಬ್ಬರು ಧಾರವಾ ೭೪