ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1. % | Y? ೮೨) ) ಕೆ. ವ್ಯಾಕರಣ ರ ನೆ. fಪ್ರಿಲ್-ಜೂಲೈ ೧೯೧೮. ವಿ ರಸಂ ಕರನವು ದೇಸಿಗೆ! ಜ ರದ್ದಧೂ ನಿಷಯಸು ರತ ರಸರಸಿಕತೆವೋಲ್!_! ೫c 1, ( ಪ್ರಥಮ ಪರಿಚ್ಛೇದ) ಇದರಲ್ಲಿ ನೃಪತುಂಗನು ತನ್ನ ಪೂರ್ವದ ಗ್ರಾಂಥಿಕ ಭಾಷೆಯನ್ನು ಎಂದರೆ ಹಳಗನ್ನಡವನ್ನು ಜರವ್ವಧುವಿಗೆ' ಹೋಲಿಸಿ “ ಜರದ್ವಧೂವಿಷಯಸುರತರಸರಸಿಕತೆ ವೊ೮” ” ಎಂದು ಹೇ, ಸ್ಪಷ್ಟವಾಗಿ ಅದನ್ನು ತಿರಸ್ಕರಿಸಿದ್ದಾನೆ. ಎಂದರೆ ನೃಪತುಂಗನು ತನ್ನ ಕಾಲಕ್ಕನುರೂಪನಾಗಿ ಗ್ರಾಂಥಿಕ ಭಾಷೆಯಲ್ಲಿ ಹೊಸ ಏರ್ಪಾಡು ಮಾಡಿ ಕೊಂಡನೆಂಬುದು ವ್ಯಕ್ತವಾಗುತ್ತದೆ. ಈ ನವನಾಗರಿಕತೆಯ ಪ್ರೀತಿಯು ಮುಂದೆ ೧೨ನೆಯ ಶತಮಾನದಿಂದ ಕಾಲಕಾಲಕ್ಕೆ ಕಂಡುಬಂದಿದೆ. ನಯಸೇನಾದಿ ಕವಿ ಗಳು ತತ್ಕಾಲಕ್ಕನುರೂಪನಾಗಿ, ಗ್ರಾಂಥಿಕ ಭಾಷೆಯಲ್ಲಿ ಮತ್ತೂ ಒಂದು ಹೊಸ ನಿರ್ಸಾಡನ್ನು ಮಾಡಿಕೊಂಡರು. ಅದೇನೆಂದರೆ, ಹಿಂದೆ ಹೇಳಿದಂತೆ, ಗ್ರಂಥಗಳಲ್ಲಿ ವ್ಯಾವಹಾರಿಕ ಭಾಷೆಯ ಪ್ರಯೋಗಗಳನ್ನು ಉಪಯೋಗಿಸಲಾರಂಭಿಸಿದರು. ಆದ ಕಾರಣ ಈಗಿನವರಾದ ನಾವು ನಮ್ಮ ಇಪ್ಪತ್ತನೆಯ ಶತಮಾನಕ್ಕನುರೂಪವಾದ ಗ್ರಾಂಥಿಕ ಭಾಷೆಯನ್ನು ಏರ್ಪಡಿಸಿಕೊಳ್ಳುವುದು ಎಂದರೆ ಹೊಸವ್ಯಾಕರಣವನ್ನು ರಚಿಸಿಕೊಳ್ಳು ವುದು ಸ್ವಾಭಾವಿಕವಾಗಿದೆ. ಬ್ರಿಟಿಷರ ಆಳಿಕೆಯಿಂದ ಈಚೆಗೆ ಎಂದರೆ ಸುಮಾರು ಈಗ ೭೦-೮ ವರ್ಷ ಗಳಲ್ಲಿ ಮೈಸೂರು, ಮುಂಬಯಿ, ಮದ್ರಾಸ, ಆಧಿಪತ್ರಗಳಲ್ಲಿ, ಕನ್ನಡ ಭಾಷೆಯಲ್ಲಿ ತಕ್ಕಮಟ್ಟಿಗೆ ಚೆನ್ನಾಗಿ ಗದ್ರನಾಯವುಂಟಾಗಿದೆ. ನಾರಪತ್ರಿಕೆಗಳಲ್ಲಿಯೂ ಮಾಸ ಪತ್ರಿಕೆಗಳಲ್ಲಿಯೂ ಗ್ರಂಥಗಳಲ್ಲಿಯೂ ಗದ್ಯವಾಯವು ಅಡಕವಾಗಿದೆ. ಇದ ರೊಳಗಿನ ಪ್ರತಿಭಾಸಂಪನ್ನ ಲೇಖಕರ ಪ್ರಯೋಗಗಳನ್ನು ಲಕ್ಷವಾಗಿಟ್ಟು ಕೊಂಡು, ನಾ ಕರಣವನ್ನು ರಚಿಸುವುದು ಯಥಾಯೋಗ್ಯವಾಗಿರುವುದು, ಆದರೆ ಕೆಲವರು ಪುರಾಣವುತಾಭಿಮಾನಿಗಳು ಈ ಪ್ರಯೋಗಗಳು ಈಗಿನಕಾಲದ ಜನರಿಂದ ಬರೆ ಯಲ್ಪಟ್ಟಿರುವುದರಿಂದ ಇವು ಲಕ್ಷಾರ್ಹವಲ್ಲವೆಂದು ಹೇಳಬಹುದು, ಈ ಸ್ಥಳದಲ್ಲಿ “ ದೂರದಗುಡ್ಡ ಕಣ್ಣಿಗೆ ನುಣ್ಣಗೆ ” ಎಂಬ ನಾಣ್ಣುಡಿ ನನಗೆ ನೆನಪಾಗುತ್ತದೆ. ಏಕೆಂದರೆ, ಈ ನಾಣ್ಣುಡಿಯಲ್ಲಿರುವ ತತ್ತ್ವವು ದಿಕ್ಕು ಕಾಳಗಳೆರಡಕ್ಕೂ ಸರಿಯಾಗಿ ಅನ್ವಯಿಸುತ್ತದೆ. ಹೇಗೆಂದರೆ, ದೂರದಗುಡ್ಡ, ಕಣ್ಣಿಗೆ ಮನೋಹರವಾಗಿ ಕಾಣಿ ಸುತ್ತದೆಯೆಂಬುದು ಹೇಗೆ ದಿಕ್ಕಿನವಿಷಯದಲ್ಲಿ ಸತ್ಯವಾಗಿದೆಯೋ, ಹಾಗೆಯೇ ಕಾಲದಲ್ಲಿ ಯಾದರೂ ದೂರದಕಾಲದ ಎಂದರೆ ಪ್ರಾಚೀನಕಾಲದ ಜನರು ಮನೋಹರವಾಗಿ ಕಾಣಿಸುತ್ತಾರೆಂಬುದೂ ನಿಜವಾಗಿದೆ. ಆದುದರಿಂದಲೇ ಪುರಾಣ ಮತಾಭಿಮಾನಿಗಳಿಗೆ ಪ್ರಾಚೀನಪಂಡಿತರು ಪೂಜ್ಯರಾಗಿದ್ದಾರೆ; ಅರ್ವಾಚೀನ ಪಂಡಿತರು ತುಚ್ಚರಾಗಿದ್ದಾರೆ. ಈ ತರದ ದೋಷದೃಷ್ಟಿ ಯು ವೈಯಾಕರಣ ರಿಗೆ ಇರಕೂಡದು, ಇವರು (( ಗುಣಾಃ ಪೂಜಾಸ್ಥಾನಂ” ಎಂಬ ನ್ಯಾಯದಂತೆ ಪ್ರಾಚೀನ ಗ್ರಂಥಗಳೇ ಇರಲಿ, ಅರ್ವಾಚೀನ ಗ್ರಂಥಗಳೇ ಇರಲಿ, ಅವುಗಳಲ್ಲಿ ಪ್ರೌಢವೂ ೭೬