ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪತಿ ಸೇ ಸ್ಥ೬ಕ ವ್ಯಾಕರಣ ರಚನೆ, (ಏಪ್ರಿಲ್-ಜೂಲೈ ೧೯೧೮. ನಾಕ ೧೯೧೮. (೧) ರೂಪಕಾಲಂಕಾರದಿಂದ ಭಾಷೆಗೆ ಕಳೆ ಕಟ್ಟುತ್ತದೆ. ಆದರೆ ಯಾವ ಆಲಂಕಾರಗಳನ್ನೇ ಆಗಲಿ ಗದ್ಯದಲ್ಲಿ ಮಿತವಾಗಿ ಉಪಯೋಗಿಸಬೇಕೇ ಹೊರತು ಅತಿಯಾಗಿ ಉಪಯೋಗಿಸಕೂಡದು, ಸಾಮಾನ್ಯತಃ ಗದ್ಯ ದಲ್ಲಿ ಅಲc ಕಾರಗಳನ್ನೇ ಉಪಯೋಗಿಸಬಾರದು. ಯಾವ ದೇಶದಲ್ಲಿ ಯೂ ಗಂಡಸರಿಗೆ ಅಲಂ ಕಾರಗಳನ್ನು (ಆಭರಣಗಳನ್ನು) ಹಾಕುವುದು ಹೇಗೆ ಶೋಭಿಸುವುದಿಲ್ಲವೋ, ಹಾಗೆಯೇ ಗದ್ಯದಲ್ಲಿ ಅಲಂಕಾರಗಳನ್ನು ಉಪಯೋಗಿಸುವುದು ಒಪ್ಪಲಾರದು. ಉಪಮಾಲಂಕಾರವನ್ನು ಕೆಲಕೆಲವು ಸ್ಥಳಗಳಲ್ಲಿ ವಿರಳವಾಗಿ ಉಪಯೋಗಿಸಬಹುದು. ಆದರೆ ಉತ್ತೇಕ್ಷಾಲಂಕಾರವನ್ನಂತೂ ಗದ್ಯದಲ್ಲಿ ಎಲ್ಲಿಯೂ ಉಪಯೋಗಿಸಲೇ ಕೂಡದು, ಒಂದುವೇಳೆ ಯಾರಾದರೂ ಉಪಯೋಗಿಸಿದರೆ, ಅಲ್ಲಿ ಕೃತ್ರಿಮತ್ವದ ದೋಷವುಂಟಾಗುವುದು. ಭೇಷಾ೮೦ಕಾರವಂತೂ ಗದ್ಯದಕಡೆಗೆ ಇಣಿಕಿ ಸಹ ನೋಡಕೂಡದು. ಇನ್ನು, ರೂಪಕಾಲಂಕಾರದಿಂದ ಭಾಷೆಯಲ್ಲಿ ಬಿಗಿ ಬರುವುದರಿಂದ ಅದನ್ನು ಗದ್ಯದಲ್ಲಿ ಮಿತವಾಗಿ ಉಪಯೋಗಿಸಬಹುದು. ಆದರೆ ಅದನ್ನು ಮುಗ್ಧ ರೀತಿಯಿಂದ ಉಪಯೋಗಿಸಬೇಕು. ಅಲ್ಲದೆ ಸಾದೃಶ್ಯವು ಹೃದಯಂಗಮವಾಗಿದೆ ಕ್ಲಿಯೇ ಅದನ್ನು ಉಪಯೋಗಿಸಬೇಕು. (5) ಏರೋಧಾಲಂಕಾರದಿಂದ ಭಾಷೆಗೆ ಕಳೆ ಕಟ್ಟುತ್ತದೆ. ಉದಾ:- .ರೋಮ್ ರಾಷ್ಟ್ರವನ್ನು ನಾಶಮಾಡಿದನಂತರ 1ಥ ಜನರು ರೋರ್ಮ ಕ್ಯಾ ಥೋಲಿಕ್ ಧರ್ಮದ ದೀಕ್ಷೆಯನ್ನು ಸ್ವೀಕರಿಸಿದರು. ಆಗ ಈ ಧರ್ಮದಲ್ಲಿ ಹೊಸದಾಗಿಸೇರಿದ ಜನರು ಮಾಡಿದುದೇನೆಂದರೆ, “ಯಾವ ಮೂರ್ತಿಗಳನ್ನು ಅವರು ಮೊದಲು ಪೂಜಿ ಸುವರೋ, ಅವುಗಳನ್ನು ಒಡೆಯಲಾರಂಭಿಸಿದರು. ಯಾವ ಮೂರ್ತಿಗಳನ್ನು ಮೊದಲು ಒಡೆದುಹಾಕುತ್ತಿದ್ದರೋ, ಅವುಗಳನ್ನು ಪೂಜಿಸಲಾರಂಭಿಸಿದರು.” ಈ ವಾಕ್ಯದಲ್ಲಿ ವಿರೋಧವು ಎಷ್ಟು ಮನೋಹರವಾಗಿದೆ! () ಸಮಾನಾರ್ಥಕ ಅಥವಾ ಕಿ೦ಚಿನ್ನೂ ನಾಧಿಕಾರ್ಥಕಶಬ್ದಗಳನ್ನು ಎರ ಡೆರಡು ಮೂರುಮೂರು ಸಲ ಉಪಯೋಗಿಸುವುದರಿಂದಲೂ ಭಾಷೆಯಲ್ಲಿ ಓಜೋ ಗುಣವುಂಟಾಗುತ್ತದೆ. ಉದಾ: " ಧಾರವಾಡಜಿಲ್ಲೆಯಲ್ಲಿ ಮಾತನಾಡುವ ಭಾಷೆ ಯೇ ಒಂದುತರ, ವಿಚಾ ಸ್ವರದಲ್ಲಿಯ ಭಾಷೆಯೇ ಒಂದುವಿರ, ಕಾರವಾರಜಿಲ್ಲೆಯ ಭಾಷೆಯೇ ಒಂದುರೀತಿ, ಬೆಳಗಾವಜಸ್ವಿಯ ಭಾಷೆಯೇ ಬೇರೆ; ಆದರೂ ಮುಂಬಯಿ ಕರ್ನಾಟಕದ ಗ್ರಾಂಥಿಕ ಭಾಷೆಯು ಒಂದೇbಧವಾಗಿದೆ." ಈ ವಾಕ್ಯದಲ್ಲಿ ತರ, ಕೀತಿ, ಸಿದ್ದ ಎಂಬ ಸಮಾನಾರ್ಥಕನಾದ ಮೂರು ಶಬ್ದಗಳನ್ನು ಉಪಯೋಗಿಸಿ ರುವುದರಿಂದ ಇಲ್ಲಿ ಓಡೋಗುಣವುಂಟಾಗಿದೆ. - (೪) ಕಾರಣದ ಸ್ಥಳದಲ್ಲಿ ಕಾರ್ಯದ ನಿರ್ದೇಶವನ್ನು ಮಾಡುವುದರಿಂದಲೂ ಭಾಷೆಯಲ್ಲಿ ಜಿಗಿಬರುತ್ತದೆ. ಉದಾ: ಹರ್ಷವರ್ಧನನು ದಕ್ಷಿಣದೇಶಕ್ಕೆ ದಂಡೆತ್ತಿ ಬರುವನೆಂಬ ವಾರ್ತೆಯುಂಟಾದಕೂಡಲೆ ಕರ್ಣಾಟಕದಲ್ಲಿ ಅಕ್ಟೋಪಲಕ್ಷ ಖಡ್ಡ ಗಳು ಒರೆಯಿಂದ ಹೊರಬಿದ್ದವು". ೮೨