ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷ ಕೃತ್ರಿಕೆ-1 ತಿ ಆಧುನಿಕ ಮಹಾ ರಾಷ್ಟ್ರ ಸಾಹಿತ್ಯ, [ಏಪ್ರಿಲ್ -- ಜೂಲೈ ೧೯೧೮. ಮರಾಠಿಯು ವೇದಾಂತವಿಷಯದಲ್ಲಿ ಹಿಂದಿನಿಂದಲೂ ಪ್ರಖ್ಯಾತವಾಗಿದೆ. ಹಳೆಯ ಮರಾಠಿಯ ಕವಿಗಳೆಲ್ಲರೂ ಅದೈತಮತದವರೂ, ಅದರಲ್ಲಿ ನಿವೃತ್ತಿ ಮಾರ್ಗಾ ವಲಂಬಿಗಳೂ ಆಗಿದ್ದಾರೆ. ಈ ವಿಷಯದಲ್ಲಿ ಆಧುನಿಕವಿದ್ವಾಂಸರಲ್ಲಿ ಬಹಳ ಮತ ಭೇದಗಳಿವೆ. ಸುಪ್ರಸಿದ್ದ ಇತಿಹಾಸಸಂಶೋಧಕರಾದ ರಾಜವಾಡೆಯವರು “ ತುಕಾರಾಮನೇ ಮೊದಲಾದ ಸಾಧುಸಂತರಿಗೆ ವಿಟ್ಟಲನೊಬ್ಬನಿದ್ದರೆ ಸಾಕು; ಉಳಿದ ವರ ಮಾತು ಅವರಿಗೇತಕ್ಕೆ ? ಎಲ್ಲರೂ ನಿರುಪಯೋಗಿಗಳು, ಏತಕ್ಕೂ ಬಾರದ ಹೇಡಿ ಗಳು "-ಎಂದು ಹೇಳಿ ರಾಮದಾಸರನ್ನು ಬಹಳವಾಗಿ ಕೊಂಡಾಡಿದ್ದಾರೆ. ಮರಾಠಿ ಯಲ್ಲಿ ಈಚೆಗೂ ವೇದಾಂತವೆಂದರೆ ಹಾಸ್ಯಾಸ್ಪದವೇ ಎನಿಸುತ್ತಿತ್ತು. ಜ್ಞಾನೇಶ್ವರಿಯ | ಮೇಲಿನ ಟೀಕಾ ಪುಸ್ತಕಗಳು ಆದುವು. ತಮ್ಮ ಪೂರ್ವಜರ ಪೂರ್ವಪರಂಪರೆಯನ್ನ ನುಸರಿಸಿ “ ಪುತ್ರಾದಿಚ್ಛೇತ್ವರಾಜಯಂ” ಎಂಬಂತೆ ಅವರಿಗೆ ವಿಶೇಷವಾದ ಸಮಾ ಧಾನವಾಗುವಂತೆ ಲೋಕಮಾನ್ಯ ತಿಲಕರವರು ಈಗ ಸುಮಾರು ೨೨ ವರ್ಷಕಾಲ ದೇಶೀಯ ವಿದೇಶೀಯ ಮೊದಲಾದ ಎಲ್ಲಗ್ರಂಥಗಳನ್ನು ಅವಲೋಕನವಾಡಿ “ ವೇದಾಂತವನ್ನು ಆಚರಿಸುವವರೇ ಇಲ್ಲ. ಅಶಕ್ತ ವೇದಾಂತವೆಂಬಂತೆ ಬೇಕು ಬೇಕಾದ ಅರ್ಥವನ್ನು ತಿಳಿದರೆ ಅದಕ್ಕಾರು ಹೊಣೆ ?” ಎಂದು ಪ್ರತಿಪಾದಿಸಿ ವೇದಾಂತ ಗ್ರಂಥಗಳಲ್ಲಿಯ ಮುಖ್ಯಗ್ರಂಥವಾದ ಭಗವದ್ಗೀತೆಯ ಕಡೆಗೆ ತೆರಳಿದರು. ಹೆಣ್ಣು ಮಕ್ಕಳ ಉನ್ನತಿಯ ವಿಷಯದಲ್ಲಿ ಮರಾಠಿಗರ ಪ್ರಯತ್ನಗಳಿಂದ ನನ ಯುಗವೇ ಉತ್ಪನ್ನವಾಗುವಂತೆ ತೋರುತ್ತದೆ. ಈ ಮೊದಲೇ ಕೆಲವರು ಸ್ತ್ರೀಯರು ಸದವೀಧರೆಯರಾಗಿದ್ದು ಅವರು ವಿನಯಸಂಪನ್ನೆಯರಾಗಿದ್ದಾರೆಂದು ಕೇಳಿ ನಮ್ಮ ಪುರುಷವರ್ಗವು ಅವರ ವಿಷಯವಾಗಿ ಅಭಿಮಾನಪಡುವುದಕ್ಕೆ ಆಸ್ಪದವುಂಟಾಗಿದೆ. ಮುಂಬಯಿ, ಪುಣೆಗಳಲ್ಲಿ ಪ್ರೌಢಸ್ತ್ರೀಯರವಿದ್ಯಾಭ್ಯಾಸವು ಸೇವಾಸದನ ಮೊದಲಾದುವು ಗಳಲ್ಲಿ ನಡೆದಿರುವುದನ್ನು ಕೇಳಿ ಆರಿಗೆತಾನೆ ಸಂತೋಷವಾಗದಿರುವುದು ? ರಾನಡೆ ಯವರ ಪತ್ನಿಯಾದ ಶ್ರೀಮತಿ ರಮಾಬಾಯಿಯವರು ಎಲ್ಲರಿಗೂ ಮೇಲುಸಜಯಾ ಗಿದ್ದಾರೆ. ಅವರು “ ನಮ್ಮ ಆಯುಷ್ಯದೊಳಗಿನ ಕೆಲವು ನೆನಪುಗಳು ” ಎಂಬ ಪುಸ್ತಕವನ್ನು ಬರೆದುದು ಬಹಳ ಉತ್ಕೃಷ್ಟವಾಗಿದೆ. ಇದರಿಂದ ಇಂತಹ ವಿಖ್ಯಾತ ವಾದ ಸತಿದ್ದೆವತವು ತೀರಿಹೋದರೂ ಇವರು ತಾಳಿರುವ ದೈರ್ಯವು ತಿಳಿದು ಬರುತ್ತದೆ. ಈ ಗ್ರಂಥದಲ್ಲಿ ಮೋಕ್ಷಸುಖವನ್ನೂ ತುಚ್ಛವಾಗಿ ತೋರಿಸುವ ಮಹಾರಾಷ್ಟ್ರ ದೇಶದ ಮಾತಾಪಿತೃಗಳಂತಿದ-ಇವರಿಬ್ಬರ ಕುಟುಂಬಸುಖವು ವರ್ಣಿತವಾಗಿದೆ. ಇದಕ್ಕೆ ಗೋಖಲೆಯವರು ಪ್ರಸ್ತಾವನೆಯನ್ನು ಬರೆದಿದ್ದಾರೆ. ಇಂತಹ ಪುಸ್ತಕವು ಜನಸಾಮಾನ್ಯಕ್ಕಿಲ್ಲ ಮಾನ್ಯವಾಗುವುದೇನಾಶ್ಚರ್ಯ ? ಮರಾಠಿಯಲ್ಲಿ ಗದ್ಯವೆಂದರೂ ಸಲ್ಲುವ ಸುಲಭವಾದ ಭಾರತರಾಮಾಯಣ ಗ್ರಂಥಗಳಿವೆ. ಅವುಗಳೂ, ದಾಸಬೋಧಾದಿಸ್ವತಂತ್ರವೇದಾಂತವ್ಯವಹಾರಗಳ ತಾಯುಡಿಯಲ್ಲಿ ಬರೆದ ಗ್ರಂಥಗಳೂ ಇವುಗಳಿಂದ ಪೂರ್ವದಿಂದಲೂ ಒಂದು ತೆರದ ಮಾನಸಿಕ ಶುದ್ಧತೆ ಹುಟ್ಟಿ ಜನರಲ್ಲಿ ಒ೦ದುತೆರದ ಉದಾತ್ತ ಮನೋಭೂಮಿಕೆ ಸಿದ್ದ ವಾಗಿದೆ, ಪ್ರತಿ ಹಳ್ಳಿಯ ಒಕ್ಕಲಿಗರೂ ನಿತ್ಯ ಪಾರಾಯಣರೂಪದಲ್ಲಿ ಪಾಂಡವ

  • 0