ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ೨|| ಚೈತಾಷಾಫ] ಆಧು ಸಿಕಮಹಾರಾಷ್ಟ ಸಾಹಿತ್ಯ, j ಕಂಟಕ ಸಾಹಿತ್ಯ ... - : * . . ... . . . . . . ಪ್ರತಾಪ, ಹಿಂದುದೇಶದಲ್ಲಿ ಪ್ರಸಿದ್ಧವಾದ ದಾಸಬೋಧ ಇವನ್ನು ಓದುವುದು ಅನೇಕ ಶತಮಾನಗಳಿಂದಲೂ ನಡೆದುಬಂದಿದೆ. ಮೇಲೆ ಹೇಳಿದುದೆಲ್ಲವನ್ನೂ ಲಕ್ಷದಲ್ಲಿ ತಂದರೆ ಮೊನ್ನೆ ಹುಟ್ಟಿ ಇಂದು ಕಣ್ಣು ತೆರೆದ ಮರಾಠಿಗರು ನಾಯಕ್ಷೇತ್ರದಲ್ಲಿ ನನಗಿಂತಲೂ ಎಷ್ಟು ದೂರದವರೆಗೂ ಸಾಗಿರುವರೆಂಬುದು ಲಕ್ಷದಲ್ಲಿ ಬರಬಹುದು, ನಾಯಸಂಬಂಧವಾದ ಪ್ರತಿ ಯೊಂದು ವಿಷಯದಲ್ಲಿಯೂ ಅವರು ಪುರೋಗಾಮಿಗಳಾಗಿದ್ದಾರೆ. ಮರಾಠಿಗೆ ಸ್ವಲ್ಪವೇ ಪೂರ್ವೆತಿಹಾಸವಿದ್ದು ಕನ್ನಡನಾಡುಗಳಲ್ಲಿ ಹಿಂದಕ್ಕೆ ಮರಾಠಿಯಂತಹ ಅನೇಕ ಸಾಮ್ರಾಜ್ಯಗಳಾಗಿವೆ. ನಮ್ಮ ವಾಯದ ಸುಮಾರು ಎರಡುಸಾವಿರವರ್ಷ ಗಳಲ್ಲಿ ಮೊದಲಿನ ಅರ್ಧನಾದ ಸಾವಿರವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವೆಲ್ಲ ಲುಪ್ತವಾಗಿಯೇ ಇದೆ. ಈ ಎಲ್ಲ ಇತಿಹಾಸಸೂಕ್ಷಾವಲೋಕನದಿಂದ ವಿಚಾರಿಸ ಲಾಗಿ ಯಾವ ನಮ್ಮ ಪೂಜ್ಯವಾದ ತಾಯುಡಿಯಲ್ಲಿ ರತ್ನತ್ರಯರಂತಹ ಮಹಾಕವಿ ಗಳು ಬಾಳಿದರೋ ಆ ಭಾಷೆಯ ಭವಿಷ್ಯ ಮನ್ನತಿಯ ವಿಚಾರದಲ್ಲಿ ಸಿರಾರರಾಗಲು ನನಗೆ ಆವತೆರದ ಕಾರಣಗಳೂ ಇಲ್ಲ. ನಿರಾಶರಾಗುವುದೇತಕ್ಕೆ ? ನಮ್ಮ ಬಂಧು ವರ್ಗದವರ ಭಾಷೆಗಳಿಗಿಂತಲೂ, ನಾವು ಬಹಳವಾಗಿ ಮುಂದೆ ಹೋಗುವೆನೆಂದು ಹೇಳುವಷ್ಟು ಅತ್ಯುಜ್ಝಲವೂ ಅತ್ಯುತ್ಸಾಹಕಾರಕವೂ ಆದ ಇತಿಹಾಸ ನಮಗಿದೆ. ನಿದ್ರಾಯುಗವು ಪ್ರತಿಯೊಂದು ವಾಲ್ಮಯವಲ್ಲಿಯೂ ಕಾಣಬರುವುದು ಸಹಜ ವಾಗಿಯೇ ಇದೆ. ಪ್ರಸ್ತುತದ ಮಹಾರಾಷ್ಟ್ರ ಸಾಹಿತ್ಯದಲ್ಲಿಯೇ ಜ್ಞಾನೇಶ್ವರಮಹಾ ಕವಿಯಂತೆ ಪ್ರಸಿದ್ಧರಾದ ಸಾಧುವರ್ಯರೂ ಕವಿವರ್ಯರೂ ಆದ ಏಕನಾಥ ಮಹಾ ರಾಜರ ಅವತಾರವಾಗಲು ಎಷ್ಟೋ ವರ್ಷಗಳು ಹಿಡಿದುವ, ಅದರಂತೆಯೇ ಮರಾಠ ಯವರ ಮುಂದಿನ ಉನ್ನತಿಗೂ ಕಾರಣಭೂತವಾದ, ಒಂದುವೇಳೆ ಹಿಂದುಧರ್ಮಕ್ಕೆಲ್ಲ ಆಸರೆಯಾದ ಸುವಿಖ್ಯಾತವಾದ ವಿಜಯನಗರ ಸಾಮ್ರಾಜ್ಯದ ಸಮಾಪ್ತಿಯಾದಮೇಲೆ ಸ್ವಲ್ಪ ಕಾಲದವರೆಗೆ ನಮ್ಮ ಕನ್ನಡದ ಪ್ರಗತಿಯು ನಿಂತುಹೋದರೆ ಏನಾಶ್ಚರ್ಯ ? ಕರ್ಣಾಟಕದ ಪೂರ್ವೆತಿಹಾಸವು ಎದ್ದು ಕಾಣಿಸಲು ನಮ್ಮಲ್ಲಿ ರಾವ್‌ ಬಹದ್ದರ್‌ ಶ್ರೀಮಾನ್ ಆರ್. ನರಸಿಂಹಾಚಾರ್ಯರು, ಮರಾಠಿಗರ ರಾಜವಾಡೆಯವರೂ ಅನೇಕವಾಗಿ ಬೇಕಾಗಿದ್ದಾರೆ. ೯೧.