ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿತಾಕಲಾಪ. ಪ್ರಾಚೀನ ಕವಿತೆಗಳು.

  • ಸೂಕ್ತಿ ಸುಧಾರ್ಣವ ೨ ದಿ೦ದ.

ಪ್ರಾಚೀನಗ್ರಂಥಗಳೊಳಗೆ ಬಂದಿರುವ ಅಷ್ಟಾದಶವರ್ಣನೆಗಳಲ್ಲಿ ಸ್ವಾರಸ್ಯ ವಾದ ಕೆಲವು ಪದ್ಯಗಳನ್ನು ಆಯ್ತು ಈ ಪ್ರಕರಣದಲ್ಲಿ ಹಾಕಬೇಕೆಂದು ಉದ್ದೇಶಿಸಿದೆ. »ಶಬ್ದಮಣಿದರ್ಪಣ' ಕಾರನಾದ ಕೇಶಿರಾಜನ ತಂದೆಯೂ, ಜನ್ನಕವಿಯ ಸೋದರಿಯ ಗಂಡನೂ ಆದ ಮಲ್ಲಿಕಾರ್ಜುನನು (ಸು, ೧೨೪೫) ಕವಿಕಾವ್ಯಾ೦ಗಗಳ ವರ್ಣನಾ ರೂಪವಾದ ಪದ್ಯಗಳನ್ನು ಪೂರ್ವಕವಿಗಳ ಗ್ರಂಥಗಳಿಂದ ಸಂಕಲಿಸಿ * ಸೂಕ್ತಿ ಸುಧಾರ್ಣವ' ವೆಂಬ ಹೆಸರುಳ್ಳ ಕಾವ್ಯ ಸಾರವೊಂದನ್ನು ಬರೆದಿರುತ್ತಾನೆ. ತಾನು ಅನುವಾದಮಾಡಿರುವ ಪೂರ್ವಕವಿಗಳಲ್ಲಿ ಕೆಲವರ ಹೆಸರನ್ನು ಈ ಸದ್ಯದಲ್ಲಿ ಹೇಳಿದ್ದಾನೆ :-.. ಜನ್ನ ನ ದೇಸೆ, ಪಂಪನ ಗುಣ ೦, ಗುಣ ನಂದಿಯ ತೋ ಲಡು, ಪೊನ್ನ ನೊಳ್ | ಸನ್ನಿ ದಮಾದ ನಾಣ್ಣುಡಿ, ಗಜಾಂಕುಶ ರಾಜನ ಚಿತ್ತವೃತ್ತಿ, ತಾ|| ನುನ್ನ ತವಾಗಿ ಸಂದ ಗುಣವರ್ಮನ ಜಾತಿ, ಸಮಾನುರಕ್ತಿಯಿಂ | ದನ್ನೆಲಸಿರ್ಪು ವೀಸು ಕವಿನಲ್ಲನ ಕಾವ್ಯ ವಿಳಾಸಗೇಹದೊಳ್ || ಮೇಲೆ ಹೇಳಿದ ಕವಿಗಳ ಗ್ರಂಥಗಳಲ್ಲಿಯ ಪದ್ಯಗಳಲ್ಲದೆ ನನಗೆ ತಿಳಿದಮಟ್ಟಿಗೆ ಮುಂದೆ ಹೇಳುವ ಕವಿಗಳ ಗ್ರಂಥಗಳಿಂದ ಉದ್ಭತವಾದಪದ್ಯಗಳೂ ದೊರೆಯುತ್ತವೆ. ಕವಿಚರಿತೆ. ಈ ಎಲ್ಲಾ ಕವಿಗಳ ಹೆಸರುಗಳನ್ನೂ ಇಲ್ಲಿ ಕ್ರಮದಿಂದ ಬರೆದಿದೆ :- ಗುಣನ೦ದಿ (ಸುಮಾರು ೯c೦) | ಚ೦ದ್ರರಾಜನ ಮದನತಿಲಕ (ಸು. ೧೦೭೯.) ಆದಿಗುಣವರ್ನುನ ಶೂದ್ರಕ (ಹರಿವಂಶ) , ಅಭಿನವ ಪ೦ಹ (ನಾಗಚ೦ದ್ರ) ನ ರಾಮಾ (ಸು. ೯೨೫). ಯಣ, ಮಲ್ಲಿನಾಥಪುರಾಣ (ಸು.೧೧೦೫). ಆ ಒಪಂಪನ ಭಾರತ, ಆದಿಪುರಾಣ (೯೪೧)- : ದುರ್ಗಸಿಂಹನ ಪ೦ಚತ೦ತ್ರ (ಸು.೧೧೪೫). ಪೊನ್ನನ ಶಾಂತಿಪುರಾಣ, ( ಭುವನೈಕರಾ ! ಉದಯಾದಿತ್ಯನ ಅಲಂಕಾರ (ನು.೧೧೫c). ಮಾ ಭು ದಯ) (ಸು. ೯೫೦ ಕೈ ಹಿ೦ದೆ), ಹರಿಹರನ ಗಿರಿಜಾ ಕಲ್ಯಾಣ (ಸು. ೧೧೬೫). ನಾಗವರ್ಮನ ಕಾದಂಬರಿ (ಸು, ೯೯೦), ನೇಮಿಚ೦ದ್ರನ ಲೀಲಾವತಿ, ಅರ್ಧ ನೇಮಿ ಗಜಾ೦ಕುಶ (೧೦೫೦ಕ್ಕೆ ಹಿಂದೆ).! (ಸು. ೧೧೭೦). ೯