ಪುಟ:ಕಾದಂಬರಿ ಸಂಗ್ರಹ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ, vvvvvvv- vv v/MM/\hyvvvvvvvvvvvvvvvvvvv wwwvwwvvwvvvvvvvvvvv ಹೋಗುತ್ತ, ದಾರಿಯಲ್ಲಿ, ಅವರವರಿಗೆ ನಡೆದ ಸಂಭಾಷಣೆಯಿಂದ ಅವರ ಗುಂಪಿನಲ್ಲಿ ನಾಲ್ಕು ಜನರು ಮಾತ್ರ ಇರುವಂತೆಯ, ಕಾಳಿಚರ ಅನು ಮೇಲಿಂದಮೇಲೆ “ ಆ ಕಾಡಿಗೆ ” ಹೊಕ್ಕು ಅವರನ್ನು ಬಹಳವಾಗಿ ತೊಂದರೆಗೊಳಗಾಗಿಸುತ್ತಿದ್ದುದರಿಂದ, ಅವರುಗಳು ರೂಪಾಂತರವನ್ನು ಕಲ್ಪಿಸಿ, ಊರನ್ನು ಸೇರಿ, ಊರೊಳಗೆ ಇದ್ದುಕೊಂಡು, ಮುಂದಿನ ಕಾರ್ಯಗಳನ್ನು ಸಾಧಿಸಲೇರ್ಪಡಿಸಿದ್ದರೆಂತಲೂ ತಿಳಿಯಬಂದಿತಲ್ಲದೆ, ವಿಜಯಿನಿಯು ಭುಜಂಗನನ್ನು ಮದುವೆಯಾಗಲೆಪ್ಪುವುದಾದರೆ, ರಿಗೂ, ಗಂಧರ್ವ ವಿವಾಹದಂತ ಮಾಡಿ ಒಂದೆರಡು ದಿವಸಗಳ ಪರ್ಯ೦ತರ ಅವರೀರ್ವರನ್ನೂ ಒಂದು ಕಡೆ ಇಟ್ಟು ಬಿಟ್ಟರೆ, ಯೋಗ್ಯರ ಮನೆಯ ಹುಡುಗಿ ಯಾದ ಅವಳು ಪಾತಿವ್ರತ್ಯಕ್ಕೂ, ಮರ್ಯಾದೆಗೂ, ಅಂಟಿಕೊಂಡು, ಭುಜಂಗನನ್ನೇ ಎಲ್ಲರ ಸಮಕ್ಷಮದಲ್ಲಿ ಯೆ ವಿವಾಹಮಾಡಿಕೊಳ್ಳಬಹು ದಾದುದರಿಂದ ಹಾಗೆ ಮಾಡಬೇಕಂತಲೂ ಇಲ್ಲವಾದರೆ ಅವಳನ್ನು ಮನ ಪ್ರರಿಗೆ ಕಳುಹಿಸಬೇಕೆಂದು ನಿರ್ಧರಿಸಿರುವರೆಂತಲೂ, ತಿಳಿಯಬಂದಿತು, ಇರ್ವರೂ ಒಂದು ಗವಿಯಂತಿದ್ದ ಸ್ಥಳವನ್ನು ಸೇರಿದರು. ಅದರ ಬಾಗಿಲಿನ ಹೊರವಳಯದಲ್ಲಿ ಇಬ್ಬರು ಮಲಗಿದ್ದರು. ಅವರು ನಿದ್ರಾವಶರಾಗುವುದನ್ನು ಕಂಡು, ಈ ಎರಡು ವ್ಯಕ್ತಿಗಳ ಪೈಕಿ ಒಬ್ಬನು, ಇನ್ನೊಬ್ಬನನ್ನು ಕೈ ಹಿಡಿದು ಸ್ವಲ್ಪ ಹಿಂದಕ್ಕೆಳ ದನು. ಅವನು “ ಏಕೆ ಎಳೆಯುತ್ತಿ ? ” ಎಂದಂದು ಹಿಂದಕ್ಕೆ ತಿರುಗುವಷ್ಟರಲ್ಲಿಯೇ ಆ ವ್ಯಕ್ತಿಯು ತನ್ನ ಕೈಯ್ಯಲ್ಲಿದ್ದ ಪಿಸ್ತೂ ಲನ್ನು ಮುಖಕ್ಕೆ ಹಿಡಿದು, “ ಉಸರಾಡಿದರೆ ಬದುಕಲಾರೆ ! ? ಎಂದು ಮೆಲ್ಲನೆ ಹೇಳಿದನು, ಆ ವ್ಯಕ್ತಿಯು ಹೆದರಿ, ಅವನು ಹೇಳಿದಂತೆಯೇ ತನ್ನ ಕೈಕಾಲುಗಳನ್ನು ಬೆನ್ನಿನ ಕಡೆಗೆ ನೀಡಿ ಮುಖವಡಿಯಾಗಿ ಮಲಗಿ ಆಂಡನು. ಈ ವ್ಯಕ್ತಿಯು ಅವನ ಕೈಕಾಲುಗಳನ್ನು ಕಟ್ಟಿ, ಮಲಗಿದ್ದವ ರಿಬ್ಬರನ್ನೊಬ್ಬನಿಗೆ “ ಪ್ರತಿಜ್ಞಾ ನಾಶಕ ” ದವ (Chloro Form) ವನ್ನು ಉಪ ಯೋಗಿಸಿ ಮತ್ತೊಬ್ಬನ ಸಮಿಾಪಕ್ಕೆ ಹೋಗಿ ಹೊಡೆದೆಬ್ಬಿಸಿದನು. ಅವನು ಗಾಬರಿಯಿಂದ ಮೇಲಕ್ಕೇಳುವಷ್ಟರಲ್ಲಿಯೇ ಅವನಿಗೆ ಪಿಸ್ತೂಲನ್ನು ತೋರಿಸಿ " ಈಗ ನಿನಗೆ ಜೀವದಮೇಲಿನ ಆಶೆಯಿದ್ದರೆ ನನಗೆ ಸರಿಯಾದ ಪ್ರತ್ಯುತ್ತರ

'