ಪುಟ:ಕಾದಂಬರಿ ಸಂಗ್ರಹ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಏಲಾಸಿನಿ ಕಿನ ಶಬ್ದವಾಯಿತು, ಶಬ್ದ ವನ್ನನುಸರಿಸಿ ಎಲ್ಲರೂ ಒಳಗೆ ನುಗ್ಗಿ ದರು. ಆ ವೇಳೆಗೆ ಕಾಳಿಚರಣನು ಬಹು ರಭಸದಿಂದ ತನ್ನ ಸಾಹಸವನ್ನೆಲ್ಲ ಪ್ರಯೋಗಿಸಿ ಒಂದು ಬಾಗಿ ಲನ್ನು ಒದೆಯುತ್ತಿದ್ದುದನ್ನು ನೋಡಿದರು. ಕೂಡಲೆ ಎಲ್ಲರೂ ಅಲ್ಲಿಗೆ ಓಡಿಹೋಗಿ, ದೇನು' ಎಂದು ಕೇಳಲು, ವಿಜಯಿನಿ ವಿಲಾಸಿನಿಯರ ಅಪಹಾರಕನಾದ ಪುರಂದ ರನ ಈ ಮನೆಯಲ್ಲಿದ್ದನು. ಅವನು ನನ್ನ ಮೇಲೆ ಬೀಳಲು ಬರಲು, ಅವನನ್ನು ಜೀವ ಸಹಿತನಾಗಿ ಹಿಡಿಯಬೇಕೆಂಬ ಆಶೆಯಿಂದ ಅವನ ಕೈಯಲ್ಲಿದ್ದ ಪಿಸ್ತೂಲನ್ನು ನೆಲಕ್ಕೆ ಕೆಡದೆ, ತತ್ಕ್ಷಣವೆ ಅವನು ಈ ಕೊಠಡಿಯಲ್ಲಿ ಸೇರಿಕೊಂಡನು ? ” ಎಂದು ಹೇಳಿ ದನು. ಎಲ್ಲರೂ ಸೇರಿ ಆ ಬಾಗಿಲನ್ನು ಮುರಿದು, ಒಳಹೊಕ್ಕರು. ಪುರಂದರನ ಅಲ್ಲಿರಲಿಲ್ಲ ! ಕಾಳೀಚರಣನು ಕೇವಲ ಜುಗುಪ್ಪಾನ್ವಿತನಾದನು ! ಕೈಗೆ ಸಿಕ್ಕಿದ್ದ ವನು ತಪ್ಪಿಸಿಕೊಂಡುದಕ್ಕಾಗಿ ಸ್ವಲ್ಪ ವ್ಯಸನಪಟ್ಟನು. ಆದರೇನು ? ಕೇವಲ ವ್ಯಸನ ದಲ್ಲಿಯೇ ಕೂಡುವ ಸ್ವಭಾವದವನೇ ? ಅಲ್ಲ ! ಕಾಳೀಕರಣನಿಗೆ ಆ ಸ್ವಭಾವವಿರಲಿಲ್ಲ! ಉತ್ತರಕ್ಷಣದಲ್ಲಿಯೇ ಪುರಂದರನು ತಪ್ಪಿಸಿಕೊಂಡು ಹೋದ ಮಾರ್ಗವನ್ನು ಕಂಡು ಹಿಡಿದು, ಅವನನ್ನು ಹುಡುಕಲು, ಹೊರಗೆ ಹೋದನು. ನಾತಿದೂರದಲ್ಲಿ ಬಿದ್ದು ನರಳುತಿದ್ದ ಒಬ್ಬನನ್ನು ಕಂಡು, ' ಅವನಾರು ? ” ಎಂದು ವಿಚಾರಿಸಲು, ಅವನು, - ಬೈಸಿಕಲ್ಲಿನಮೇಲೆ ಆಕಡೆ ಹೋಗುತ್ತಿರಲು, ಆರೋ ಒಬ್ಬನು ಅವನನ್ನು ಬೈಸಿಕಲ್ಲಿನಿಂದ ತಳ್ಳಿ ಆದರ ಮೇಲೆ ಕುಳಿತುಕೊಂಡು ಹೊರಟುಹೆ ಇದನೆಂದು ಹೇಳಿದನು. ಅದ್ರ ಪುರಂದರನ ಕೆಲಸವೇ ಇರಬಹುದೆಂದು ಕಾಳೀಚರಣನು ಆಲೋಚಿಸಿ, ತಾನೊಂದು ಬೈಸಿಕಲ್ಲನ್ನು ಹತ್ತಿ ಪುರಂದರನು ಹೋದ ಮಾರ್ಗವನ್ನೇ ಅನುಸರಿಸಿ ಬಹು ವೇಗವಾಗಿ ಹೋದನು, ರ್ಇ ಸ್ಪೆಕ್ಟರು ಭುಜಂಗನನ್ನು ಕರೆದುಕೊಂಡು ಹೊರಟು ಹೋಗಿ, ಆ ಮನೆಗೆ ತಕ್ಕ ಕಾವಲನ್ನು ಏರ್ಪಡಿಸಿದರು,