ಪುಟ:ಕಾದಂಬರಿ ಸಂಗ್ರಹ.djvu/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಆL ಕಾದಂಬರೀ ಸಂಗ್ರಹ ಸಿನವರು ಇವರನ್ನು ಕಂಡರೂ ಕಾಣದವರಂತೆ ನಟಿಸಲು, ಭುಜಂಗನು ಮಹದಾನಂದ ದಿಂದ ಮನೆಯನ್ನು ಪ್ರವೇಶಿಸಿದನು. ಕಾಳೀಚರಣನು, “ ಸ್ವಾಮಿ ! ತಮ್ಮ ಕೆಲಸವು ಕೈಗೂಡಿತೆಂಬುವುದಕ್ಕೆ ಇನ್ನಾವ ಅಭ್ಯಂತರವೂ ಇಲ್ಲ. ಈವಾಗ ನನಗೆ ಹತ್ತು ಸಾವಿರ ರೂಪಾಯಿ ಇನಾಮ್ ಕೂಡ ಬೇಕು, ಇಲ್ಲವಾದರೆ ಕೊಡುವುದಾಗಿ ಕಾಗದ ಬರದು ಕೊಡಬೇಕು. ಇಲ್ಲವಾದರೆ ನನ್ನ ಮಂತ್ರದ ಕುಂಕುಮವನ್ನೂ ಕೊಡುವುದಿಲ್ಲ, ಹುಡುಗಿಯರನ್ನು ಕರೆದುಕೊಂಡು ಹೋಗುವುದಕ್ಕೂ ಬಿಡುವುದಿಲ್ಲ ! ” ಎಂದಂದನು. ಭುಜಂಗನಿಗೆ ಏನು ಮಾಡಲೂ ತೋಚದೆ ಹೋಯಿತು. ಎಷ್ಟು ಆಲೋಚಿಸಿ ನೋಡಿದರೂ ಕಾಗದ ಬರೆದು ಕೊಡಬೇಕು, ಇಲ್ಲವೆ ದ್ರವ್ಯವನ್ನು ಕೊಡಬೇಕು, ಇಲ್ಲವಾದರೆ ಮಾರ್ಗ ವಿಲ್ಲವೆಂಬುದು ದೃಢವಾಯಿತು. ಕಟ್ಟಕಡೆಗೆ ದುರುಳರಿಗೆ ಸ್ವಾಭಾವಿಕವಾಗಿ ಇಂತಹ ಅನೇಕ ಸಂದರ್ಭಗಳಲ್ಲಿ ತೋರಿಬ ರುವ ಉಪಾಯವೊಂದು ಆಗಲೆ ಹೊಳೆಯಿತು ಅದೇನು ? ತನ್ನೆ ದುರಾಳಿಯನ್ನು ಗತ ಪ್ರಾಣನನ್ನಾಗಿಸುವುದೆ ! ಭುಜಂಗನು ತನ್ನ ಕೈಯ್ಯಲ್ಲಿದ್ದ ಪಿಸ್ತೂಲನ್ನು ಕಾಳೀಚರಣನ ಕಡೆಗೆ ಹಾರಿಸಿಯೇಬಿಟ್ಟನು. ಕಾಳೀಚರಣನು ತತ್‌ಕ್ಷಣವೆ ಬಿದ್ದು ಬಿಟ್ಟನು. ಭುಜಂಗನ್ನ ತಾನು ಕೃತಕೃತ್ಯನಾದೆನೆಂದಂದುಕೊಂಡು ಮಹದಾನಂದದಿ:ದ ಕಾಳೀಚರಣನ ಜೇಬಿನ ಇದ್ದ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕೆಂದು ಕೈ ನೀಡಿದನು. ಕಾಳೀಚರ ಣನು ತತಕ್ಷಣವೆ ಅವನನ್ನು ಎಳೆದು ನೆಲಕ್ಕೆ ಬೀಳಿಸಿ, ಭುಜಂಗ ! ಹಕ್ಕಿ ನರಸನ ಸಾಮರ್ಥ್ಯವನ್ನು ನೋಡಿದಿಯೋ ! ” ಎಂದಂದು ತನ್ನ ಸ್ವಾಭಾವಿಕವಾದ ಸ್ವರದಿಂದ ಮಾತನಾಡಲು, ಭುಜಂಗನು ತಾನು ಕಾಳಿಚರಣನ ಬಲೆಯಲ್ಲಿ ಬಿದ್ದಿದ್ದೇನೆಂದೂ, ತನ ಗಿನ್ನು ಉಳಿಗಾಲವಿಲ್ಲ ವೆಂದೂ ತಿಳಿದು ಭಯಭ್ರಾಂತನಾಗಿ ಮತ್ತಾವ ಸಾಹಸಕ್ಕೂ ಪ್ರಯತ್ನ ಪಡದೆ ಸುಮ್ಮನಾಗಿಬಿಟ್ಟನು. ಕಾಳೀಕರಣನ ಸಂಕೇತವನ್ನು ಅರಿತು ಪೊಲೀಸಿ ನವರು ಅಲ್ಲಿಗೆ ಬಂದು, ಭುಜಂಗನನ್ನು ಬೈದಿಯಾಗಿ ಕರೆದುಕೊಂಡು ಹೋದರು, ಕಾಳೀಚರಣನು, ಭುಜಂಗನಿಗೆ ತಾನು ಕೊಟ್ಟಿದ್ದ ಪಿಸ್ತೂಲನ್ನು ತೆಗೆದುಕೊಂಡು, ಅದ ರಲ್ಲಿದ್ದ ಹುಸಿಮದ್ದನ್ನು ತೆಗೆದು ತನ್ನ ಧೀನದಲ್ಲಿಟ್ಟು ಕೊಂಡು ಮುಂದಿನ ಕಾರ್ಯದಲ್ಲಿ ಉದ್ಯುಕ್ತನಾದನು. ಆ ಗೃಹದ ಎಲ್ಲಾ ಭಾಗಗಳನ್ನೂ ಪರೀಕ್ಷಿಸಿದನು, ಒಂದು ಕಡೆಯಲ್ಲಿ ಮೊದ ಬಿದ್ದ ಬಾಗಿಲನ್ನು ಕಿತ್ತು ಆ ಸ್ಥಳದಲ್ಲಿ ಗೋಡೆಯು ಹಾಕಲ್ಪಟ್ಟಿದ್ದಂತಿತ್ತು. ಆ