ಪುಟ:ಕಾದಂಬರಿ ಸಂಗ್ರಹ.djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಎಲಸಿನ -ಪಿಶಾಚನಾಗಿಯಾದರೂ ನಿನ್ನ ಮೇಲೆ ಸೇಡನ್ನು ತೀರಿಸಿಕೊಳ್ಳುವೆನು !!! ನೀನು ನನ್ನನ್ನು ಹಿಡಿಯಲೇ ಬೇಕೆಂದೂ, ನಾನು ನಿನ್ನ ಕೈಗೆ ಸಿಕ್ಕಲೇಬಾರದೆಂದೂ, ಪರಸ್ಪರ ಬದ್ಧ ಕಂಕಣರಾಗಿರುವೆವು. ನಿನ್ನ ಪ್ರಯತ್ನವು ವಿಫಲವಲ್ಲ ! ನನಗೆ ದೈವಸಹಾಯವಿಲ್ಲ !! ನಿನ್ನ ಕೈಯಲ್ಲಿ ಬೀಳುವುದಕ್ಕಿಂತಲ, ಯಮಕಿಂಕರರ ಕರಗತವಾಗುವುದು ನನಗೆ ಅಧಿಕ ಸುಖಕರವಾಗಿ ಕಂಡಿತು. ಹಾಗೆಯೇ ನಿಶ್ಚಯಿಸಿದೆನು ! ಶ್ವೇಚ್ಛಾಮರಣವನ್ನೆ ಹೊಂದುವನು. ಆವ ಮನೆಯಲ್ಲಿ ನನಗೆ ಬಲಭುಜದಂತಿದ್ದ ಮತ್ತು ವು ನಿನ್ನೊಂದಿಗೆ ಹೋರಾಡಿ ಗತಪ್ರಾಣನಾದನೋ, ಎಲ್ಲಿ ನೀನು ಬಂದಿಯಾಗಿದ್ದು ಅತಿ ಸಾಹಸದಿಂದ ತಪ್ಪಿಸಿ ಕೊಂಡೆಯೋ, ಅಲ್ಲಿ ಈ ನಿಮ್ಮ ನಿರ್ಭಾಗ್ಯ ಸಹಾಧ್ಯಾಯಿಯ ಮೃತ ಕಳೇ ಬರವನ್ನು ನೋಡು ! ನಿರ್ಭಾಗ್ಯ ಪುರಂದರ. ಕಾಗದವನ್ನು ನೋಡಿ ಕಾಳೀ ಕರಣನು ಸ್ವಲ್ಪ ಕಾಲ ಆಲೋಚಿಸಿದನು. ಹೀಗೆ ಮಾತನಾಡದೆ ಕಾಳೀಚರಣನು ಕುಳಿತಿದ್ದುದನ್ನು ರ್ಇ ಸ್ಪೆಕ್ಟರು ಕಂಡು, « ಇದೇನು ??” ಎಂದು ಪ್ರಶ್ನಿಸಿದರು. ಕಾಳೀಚರಣನು, ನನ್ನ ಯೋಚನೆಯು ಸರಿಯಾದ ಮಾರ್ಗ ದಲ್ಲಿ ಓಡುತ್ತಿರುವುದಾದರೆ, ಇದೊಂದು ಅತಿಶಯ ಗಂಭೀರ ಚಾತುರ್ಯ !?? ಎಂದಂದು ರಾಯರೆ ! ಅಗತ್ಯವಾದ ಕೆಲಸವಾಗಿ ಕಾಣುತ್ತದೆ ! ಸ್ವಲ್ಪ ಕಾಲದಲ್ಲಿಯೆ ಬಂದು ತಮ್ಮನ್ನು ನೋಡುವೆನು.' ಎಂದು ಹೇಳಿ ಅಲ್ಲಿಂದ ಹೊರಟೇಬಿಟ್ಟನು. ಕಾಳೀಚರನು ಹದುದನ್ನು ನೋಡಿ ರ್ಇಸ್ಪೆಕ್ಟರು, ಇದೆಂತಹ ಕೆಲಸ! ಯಾವಾಗನೋಡಿದರೂ, ಎಂತಹ ಕಾರ್ಯದಿದ್ದರೂ, ಏಕಾಂಗಿಯಾಗಿಯೇ ನುಗ್ಗುತ್ತಿರು ವನಲ್ಲ ! ಇದೆಂತಹ ಧೈರ್ಯ !! ಈತನಿಗೆ ಪ್ರಾಣಭಯವೆಂಬುದು ಲೇಶಮಾತ್ರ ವಾದರೂ ಇಲ್ಲ ! ಆ ಕಾಗದದಲ್ಲಿದ್ದ ಸಂಗತಿಯನ್ನು ಕೂಡ ಹೇಳದೆ ಹೊರಟು ಹೋದನಲ್ಲಾ ! ಆಗಲಿ !!?” ಎಂದಂದುಕೊಂಡು, ಕಾಳೀಕರಣನು ಹೋದ ಮಾರ್ಗ ವನ್ನೇ ಅನುಸರಿಸಿ ಹೋದರು. ಇಬ್ಬರೂ ನಿರ್ದಿಷ್ಟ ಸ್ಥಾನವನ್ನು ಸೇರಿದರು. ದೃಶ್ಯವು ಹೃದೋದಕವಾಗಿತ್ತು. ಕಾಳೀಕರಣನು ಚಕಿತನಾದನು. ರ್ಇ ಸ್ಪೆಕ್ಟರ ಸ್ಥಿತಿಯಾದರೋ ಕೇವಲ ಸ್ತಂಭೀಭೂತ? ಸ್ವಲ್ಪ ಕಾಲ ಹಾಗೆಯೇ ನಿಂತಿದ್ದರು.” ಅಹಹ ! ಎಂತಹ ಭಯಂಕರ ಪರಿಣಾಮ !!