ಪುಟ:ಕಾದಂಬರಿ ಸಂಗ್ರಹ.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸೊಬಗಿನಬಳ್ಳಿ ಇeಮೊದಲನೆ ಮುಗುಳು. ಚೌಪದಿ ಸಿರಿಯರಸ ನಡಿಯಳಿಗವನೆ ಮಾಡುವೆನು | ಹೊರೆವನವನಾನದಕ್ಕೇಕೆ ಬೇಡುವೆನು ? | ಹೊರತೊಮ್ಮೆ ಕೃಷ್ಣನೈದುತ ರುಕ್ಕಿಣಿಯನು | ನಿರುಕಿಸುತ ಸಂದೆಯದೊಳಿಂತು ಪೇಳಿದನು ||೧|| ನಲ್ಲೆ ಕತ್ತಲೆಯ ದಿನಿತಿನಿತಾಗಿ ಮುಸುಕೆ | ಮೆಲ್ಲ ಮೆಲ್ಲನೆ ಮಸುಕುವಾ ಸಂಜೆಯಿರಕೆ | ಕಲ್ಪಾಯ್ತನಹುದು ನಿನ್ನ ಯ ಮೈಯಿದೇನು | ಸೊಲ್ಲಿಸೆನ್ನೊಡನೆ ಮರೆಮಾಜದೆಲ್ಲವನು ||೨|| ಬೆಳಕಿಂದೆನಸು ಹರಿಯೆ ಕೈಗೆಲಸದವಳು | ಬಳಿವಂದು ಮೆಲ್ಲನೆಂದಳು ಬಗೆಯೊಳಳಲು | ಬೆಳೆಯುತಿಹುದೊಡತಿಗೆಂದುಸುರದೇನಿಂದು | ಪಳವಿರದೆ ಮರುಗಿದರೆ ದೊರೆಯಲೇನಿಹುದು ||೩|| ಬೇರೆಹೆಂಗಳತೆರದಿ ನಿನಗೆ ಸವತಿಯರೊಳ್ | ತೋರದೆಳ್ಳನಿತರುಂ ಮಚ್ಚರಂಗಳ | ಆರಾದರುಂ ಕುನಿಸಿದರೆ ನುಡಿವುದಿದ್ದ೦ | ತಾಲೆಸಗುವರು ಕುತ್ತವರಿಯದಿರೆ ಮದ್ದ೦ ||೪|| ಇನಿಯ ನೀಂನಿ ಯೆಡೆ ಬೇರಾವನೋವು | ಎನಗೊದಗಲುಂಟುನೇಹವನಾಂತು ತಾವು | ಇನಿದಾಗಿ ಸವತಿಯರು ಬಾಳ್ವರಾದರೆ ಕೇಳ್ | ಕುನಿಪುದದವಳಲೊಂದು ಮುಳುಮೊನೆಯವೊಲು ||೫||