ಪುಟ:ಕಾದಂಬರಿ ಸಂಗ್ರಹ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ, . ಕರಾವವಾಗಿತ್ತು. ಒಂದೆರಡು ಬ್ರಾಹ್ಮಣರ ಮನೆಗಳ ಕೆಲವು ಬೆಸ್ಕಗ ಗುಡಿಸಲುಗಳೂ ಇದ್ದವು ಈಚೆ ಚಿಗೆ ಊರು ಅಭಿವೃದ್ಧಿ ಸ್ಥಿತಿಯನ್ನು ಹೊಂದುತ್ತಿರುವುದು, ಬಾಗೇಪಲ್ಲಿಯ ಸುತ್ತಲೂ ಬೆಟ್ಟ ಗುಡ್ಡಗಳು ಹೆಚ್ಚು. ಮಲೆನಾಡುಗಳಲ್ಲಾದರೋ ಬೆಟ್ಟಗಳಿದ್ದರೂ, ಗಂಭೀರವಾದ ಆತ್ಯು ಇತರೆ &ಣಿಗಳು ತುಂಬಿರುವುವು, ಮತ್ತು ಘೋರವಾದ ಅರಣ್ಯ ಪ್ರದೇಶ ವನ್ನೆಲ್ಲಾ ಆಕ್ರಮಿಸಿಕೊಂಡು ದೂ ದೂರಗಳಲ್ಲಿ ಒಂದೊಂದು ಹಳ್ಳಿಗಳನ್ನು ಒಳಗೊಂಡಿರುವುದು, ಬೈಲುಸೀಮೆಯಲ್ಲಿ ಪಶ್ಚಿಮಘಟ್ಟದ ರಮಣೀಯ ಕತೆಯು ಬಾರದಿದ್ದರೂ ವಿಶೇಷವಾಗಿ ಕರೆಗಳಿರುವುದರಿಂದ ಈ ಭೂಮಿಯು ಪೈರು ಪಚ್ಚೆಗಳಿಂದ ಕೂಡಿ, ಮನೋಹವಾಗಿರುವುದು. ಆದರೆ ಈಗ್ಗೆ ಆರುವರ್ಷಗಳಿಂದ ಮಳೆಯಿಲ್ಲದೆ, ಕರೆಗಳು ತು೦ಒದ್ದರಿಂದ ಈ ಡಿಯುವ ಸೀಳು ಸಿಕ್ಕುವುದೂ ಕಷ್ಟವಾಗಿದೆ. ಒಂದೊಂದು ವೇಳೆ ಹಳ್ಳಿಯ ಜನ ಗಳು ನೀರಿಗಾಗಿ ಒಂದು ಮೈಲಿಯವರೆಗೂ, ಮಡಿಕೆಗಳನ್ನೂ, ಬಿಂದಿಗೆ ಗಳನ್ನೂ ಹೊತ್ತುಕೊಂಡು ಹೋಗುವರು. ಬಾಗೇಪಲ್ಲಿಯಲ್ಲಿಯೂ ಕೂಡ, ನೀನೀರು ಸಿಕ್ಕುವುದು ಕಷ್ಟ, ನದಿಗೆ ಹೊಸನೀರು ಒಂದಾಗ ರೋಗಾದಿಗಳು ಬರುವುವೆಂದು ಹೆದರಿ ಜನಗಳು ಒಹಳ ದೂರದಿಂದ ಕೂಡಿ ಯುವ ನೀರನ್ನು ತಂದುಕೊಳ್ಳುವರು. ಜಿತುವತಿಯ ಎಳೆಯಲ್ಲಿ ಇಬ್ಬರು ಯುವಕರು ಮಾತನಾಡುತ್ತಲಿ ದ್ದರೆಂದು ಹೇಳಿರುವೆವು ಈ ಚಿತ್ರಾವತಿ ಹೊಳೆಯು ಬಾಗೇಪಲ್ಲಿಗೆ ಆರ್ಧಮೈಲಿಯ ದೂರದಲ್ಲಿ ಹರಿಯುವುದು. ಬೇಸಿಗೆಯಲ್ಲಿ ಬಂC ಕಾಲುವೆಯಲ್ಲಿಯ, ಮಳೆಗಾಲದಲ್ಲಿ ಆರ್ಕಡೆಗಳಲ್ಲಿ ಉಬ್ಬಿಯ ಇದು ಪ್ರವಹಿಸುವುದು. . ಈನದಿಯಿಂದ ಕೊಂಚಮಟ್ಟಿಗೆ ತೋಟಗಳನ್ನೂ, ಗದ್ದೆಗಳನ್ನೂ, ಬೆಳೆಯಿಸಿಕೊಂಡು ಜನರು ನೆಮ್ಮದಿಯಾಗಿರುವರು. ಊರಿನ ಜನರು ಕುಡಿಯಲು, ಜೆತಾ ವತಿಯೇ ನೀರನ್ನು ಕೊಡಬೇಕು, ಚಿತ) ವತಿಯಿಂದ ಬಹಳ ಪ್ರಯೋಜನವುಂಟು, ಒಟ್ಟೆಗಳನ್ನು ಒಗೆಯುವುದಕ್ಕೂ ಸನಸಂಧ್ಯಾವಂದನೆಗಳಿಗೂ, ಪಾತ್ರಗಳನ್ನು ಬೆಳಗುವುದಕ್ಕೆ ಒಹಳ 5 6 |