ಪುಟ:ಕಾದಂಬರಿ ಸಂಗ್ರಹ.djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಜಾಪಿತಿ, ಮ-ಉಗಾಯವೇನು ಆಶಯವೇನು, ಅವಳನ್ನು ಮೆಲ್ಲಗೆ ಯಾರೂ ಇಲ್ಲದಕಡೆಗೆ ಒಂದು ನಿಮಿಷ ಕರತರಬೇಕು, ಕರೆದು ನಯದಿಂದ “ ಸಾವಿತ್ರಿ ” ಎಂದು ಹೇಳುತ್ತಧನೆ -- ಅಹುದು, ಆವಳನ್ನು ಯಾರೂ ಇಲ್ಲದಕಡೆಗೆ ಕರತರುವುದೆಂತು ? ಮತ್ತೆ ಅವಳು ನಾಳೆಯದಿನ ಸಾಯಂಕಾಲದಲ್ಲಿ ಗಡಿದಂ ವೆಂಕಟರಮಣ ಸಮಿಯ ದೇವಸ್ಥಾನಕ್ಕೆ ಅವಳ ತಾಯಿಯೊಂದಿಗೆ ಬರಬಹುದು ಆದಿನ ಅಲಂಕಾರವನ್ನು ನೋಡಲು ನಮ್ಮ ಮನೆಯವರೂ ಹೊರ ಯುವರು, ಕಾ - ಅವಳು ತನ್ನ ತಾಯಿಯ ಬಳಿಯಿರುವಳಲ್ಲದೆ ನಿನ್ನ ಬಳಗೆಬರಲು ಕಾರಣವಿಲ್ಲವಲ್ಲ, ಮ-ಉರನಿಯಮಾಡಬೇಕು, ರಾ-ಅದೇನುವಾಗಬೇಳು ನೀನು ಹೇಳು ನೋಡೋಣ ಮ - ನನಗೆ ತೋರ ವದಿಲ್ಲ ಒಂದುವೇಳೆ ಯಾರನ್ನೂ ಕೂಗಿದಂತೆ ಸಾವಿತ್ರಿ ಎಂದುಕಾಗಿ, ಅವಳು ತಿರುಗಿದಾಗ ಕೈ ಸನ್ನೆಯನ್ನು ಮಾಡಿದರೆ ? ಕಾ-ಇದರಲ್ಲಿ ಎರಡು ಅಸಂಭವಗಳು. ಸಾವಿತ್ರಿಯಂದು ಕೂಗಿದಾಗ ಅವಳ ಇಬ್ಬಳೇ ತಿರುಗುವಳA ? ಕೂಗಿದವರಾರೆಂದು ಎಲ್ಲರೂ ತಿರುಗುವರು; ಮುತ್ತು ನೀನು ದೊಡ್ಡ ಹುಡುಗನಾಗಿದ್ದು ಕೈಸನ್ನೆ ಮಾಡಿದರೆ ಬರುವಳೋ ? ಅದಕ್ಕೆ ಬದಲು ತನ್ನ ತಾಯಿಯ ಸಂಗಡ ಸಿನ್ನ ಮೇಲೆ, ದೂರುಹೇಳುವಳು. ಮ-ಅದೂ ಒಳ್ಳೆಯದೇ ಅಲ್ಲವೇ ? ಅವಳ ತಾಯಿಗೆ ನಾನು ಸಾವಿತ್ರಿ ಯನ್ನು ಬಹಳವಾಗಿ ಪ್ರೀತಿಸುತ್ತೇನೆಂದು ತಿಳಿಯುವುದು. ರಾ-ಅಹುದು ನೀನು ಪೋಕರಿಯಂದು ಊರಲ್ಲೆಲ್ಲಾ ಹೇಳಿ ಸುಬೇದಾರರ ಮುಗನು ಬೀದಿಯಲ್ಲಿ ಬರುವಾಗ ತಲೆಯನ್ನು ತಗ್ಗಿಸುವಂತ ಸರುಗಳು,