ಪುಟ:ಕಾದಂಬರಿ ಸಂಗ್ರಹ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಭಿಃ ಸಿ. ಪಂಚಮ ಗುಚ್ಛ.

. 7 «L s , .34 +1 ' j kin if I + t ಆ40K ರುಣವಾದ ಬಿಸಿಲಿನ ತಾಪವನ್ನು ಸಹಿಸಲಾರದೆ ಸರ್ವ ಪ್ರಾಣಿಗಳೂ ನೆಳಲನ್ನು ಕಂಡೆಡೆಯಲ್ಲೆಲ್ಲಾ ಇ ವಿಶ್ರಮಿಸಿಕೊಳ್ಳುತ್ತಿದ್ದುವು. ಅತಿ ವೃದ್ದನಾದ ಒಬ್ಬ ಬ್ರಾಹ್ಮಣನು ಬಿಸಿಲಿನ ತಾಪವನ್ನು ಸಹಿಸಲಾರದೆ, ಬಳ, ಕಂಗೆಟ್ಟು, ಅಡಿಗಡಿಗೂ ನಿಟ್ಟುಸಿರುಗಳನ್ನು ಬಿಡುತ್ತ, ಶಂಕರೀದುರ್ಗದ ರಾಜ ಬೀದಿಯಲ್ಲಿ ನಿಧಾನವಾಗಿ ಹೋಗುತ್ತಿದ್ದನು. ಬರಬರುತ್ತ ಆಯಾಸವು ಹೆಚ್ಚಿತು. ವೃದ್ದನಿಗೆ ಇನ್ನು ಮುಂದೆ ನಡೆಯುವುದು ಕಷ್ಟಸಾಧ್ಯ ವಾಯಿತು ? ಸಸಿಾಪದಲ್ಲಿ, ದಟ್ಟವಾಗಿಯ, ಕೋಮಲವಾಗಿಯ, ಬೆಳೆದಿದ್ದ ಬಂದು ಮರವನ್ನು ನೋಡಿ, ಅದರ ಸಾರವನ್ನೆದಿದನು. ಆ ಮರದ ತಂಪಾದ ನೆಳಲನ್ನು ಸೇರಿ, ತನ್ನ ಗಂಟನ್ನು ಸಮೀಪದಲ್ಲಿಟ್ಟು ಕೂ೦ಡು ವಿಶ್ರಮಿಸಿಕೊಳ್ಳುತ್ತಿದ್ದನು. ಹಾಗೆಯೇ ನಿದಿಸಲಾರಂಭಿಸಿದನು. ಎಚತ ನೋಡುವಾಗೈ ಸರಾಸ್ತಮಾನವಾಗುತ್ತಿತ್ತು ! ಬೆಚ್ಚು ಬಿದ್ದವನಂತೆದ್ದು, “ ಆದರೇನು ಈ ಸ್ಥಳದಲ್ಲಿ ನನ್ನ ಪರಿಚಿತರಾರೂ ಇಲ್ಲ ! ನಾನೆಲ್ಲಿಗೆ ಹೋಗಬೇಕು ? ಏನು ಮಾಡಲಿ ? ರಾತ್ರಿಯನ್ನು ಕಳಯು ವುದು ಹೇಗೆ ? ದೇವ ! ನೀನೇ ಗತಿ ? " ಎಂದು ನಾನಾ ವಿಧವಾಗಿ ಗೊಣಗುಟ್ಟಲಾರಂಭಿಸಿದನು. ಪ್ರಬಲನಾದ ದಿನಮಣಿದು ಮರೆಯಾದುದನ್ನು ಕಂಡು “ ಕಣವು ಕಾದವೇಳೆಯಲ್ಲಿಯೆ ಬಡಿಯಬೇಕು " ಎಂಬ ಸಾಮತಿಯನ್ನು ಅನುಸರಿ ಸಿದುವುದೋ ಎಂಬಂತೆ ಕತ್ತಲೆಯು, ಎಲ್ಲಿಯ ಆವರಿಸುತ್ತಲಿತ್ತು. ಜನರೆಲ್ಲರೂ ತಂತಮ್ಮ ಮನೆಗಳಿಗೆ ಹೋಗುತ್ತಿದ್ದರು ಪಾಪ! ಆ ವೃದ್ದನು ಮಾತ್ರ ಬಹುವ್ಯಸನಾಕ್ರಾಂತನಾಗಿದ್ದನು ! ಹಾಗೆಯೇ ಸ್ವಲ್ಪ ಹೊತ್ತು ಆಲೋಚಿಸಿ, ಅಲ್ಲಿಂದೆದ್ದು, ಸಮೀಪದಲ್ಲಿ ಕಾಣಿಸುತ್ತಿದ್ದ ಒಂದು ಮನೆಯ ಹತ್ತಿರಕ್ಕೆ ಹೋದನು.