ಪುಟ:ಕಾದಂಬರಿ ಸಂಗ್ರಹ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ ನಿರಂಕುಶವಾಗಿತ್ತು. ಅಂತಹ ಕಾಲದಲ್ಲಿ ಶಾಂತತೆಂದು ಸುಖಾನುಭವವನ್ನು ಹೊಂದದಿರುವುದಾವುದು ? ಜೆರಚೋಗಾದಿ ದುರಾಚಾರಿಗಳ, ಗಂಭೀರ ಕಾರತತ್ಪರರೂ, ವಿನಾ ಮತ್ತಾರು ತಾನೆ ಆ ಸಮಯದಲ್ಲಿ ಹೊರ ಹೊರಡುವರು. ಎಲ್ಲರೂ ಕೇವಲ ನಿದಾಭಿಭೂತರಾಗಿರಲು ನಮ್ಮ ವೃದ್ದನು ಮೆಲ್ಲನೆ ಎದ್ದನು, ಸುತ್ತಲೂ ನೋಡಿದನು. ಬಾಗಿಲ ಸವಿಾಪಕ್ಕೆ ಹೋದನು. ತನ್ನ ಕಟಪ್ರದೇಶದಲ್ಲಿದ್ದ ಬೀಗದ ಕೈಗಳ ಸರವನ್ನು ತೆಗೆ ಗನು ! ನಿಶ್ಯಬ್ದವಾಗಿ ಬಾಗಿಲನ್ನೂ ತೆಗೆದುಕೊಂಡು ಒಳ ಹೊಕ್ಕನು. ಇದೇನು ವಿಪರ್ಯಾಸ ! ಶುದ್ಧ ಸತ್ನಿ ಕನಂತೆ ತೋರುತ್ತಿದ್ದ ವೃದ್ದ ಬ್ರಾಹ್ಮಣರು ತಸ್ಕರವಾಗಿರುವಂತಿರುವುನಲ್ಲಾ : ತೆರಾಗೆ ಸರನೆ ನೀನು ಸಭ್ಯನೆಂದು ಮೋಸಹೋಗಿ ಇದುವರೆಗೂ ನಿನ್ನಲ್ಲಿ ಅವರಿಗುಂಟಾಗಿರುವ ಛಕ್ತಿ ವಿಕಾಸಕ್ಕೆ ಇದೀಗ ಪರಿಣಾಮ ! ಈಗ ತಾನೆ -ನಾಲ್ಕಾರು ಘಳಿಗೆ ಗಳ ಹಿಂದೆ, ಆರತಿಯನ್ನು ನೋಡಿದರೆ ಮನವು ಮರುಗುವಂತಿದ್ದಿತೋ ಅದೇ ಆ ಮನುಷ್ಯನು ಈಗ ಮಾಡುತ್ತಿರುವ ಕೃತ್ಯವನ್ನು ನೋಡಿದರೆ, ಈ ಪ್ರಪಂಚದಲ್ಲಿ ನಂಬಿಕೆಯ೦ಬುದೆಲ್ಲಿದೆ ? ಅ ರನ್ನು ನಂಬುವುದು ? ಕಾಲಗತಿಯ ವಿಚಿತ, ವ್ಯಾಪಾರದಿಂದ ಏನೇನಾಗುವುದೋ ಇಲ್ಲವಾಭ ? ಆ ಕಳ್ಳನು ಕೂಠಡಿಯೊಳಗೆ ಪ್ರವೇಶಿಸಿಯೇ ಬಿಟ್ಟನು, ಕಳ್ಳನೊಂದಿಗೆ ಒಂದು ದಿನವೂ ಇತ್ತು. ಅದರ ಸಹಾಯದಿಂದ ಮನೆಯ ಎಲ್ಲಾ ಭಾಗಗಳನ್ನ ಹುಡುಕುತ್ತಾ ಇದ್ದೆನು. ಆದರೂ ಏನ ನೂ ತೆಗೆದುಕೊಂಡಂತೆ ಕಾಣಲಿಲ್ಲ, ಏಕೆ ? ಏನೂ ಸಿಗಲಿಲ್ಲವೆ ? ಮಹದೈಕೃ ಲ್ಯವಂತನ ಮನೆಗೆ ನುಗ್ಗಿ ಏನೂ ಸಿಗಲಿಲ್ಲವೆ ? ಛೇ ! ಛೇ !! ಇದೇನು ಆಸ್ಟ್ರವಾಗಿದೆ !!! ಅವನನ್ನು ಅಡ್ಡಿಪಡಿಸುವವರೇ ಇಲ್ಲದೆ ಇರುವಲ್ಲಿ ಕೈಗೆ ಸಿಕ್ಕಿದುದನ್ನು ಎತ್ತಿ ಈAಂಡು ಹೋಗುವುದನ್ನು ಬಿಟ್ಟು ಏನೇನೋ ನೋಡುತ್ತಾ ಸುಮ್ಮನೆ ತಿರುಗುತ್ತಿರುವನು ! ಇವನೇನು ಕಳ್ಳನೇ ? ಕಸಟಸಂಧಿವಿಗ್ರಹಿಯೋ ? ಅಥವಾ ಹುಚ್ಚನೋ ? ಏನು ? ಆರಾದರೂ ಆಗಲಿ, ಅಂತು ಆತನು ಏನನ್ನೂ ಅಪಹರಿಸಿಲ್ಲ. ಹಾಗಾದರೆ ವೃಥಾ ಗೃಹವನ್ನು ಪ್ರವೇಶಿಸಿದುದೇಕೆ ? ಏತಕ್ಕಾದರೂ ಆಗಲಿ, ಮನೆಯ ಇತಿ