ಪುಟ:ಕಾದಂಬರಿ ಸಂಗ್ರಹ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀ ಸಂಗ್ರಹ. - ಈ ಮಾತುಗಳನ್ನು ಕೇಳಿ ಮೊದಲನೆಯವನಿಗೆ ಸ್ವಲ್ಪ ಸಿಟ್ಟು ಬಂದಂತೆ ತೋರುತ್ತಿದೆ ! ಅವನು “ ಹೌದಯ್ಯಾ ! ಹೌದು ! ! ನನ್ನಂತಹ ಅಂಜುಬುರುಕರಿಂದ ಏನಾಗುವುದು ? ನಿನ್ನಂತಹ ಧೀರರು, ಇಂತಹ ಅಸಾ ಧಾರಣ ಸಾಮರ್ಥ್ಯವುಳ್ಳವರು~ ಎಂದಂದು ಮನುವಿನ ಕಡೆ ಕೈ ತೋರಿಸಿ “ ಇದ್ದರೆ ಸಾಕು ! ಎಂತಹ ಆಗಬಾರದ ಕಲಸವಾದರೂ ಅತ್ಯಲ್ಪ ಕಾಲದಲ್ಲಿ ಪೂರ್ತಿಯಾಗುತ್ತೆ. ಹೀಗೆ ಮನಸ್ಸಿಯಾಗಿ ಕುಡಿದು ಹುಚ್ಚು ಹುಚ್ಚಾಗಿ ಬೊಗಳುತ್ತಿರುವಾಗ ಕಾಳಿಚರಣನಂತಹವನೇನಾದರೂ ಕಂಡು ಇಂತಹ ವಿಚಿತಮೃಗವು ಅವನ ಬಲೆಯಲ್ಲಿ ಬಿದ್ದರೆ ಆಗದರ ಪರಿಣಾಮವು ಬಹಳ ನೆಟ್ಟಗಾಗುತ್ತೆ. ನಾನೇನಯ್ಯಾ ಕೈಯಲ್ಲಾಗದವನು ! ” ಎಂದಂದನು, ಎರಡನೆಯವನು :- ಹೌದಪ್ಪಾ ! ಏನು ಮ ದಕ್ಕಾಗದೆ ? ಎಲ್ಲವೂ ಅಭ್ಯಾಸ ! ಕುಡಿದು ಪ್ರಜ್ಞೆಯಿಲ್ಲದೆ ಬಿದ್ದ ಕಾಲದಲ್ಲಿ ವಿವೇಚನಾ ಶಕ್ತಿಯಿರುವುದುಂಟೇನು ? ಸದ್ಯಕ್ಕೆ ಇವನೊಬ್ಬನಲ್ಲದೆ ನಮ್ಮ ಗುಂಪಿ ನಲ್ಲಿ ಸ್ನಾರಪ್ಪ ಇಂತಹ ಕುಡಿಕರು, ಇವನನ್ನು ಅನೇಕ ವೇಳ ಗುಂಪಿ ನಿಂದ ಹೊರಡಿಸಬೇಕೆಂದು ಎಷ್ಟೋ ಪ್ರಯತ್ನ ಮಾಡಿದೆವು. ಒಂದೊಂದು ವೇಳೆ ಈ ಕುಡಿತದ ಮಹತ್ವದಿಂದ ಅನೇಕ ಕಲಸಗಳ) ಕಟ್ಟು ಹಾಳಾ ಗಿವೆ. ಎಂತೆಂತಹ ಗುಟ್ಟುಗಳ ಬಯಲಾಗಿವೆ ! ಇಷ್ಟಾದರೂ ಮುಂಡೇ ಮಗನ ಎದೆ ಕಲ್ಲಿಗಿಂತಲೂ ಗಟ್ಟಿ ನೋಡಯ್ಯಾ ! ಎಂತಹ ಕೆಲಸಕ್ಕಾದರೂ ಎದೆ ಚಾಚಿಕೊಂಡು ನಿಲ್ಲುತ್ತಾನಲ್ಲದೆ ಹಿಂದೆಗೆಯುವುದಿಲ್ಲ ! ! ಅದಕ್ಕಾ ಗಿಯೇ ನಮ್ಮ ಯಜಮಾನನೂ ಕೂಡ ಇವನನ್ನು ಬಿಡುವ ವಿಷಯದಲ್ಲಿ ಹಿಂದೆಗೆಯುವುದು. ” ಮೊದಲನೆಯವನು :- ಮುಂಡೇಗಂಡ ಧೈರ್ಯ ಶಾಲಿನೊ ಹೌದು ! ಅವರನ್ನು ಹಿಡುಕೊಲಡು ಒರೆದಿವಸ ನೋಡ್ತೀಯ ? ಎಂತಹ ಸಾಹಸ ಮಾಡ್ಡ ! ಆ ಹುಡುಗಿಯರನ್ನು ಎರಡು ಸಣ್ಣ ಕೂಸುಗಳನ್ನು ತಂದಂತ ತಂದನಲ್ಲ ಏನು ಮಾಡೋದು ! ಅನೇಕ ಚಿತ್ತಾರಗಳನ್ನು ಒಂದು ಮಸಿ ನುಂಗಿತು ಎಂಬ ಗಾದೆಯಂತೆ ಈ ಕುಡಿತ ನೋಂದಿಲ್ಲ ದಿದ್ದಿ ದ್ದರೆ ಎಲ್ಲವೂ ನೆಟ್ಟಗಿರುತ್ತಿತ್ತು.