ಪುಟ:ಕಾದಂಬರಿ ಸಂಗ್ರಹ.djvu/೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವಿಲಾಸಿನಿ ಮೇಧಾಶಕ್ತಿಯನ್ನು ಪ್ರಾಮುಖ್ಯವಾಗಿರಿಸಿಕೊಂಡಿರುವರೋ, ಅವರಿಗೆ ಶಾರೀರಿಕ ಮವೇ ವಿಶಾ:ತಿ, ಆರಿಗೆ ಅತ್ಯಂತ ಶಾರೀರಕ ಕ್ರಮವೇ ಮುಖ್ಯ ಸಾಧನವಾಗಿರುತ್ತದೆ, ಅವರಿಗೆ ಗಾಢನಿದೆಯೆ ವಿಶಾ೦ತಿ. ದರಿದರಿಗೂ, ಜುಗುಪ್ಪನ್ನಿತರಿಗೂ, ದುಃಖಿಗಳಿಗೂ, ದುರ್ವ್ಯಸನಿಗಳಿಗೂ, ಸಂತೋಷ ಮತ್ತು ಶಾಂತತೆಯೆ ವಿಶಾ೦ತಿ, ಪಾಯಶಃ ಕ್ಷಣಭಂಗುರ ಗಳಾದ ಪಾಪಂಚಿಕ ಸುಖಸಂತೋಷಗಳಲ್ಲಿ ನಿಮಗ್ನರಾಗಿ ದುರಹಂಕಾರ ದಿಂದ ಮೆರೆಯುವ ಪ್ರಮಾರಿಗೆ ಒಂದೊಂದು ವೇಳೆ ವ್ಯಸನವೇ ವಿಶಾಂತಿ ಕರವಾಗಿರುತ್ತೆಯಾದರೂ, ಆ ವಿಶಾಂತಿಯನ್ನು ಕೇವಲ ತಾತ್ಕಾಲಿಕ ಸಮಾ ಧಾನವೆಂದು ಕರೆಯುವುದೇ ಉಚಿತವಾಗಿರುವಂತಿದೆ. ಇಂತಹ ಈ ಅಮೋಘವಾದ ವಿಶ್ರಾಂತಿಯೆಂಬುದು ಕಾಲಾನುಗುಣವಾದ ರೂಪಾಂತರ ವನ್ನು ಹೊಂದಿ ಸಕಲtಾಣಿಗಳಿಗೂ, ತನ್ನನುಭವವನ್ನೀಯಲು ಸಿದ್ದವಾಗಿ ದ್ದರೂ ಕೂಡ ಈ ನಕ್ಷರವಾದ ಪ್ರಪಂಚದಲ್ಲಿ ಶಾಶ್ವತವಲ್ಲದಿದ್ದರೂ, ಕ್ಷಣಕಾಲವಾದರೂ ಶಾಂತಿ ಸುಖರೂಪವಾದ ಈ ಅದರ ಕುರುಹನ್ನೆ ಅರಿ ಯದ ಒಂದೇ ಒಂದು ವರ್ಗವಿರುವುದು, ವಾಚಕರೆ, ಅವರಾರು ? ಇಂತಹ ಅಮೋಘವಾದ ವಿಶ್ರಾಂತಿಯಿಂದ ದೂರೀಕರಿಸಲ್ಪಟ್ಟವರಾರು ? ಅವರೇ, ಈ ಪ್ರಪಂಚದಲ್ಲಿ, ತಮ್ಮ ಜೀವನ ಕಾಲವನ್ನೆಲ್ಲ ಭಯಂಕರ ಪಾಪಕೃತ್ಯ ಗಳಲ್ಲಿ ವಿನಿಯೋಗಿಸುವ ದುಷ್ಟರು ! ಅವರಿಗೆ ಆವವಿಧವಾದ ವಿಶಾಂತಿಯ ದುರ್ಲಭವೆ!! ಅವರೆಂದೆಂದಿಗೂ ನಿಶಾಂತರೂ ಅಲ್ಲ, ವಿಕಾಂತ ಅಲ್ಲ !! ದಿನ ಶನಾದ ಅಬ್ದ ಬಾಂಧವನು ಕಾಲಿಕಕರ್ಮ ಚರಣೆಯನ್ನು ಪೂರ್ತಿಗೊಳಿಸಿದ ಮೇಲೆ ಸರ್ವಚಿ ಎಳೆಗಳ ಆ ವಿಶಾ೦ತಿಸ.ಭವನ್ನು ಅನುಭವಿಸುವುದು ಅತ್ಯವಶ್ಯಕವೆಂದೂ, ತಾನೂ ಕೂಡ ಈ ಲೋಕ ಯಾತೆ ಯು ಪೂರ್ತಿಯಾದುದರಿಂದ ವಿಶಾ೦ತನಾಗಲೋಸುಗ ಹೋಗುತ್ತಿರು ವನೆಂದೂ, ಹೇಳುತ್ತಿರುವನೋ ಎಂಬಂತೆ ಪಶ್ಚಿಮದಿಕ್ಕಟಾಭಿಮುಖನಾದನು, ಸರ್ವಪಾಣಿಗಳೂ ತಮ್ಮ ತಮ್ಮ ನಿವಾಸಾಭಿಮುಖವಾಗಿ ಹೋಗುತ್ತಿದ್ದುವು. ಆವುದೋ ಒಬ್ಬ ವ್ಯಕ್ತಿಯು ಮಾತ ಜನಭರಿತವಾದ ಊರನ್ನು ಬಿಟ್ಟು ಸಮೀಪದಲ್ಲಿದ್ದ ಅರಣ್ಯವನ್ನು ಪ್ರವೇಶಿಸುತ್ತಿದ್ದನು.