ಪುಟ:ಕಾಮದ ಗುಟ್ಟು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭ ದಿನವೇ ಮಾಡಿದರಾಯಿತು ಎಂದು ನಮ್ಮ ಮೂಢಸಮಾಜದ ಸ್ತ್ರೀಯರು ಮೂರುದಿನಗಳೂ ಸ್ನಾನಮಾಡದೇ ಇರುವರು. ಅದು ಅಪಾಯಕಾರಕ ರೂಢಿಯು, ಸ್ವಚ್ಛತೆಯನ್ನು ಸರ್ವ ರೀತಿಯಿ೦ದಲ ಆಗ ಕಾಪಾಡಿಕೊಳ್ಳ ಬೇಕು. ದೇಹಷ್ಟವಾದ ನೀರಿನಿಂದ ಯೋನಿಯನ್ನು ದಿನಕ್ಕೆ ಎರಡು ಮೂರುಸಲ ತೊಳೆದು ಕೊಳ್ಳಬೇಕು. ಮುಟ್ಟಾಗುವ ಮೊದಲೇ ಸುಮಾರು ಒಂದೂವರೆಮೊಳ ಉದ್ದ, ಒ೦ದು ಮೊಳ ಅಗಲವುಳ್ಳ ತೆಳ್ಳಗಿನ ಬಿಳಿಯ ೩-೪ ಲಂಗೋಟಗಳನ್ನು ತಯಾರಿಸಿ ಇಟ್ಟುಕೊಂಡಿರಬೇಕು. ಅವುಗಳನ್ನು ಸ್ವಚ್ಛ ವಾಗಿ ಸಾಬೂನಿನಿಂದ ಒಗೆದಿರಬೇಕು. ಅವುಗಳಲ್ಲಿ ಒಂದನ್ನು ಗುಂಡಾಗಿ ಸುರುಳಿ ಸುತ್ತಿ ಮುಟ್ಟಾದಾಗ ಯೋನಿಯ ಮೇಲೆ ಇಟ್ಟು ಲ೦ಗೋಟಿ ಕಟ್ಟಿ ದಂತೆ ಕಟ್ಟಿಕೊಳ್ಳಬೇಕು. ಒಂದು ರಜಸ್ಸಿನಿಂದ ಹೊಲಸಾದ ಕೂಡಲೆ ಮತ್ತೊಂದನ್ನು ಧರಿಸಿ ಹೊಲಸಾದುದನ್ನು ಒಗೆಯಬೇಕು. ಬೇರೆ ಲಂಗೋ ಔಯನ್ನು ಧರಿಸುವ ಮೊದಲೇ ಯೋನಿಯನ್ನು ದೇಹೋಷ್ಣ ನೀರಿನಿಂದ ತೊಳೆಯುವದೊಳ್ಳೇದು. ಈ ಲ೦ಗೋಟಿಗಳನ್ನು ಕಟ್ಟಿಕೊಳ್ಳವ ರೂಢಿಯು ಎಷ್ಟೋ ಹೆಂಗಸರಿಗೆ ಗೊತ್ತಿದ್ದರೂ ಅವುಗಳ ಸ್ವಚ್ಛತೆಯ ಕಡೆಗೆ ಲಕ್ಷ ಕೊಡು ವವರು ಯಾರೂ ಇಲ್ಲ. ಬಚ್ಚಲಮನೆಯ ಮೂಲೆಯಲ್ಲಿ, ಜೇಡ, ಇಲ್ಲಣ ಗಳು ಮನೆಕಟ್ಟಿರುವ ಗೂಡಿನಲ್ಲಿ ಇವುಗಳನ್ನಿಟ್ಟಿರುವರು. ಮುಟ್ಟಾದಾಗ ಹಾಗೆ ತೆಗೆದುಕೊಂಡು ಕಟ್ಟಿ ಕೊಂಡುಬಿಡುವರು ಇದರಿಂದ ಎಷ್ಟೋ ರೋಗಕ್ರಿಮಿಗಳು ಗರ್ಭಾಶಯವನ್ನು ಹೊಕ್ಕು ಮುಂದೆ ಬಹಳ ವ್ಯಾಧಿಗಳಿಗೆ ಕಾರಣವಾಗುವವು. ಕೆಲವರಂತೂ ಲ೦ಗೋಟಿಯನ್ನು ಹಾಕಿಕೊಳ್ಳುವದೇ ಇಲ್ಲ. ಮೂರುದಿನಗಳವರೆಗು ಉಟ್ಟ ಸೀರೆಯಿಂದಲೇ ರಜನ್ನು ಒರೆಸಿ ಕೊಳ್ಳುತ್ತಿರುತ್ತಾರೆ. ಅಂಥವರು ತಮ್ಮ ಹಿತವನ್ನೂ ಮುಂದಿನ ಸಂತತಿಯ ಹಿತವನ್ನೂ ಯೋಚಿಸಿ ಮೇಲಿನ ನಿಯಮಗಳನ್ನು ಪಾಲಿಸಬೇಕು. ಮುಟ್ಟಾ ದವರು ಹೊಲಸು ನೀರಿನ ಹಳ್ಳ ಕೆರೆಗಳಿಗೆ ಹೋಗಿ ಸ್ನಾನಮಾಡುವದನ್ನು ತಪ್ಪಿಸಬೇಕು. ರಜಸ್ಸು ೫ ದಿನಗಳವರೆಗೆ ಹರಿಯುತ್ತಿದ್ದರೂ ಮೂರೇ ದಿನಗ ಇಲ್ಲಿ ಶುದ್ಧರಾದೆವೆಂದು ತಿಳಿಯುವರು. ಕೆಲವರಂತೂ ರಾತ್ರಿ '೩ ಘಂಟೆಗೆ ಮುಟ್ಟಾದರೆ ದೇವರ ದಯೆಯಿಂದ ಒಂದುದಿನ ಹೋಯಿತೆಂದು ಮುಂದೆ ಎರಡೇ ದಿನ ಹೊರಗೆ ಕೂತು ಕೊಳ್ಳುವರು. (ಅವರ ಶುದ್ಧಾಶುದ್ದತೆಯ ವಿಷ