ಪುಟ:ಕಾಮದ ಗುಟ್ಟು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ನೇ ಪ್ರಶ್ನೆ :- ಎಷ್ಟು ದಿನಕ್ಕೊಂದುಸಲ ಸಂಭೋಗಿಸ ಬಹುದು ? ಉತ್ತರ:-ವೀರ್ಯಾ೦ಗಗಳು ಕೇವಲ ಸಂತಾನೋತ್ಪತ್ತಿಗೇ ಹುಟ್ಟಿಲ್ಲ ವೆಂದು ಹೇಳಿ ದೇವೆ. ಏಕೆಂದರೆ ಸಂಭೋಗದಲ್ಲಿ ಮಿತಿಯನ್ನು ಅನುಸರಿಸುತ್ತ ಹೋದಂತೆ ಮನುಷ್ಯನ ತೇಜಸ್ಕೂ, ಬುದ್ಧಿಶಕ್ತಿಯೂ, ಬೆಳೆಯುತ್ತಿರುವದನ್ನು ನ ವು ನೋಡುವೆ. ಸಾಮಾನ್ಯವಾಗಿ ಅಂಡಗಳಲ್ಲಿ ವೀರ್ಯವು ಉತ್ಪನ್ನ ವಾಗಲು ಪ್ರಾರಂಭವಾಗುವ ಸಮಯದಲ್ಲಿಯೇ ವಿವೇಕವೂ ಉದಯವಾಗು ವದು. ಸಿಯಲ್ಲಿ ಮುಟ್ಟು ಪ್ರಾರಂಭವಾಗುವ ಸಮಯಕ್ಕೆ ಅವರ ವಿವೇ ಕವೂ ಕುದುರುವದು. ಅದೇ ಸಮಯದಿಂದ ಅವರು (ಸ್ತ್ರೀ ಪುರುಷರು) ಕಾವ್ಯ, ಕಲಾ, ತತ್ವಶಾಸ್ತ್ರ ಜ್ಞಾನಗಳ ಕಡೆಗೆ ಮನಸ್ಸನ್ನು ಹೊರಳಿಸಿದರೆ ವೀರ್ಯಜನನ ಶಕ್ತಿಯೇ ಅವುಗಳ ಅಭಿವೃದ್ಧಿಗೆ ಸಹಾಯಕವಾಗುವದು. ಹೀಗೆ ವ್ಯಾಸಂಗ ಅಥವಾ ಕಲಾಭ್ಯಾಸಗಳಲ್ಲಿ ಮನವನ್ನು ಮುಳುಗಿಸಿದಾಗ್ಯೂ ಸ್ವಲ್ಪ ಸ್ವಲ್ಪಾಗಿ ಹುಟ್ಟುತ್ತಿರುವ ವೀರ್ಯವು ವೀರ್ಯಾಶಯದಲ್ಲಿ ತುಂಬಿ ದಾಗ ಕನಸಿನಲ್ಲಿ ಬಹಳ ದಿನಗಳಿಗೊಮ್ಮೆ ವೀರ್ಯಸ್ಕಲನವಾದರೂ ದೇಹಕ್ಕೆ ಅಸಾ: ಏಲ್ಲ, ಹೀಗೆ ಬುದಿಯ ಕಾರ್ಯ- ಸಾಧನಗಳಲ್ಲಿ ಸದಾ ಮನವನ್ನು ತೊಡಗಿಸಿದಾಗಲೂ ಎಷ್ಟು ದಿನಗಳಿಗೊಮ್ಮೆ (ಯಾವ ರೋಗವೂ ಇಲ್ಲದಿದ್ದರೆ) ಸ್ವಪ್ನ ಸೋಲನವಾಗುವದೋ ಅಷ್ಟು ದಿನಗಳೊಮ್ಮೆ ಸಂಭೋಗವನ್ನಾಚರಿಸು ವದು ಸಹಜವೆಂದೂ (Normal) ಪ್ರಕೃತಿಯ ಅನುಮತಿ ಅಥವಾ ಸೂಚನೆ ಯೆಂದೂ ತಿಳಿದುಕೊಳ್ಳಬೇಕು. ಈ ಸಹಜವಾದ ಮಿತಿಯನ್ನು ಕಾಮ ಜೀವನದಲ್ಲಿ ತೊಡಗುವದಕ್ಕಿಂತ ಮೊದಲೇ ಸ್ವಾಭಾವಿಕ ಸ್ವ ಲನ ಗಳಿಂದ ನಿರ್ಧರಿಸಿರಬೇಕು. ಇಲ್ಲದಿದ್ದರೆ ಸಂಭೋಗ ಸಂಯಮದ ಅಭ್ಯಾಸ ವನ್ನು ಕಾಮಜೀವನದಲ್ಲಿ ಪ್ರಾರಂಭಿಸಲು ಕಷ್ಟವಾಗುವದು. ಆದ್ದರಿಂದಲೇ ಪೂರ್ವದಲ್ಲಿ, ಗೃಹಸ್ಥಾಶ್ರಮದ ಕಾಮಲೀಲೆಯನ್ನು ನಿರ್ಣಯಿಸಲಿಕ್ಕೂ ವೀರ್ಯದ ಉಪಯೋಗವನ್ನು ಸುದ್ದಿ ರಜಸ್ಸುಗಳ ಹೆಚ್ಚುಗೆಗೆ ಹಚ್ಚುವ ರೀತಿಯನ್ನು ಸಾಧಿಸಲಿಕ್ಕೂ ಮೊದಲೇ ಬ್ರಹ್ಮಚರ್ಯಾಶ್ರಮವನ್ನು ಪ್ರತಿ ಯೊಬ್ಬರೂ ಪಾಲಿಸಬೇಕಾಗಿತ್ತು.